ಮಹತ್ವಾಕಾಂಕ್ಷಿ ಉದ್ಯಮಿಗಳು ಮತ್ತು ಬಿಸಿನೆಸ್ ಮಾಲೀಕರಿಗೆ ಭಾರತದಲ್ಲಿ ಲಭ್ಯವಿರುವ ವಿವಿಧ ಬಿಸಿನೆಸ್ ಸ್ಟ್ರಕ್ಚರ್ ಬಗ್ಗೆ ಸಮಗ್ರ ಜ್ಞಾನವನ್ನು ಕಲಿಸುವ ಉದ್ದೇಶದಿಂದ ಈ ಕೋರ್ಸ್ ಡಿಸೈನ್ ಮಾಡಲಾಗಿದೆ. ಹೀಗಾಗಿ ಈ ವೀಡಿಯೊ ಕೋರ್ಸ್, ಭಾರತದಲ್ಲಿ ನಿಮ್ಮ ವ್ಯವಹಾರವನ್ನು ಕಾನೂನು ಬದ್ದವಾಗಿ ರಿಜಿಸ್ಟ್ರೇಷನ್ ಮಾಡುವುದು ಹೇಗೆ ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುತ್ತದೆ. ಅಲ್ಲದೆ ಸಂಪೂರ್ಣ ಕೋರ್ಸ್ ನೋಡಿದ ಮೇಲೆ, ನೀವು ಮಾಡುತ್ತಿರುವ ಅಥವಾ ಆರಂಭಿಸಬೇಕು ಅಂತಿರುವ ವ್ಯಾಪಾರಕ್ಕೆ ಯಾವ ಬಿಸಿನೆಸ್ ಸ್ಟ್ರಕ್ಷರ್ ಹೊಂದಿಕೆಯಾಗುತ್ತದೆ ಅನ್ನುವ ಬಗ್ಗೆ ಸಂಪೂರ್ಣ ಜ್ಞಾನ ಸಿಗುತ್ತದೆ.
ನಮ್ಮ ದೇಶದಲ್ಲಿ ಪ್ರಮುಖವಾಗಿ 6 ಬಿಸಿನೆಸ್ ಸ್ಟ್ರಕ್ಚರ್‌ಗಳಿವೆ. ಅವುಗಳು ಯಾವುವು ಅಂದರೆ, ಪ್ರೊಪ್ರೈಟರ್ ಶಿಪ್ ಬಿಸಿನೆಸ್, ಪಾರ್ಟ್ನರ್ ಶಿಪ್ ಬಿಸಿನೆಸ್, ಲಿಮಿಟೆಡ್ ಲಯಾಬಿಲಿಟಿ ಕಂಪೆನಿ, ಒನ್ ಪರ್ಸನ್ ಕಂಪೆನಿ, ಪ್ರೈವೇಟ್ ಲಿಮಿಟೆಡ್ ಕಂಪೆನಿ ಮತ್ತು ಪಬ್ಲಿಕ್ ಲಿಮಿಟೆಡ್ ಕಂಪೆನಿ. ಈ ವಿಭಿನ್ನ ಬಿಸಿನೆಸ್ ಸ್ಟ್ರಕ್ಚರ್‌ಗಳ ನಡುವಿನ ವ್ಯತ್ಯಾಸಗಳನ್ನು ಮತ್ತು ಪ್ರತಿಯೊಂದರ ಅನುಕೂಲ ಮತ್ತು ಅನಾನುಕೂಲಗಳನ್ನು ನೀವು ಇಲ್ಲಿ ಅರ್ಥಮಾಡಿಕೊಳ್ಳುತ್ತೀರಿ. ಪ್ರತಿಯೊಂದು ರೀತಿಯ ಬಿಸಿನೆಸ್ ಸ್ಟ್ರಕ್ಷರ್ ಆರಂಭಿಸಲು ಅಗತ್ಯವಿರುವ ಪಾಲಿಸೇಕಾದ ಕಾನೂನು ನಿಯಮಗಳು, ಬೇಕಾಗುವ ದಾಖಲೆಗಳ ಬಗ್ಗೆ ಇಲ್ಲಿ ಮಾಹಿತಿ ಇದೆ. ತೆರಿಗೆ ಹೊಣೆಗಾರಿಕೆಗಳು, ವಿನಾಯಿತಿಗಳು ಮತ್ತು ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳುವುದು ಸೇರಿದಂತೆ ಪ್ರತಿ ಬಿಸಿನೆಸ್ ಸ್ಟ್ರಕ್ಷರ್ ಟ್ಯಾಕ್ಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಮಾಹಿತಿಗಳು ಇಲ್ಲಿದೆ. ಅಲ್ಲದೆ ಮಾಲೀಕರು ಮೃತರಾಧಾಗ ಅಥವಾ ಮಾರಾಟದ ಸಂದರ್ಭದಲ್ಲಿ ಮಾಲೀಕತ್ವವನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳುತ್ತೀರಿ.
ಅಂತಿಮವಾಗಿ, ಸ್ಟಾರ್ಟ್ - ಅಪ್, ಬಿಸಿನೆಸ್ ಅಥವಾ ಕಂಪೆನಿ ಕಟ್ಟುವ ನಿಮ್ಮ ಕನಸಿಗೆ ಯಾವ ಬಿಸಿನೆಸ್ ಸ್ಟ್ರಕ್ಷರ್ ಉತ್ತಮವಾಗಿ ಹೊಂದಿಕೊಳ್ಳುತ್ತದೆ ಅನ್ನುವುದರ ಕುರಿತು ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಜ್ಞಾನವನ್ನು ನೀಡಿ ನಿಮ್ಮನ್ನು ಸಜ್ಜುಗೊಳಿಸುತ್ತದೆ. ಹಾಗಾಗಿ ಸಂಪೂರ್ಣ ಕೋರ್ಸ್ ವೀಕ್ಷಿಸಿ. ನಂತರ ನಿಮ್ಮ ಬಿಸಿನೆಸ್‌ನ ರಿಜಿಸ್ಟ್ರೇಷನ್ ಮಾಡಿಕೊಳ್ಳಿ. ಈ ಮೂಲಕ ನಿಮ್ಮ ಬಿಸಿನೆಸ್ ಅನ್ನು ಕಾನೂನುಬದ್ಧಗೊಳಿಸಿ ಯಶಸ್ವಿಯಾಗಿ.
ಭಾರತದಲ್ಲಿರುವ 6 ಬಿಸಿನೆಸ್ ಸ್ಟ್ರಕ್ಚರ್ ಮತ್ತು ರಿಜಿಸ್ಟ್ರೇಷನ್ ಪ್ರಕ್ರಿಯೆ, ಅವಶ್ಯಕತೆಗಳು ಮತ್ತು ಪ್ರಯೋಜನಗಳನ್ನು ತಿಳಿದುಕೊಳ್ಳುವಿರಿ
ಪ್ರೊಪ್ರೈಟರ್ ಶಿಪ್ ಬಿಸಿನೆಸ್ ಅಂದರೇನು? ಅದನ್ನು ಆರಂಭಿಸುವ ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವಿರಿ
ಪಾರ್ಟ್ನರ್ ಶಿಪ್ ಬಿಸಿನೆಸ್ ಅಂದರೇನು? ಅದನ್ನು ಆರಂಭಿಸುವ ಮತ್ತು ಅದರ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವಿರಿ
ಲಿಮಿಟೆಡ್ ಲಯಾಬಿಲಿಟಿ ಕಂಪೆನಿ ಅಂದರೇನು? ಅದರ ನೋಂದಣಿ ಪ್ರಕ್ರಿಯೆ, ವೈಶಿಷ್ಟ್ಯಗಳು, ಅನುಕೂಲಗಳನ್ನು ತಿಳಿದುಕೊಳ್ಳುವಿರಿ
ಭಾರತದಲ್ಲಿ ಒನ್ ಪರ್ಸನ್ ಕಂಪನಿ ಅಂದರೇನು? ಅದನ್ನು ಸ್ಥಾಪಿಸುವ ಹಂತಗಳನ್ನು, ಸಾಧಕ-ಬಾಧಕಗಳನ್ನು ತಿಳಿದುಕೊಳ್ಳುವಿರಿ
ಪ್ರೈವೇಟ್ ಲಿಮಿಟೆಡ್ ಕಂಪನಿ ಅಂದರೇನು? ಅದರ ರಿಜಿಸ್ಟ್ರೇಷನ್ ಹಾಗೂ ಆರಂಭಿಸುವ ಬಗ್ಗೆ ತಿಳಿದುಕೊಳ್ಳುವಿರಿ
ಪಬ್ಲಿಕ್ ಲಿಮಿಟೆಡ್ ಕಂಪನಿ ಅಂದರೇನು? ಭಾರತದಲ್ಲಿ ಅದನ್ನು ರೂಪಿಸುವ ಪ್ರಕ್ರಿಯೆ, ಅದರ ವೈಶಿಷ್ಟ್ಯಗಳು, ಅನುಕೂಲಗಳು ಮತ್ತು ಅನಾನುಕೂಲಗಳನ್ನು ತಿಳಿದುಕೊಳ್ಳುವಿರಿ
- ಭಾರತದಲ್ಲಿ ತಮ್ಮ ಸ್ವಂತ ಉದ್ಯಮ ಪ್ರಾರಂಭಿಸಲು ಬಯಸುವರು
- ಬಿಸಿನೆಸ್ ರಿಜಿಸ್ಟ್ರೇಷನ್ ಮಾಡದೆ ಇರುವ ಮಾಲೀಕರು
- ಬಿಸಿನೆಸ್ ರಿಜಿಸ್ಟ್ರೇಷನ್ ಮತ್ತು ಬಿಸಿನೆಸ್ ಸ್ಟ್ರಕ್ಚರ್ ಆಯ್ಕೆ ಕುರಿತು ಮಾರ್ಗದರ್ಶನ ನೀಡುವ ವೃತ್ತಿಪರರು
- ಬಿಸಿನೆಸ್ ರಿಜಿಸ್ಟ್ರೇಷನ್ ಬಗ್ಗೆ ಮಾಹಿತಿ ಪಡೆಯಲು ಬಯಸುವ ವಿದ್ಯಾರ್ಥಿಗಳು ಅಥವಾ ಶಿಕ್ಷಣತಜ್ಞರು
- ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ವ್ಯಕ್ತಿಗಳು


- ಭಾರತದಲ್ಲಿರುವ 6 ಬಿಸಿನೆಸ್ ಸ್ಟ್ರಕ್ಚರ್ ಗಳು ಮತ್ತು ಅವುಗಳ ನಡುವಿನ ವ್ಯತ್ಯಾಸಗಳು
- ಪ್ರತಿಯೊಂದು ಬಿಸಿನೆಸ್ ರಿಜಿಸ್ಟ್ರೇಷನ್ ಪ್ರಕ್ರಿಯೆ ಮತ್ತು ಪಾಲಿಸಬೇಕಾದ ಕಾನೂನುಗಳು
- ನಿಮ್ಮ ಬಿಸಿನೆಸ್‌ಗೆ ಯಾವ ಬಿಸಿನೆಸ್ ಸ್ಟ್ರಕ್ಚರ್ ಹೊಂದಿಕೆಯಾಗುತ್ತೆ ಅನ್ನುವ ಮಾಹಿತಿ
- ಪ್ರತಿ ಬಿಸಿನೆಸ್ ಸ್ಟ್ರಕ್ಚರ್ ಗಳಲ್ಲಿ ಟ್ಯಾಕ್ಸ್ ಕಾರ್ಯನಿರ್ವಹಣೆ
- ಮಾಲೀಕತ್ವವನ್ನು ವರ್ಗಾಯಿಸುವ ಪ್ರಕ್ರಿಯೆಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...