ಈ ಕೋರ್ಸ್ ನಲ್ಲಿ ನೀವು ಸ್ಟ್ರೀಟ್ ಫುಡ್ ಬಿಸಿನೆಸ್ ಮೂಲಕ ದೊಡ್ಡ ಮಟ್ಟದ ಆದಾಯ ಹೇಗೆ ಗಳಿಸುವುದು ಎಂದು ಕಲಿಯುವಿರಿ. ಸ್ಟ್ರೀಟ್ ಫುಡ್ ಬಿಸಿನೆಸ್ ಮೂಲಕ ತಮ್ಮ ಜೀವನವನ್ನೇ ಬದಲಾಯಿಸಿದ ಇಬ್ಬರು ಅಸಾಧಾರಣ ಮಹಿಳೆಯರಾದ ಶ್ರೀಮತಿ ಅಪೂರ್ವ ರಮೇಶ್ ಮತ್ತು ಶ್ರೀಮತಿ ಸುಧಾ ಸಿ ಮಾರ್ಗದರ್ಶನ ಮಾಡಿದ್ದಾರೆ.
ನಮ್ಮ ಮೊದಲ ಮಾರ್ಗದರ್ಶಕರಾದ ಅಪೂರ್ವ ರಮೇಶ್, ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಈ ಕೆಲಸದ ಜೊತೆ ಅತ್ಯುನ್ನತ ಶ್ರೇಣಿಯ ಫುಡ್ ಟ್ರಕ್‌ಗಳಲ್ಲಿ ಒಂದಾದ “ಬೆಂಗಳೂರು ಫುಡ್ ಟ್ರಕ್” ನಡೆಸುತ್ತಿದ್ದಾರೆ. ಇವರು ಬೆಂಗಳೂರಿನಲ್ಲಿ ಸ್ಟ್ರೀಟ್ ಫುಡ್ ಬಿಸಿನೆಸ್ ಮಾಡ್ತಾ ಇದ್ದಾರೆ. ಸರಿಯಾದ ಫುಡ್ ಟ್ರಕ್ ಆಯ್ಕೆಮಾಡುವುದು, ಪ್ರಮುಖ ಸ್ಥಳಗಳನ್ನು ಗುರುತಿಸುವುದು, ಮೆನು ರಚಿಸುವುದು, ಬೆಲೆಗಳು, ಕಾರ್ಪೊರೇಟ್ ಈವೆಂಟ್‌ಗಳಿಗೆ ಅಡುಗೆ ಮಾಡುವುದು, ಪ್ರವೀಣ ಬಾಣಸಿಗರನ್ನು ನೇಮಿಸಿಕೊಳ್ಳುವುದು ಮತ್ತು ಪಾರ್ಟ್ ಟೈಮ್‌ನಲ್ಲಿ ಇದನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಅಪೂರ್ವ ಅಮೂಲ್ಯವಾದ ಮಾಹಿತಿಗಳನ್ನು ಹಂಚಿಕೊಳುತ್ತಾರೆ.
ಬೆಂಗಳೂರಿನ ಬನಶಂಕರಿಯಲ್ಲಿ ಕೇವಲ 5,000 ರೂಪಾಯಿಗಳಲ್ಲಿ ಸ್ಟ್ರೀಟ್ ಫುಡ್ ಬಿಸಿನೆಸ್ ಆರಂಭಿಸಿ ಚೇತರಿಸಿಕೊಂಡ ಉದ್ಯಮಿ ಸುಧಾ ಸಿ ನಮ್ಮ ಎರಡನೇ ಮಾರ್ಗದರ್ಶಕರು. ಇಂದು, ಇವರ ತಳ್ಳುಗಾಡಿಯು ರುಚಿಕರವಾದ ಮಾಂಸಾಹಾರಿ ಭಕ್ಷ್ಯಗಳನ್ನು ಒದಗಿಸುತ್ತದೆ. , ಇದರಿಂದ ಪ್ರತಿದಿನ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಸುಧಾ ಅವರ ಈ ಕಥೆಯು ಮನೆಯ ಜವಾಬ್ದಾರಿಗಳ ಜೊತೆಗೆ ಬಿಸಿನೆಸ್ ಮಾಡಿ ಅಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿನಿಂತು ಗೆಲ್ಲುವುದು ಹೇಗೆ ಅನ್ನುವುದನ್ನು ವಿವರಿಸುತ್ತದೆ.
ಈ ಸಮಗ್ರ ಕೋರ್ಸ್ ಪಾರ್ಟ್ ಟೈಮ್ ಮತ್ತು ಫುಲ್ ಟೈಮ್ ಸ್ಟ್ರೀಟ್ ಫುಡ್ ಬಿಸಿನೆಸ್ ನಡುವಿನ ವ್ಯತ್ಯಾಸಗಳು, ತಯಾರಿ, ಉತ್ತಮ ಸ್ಥಳ ಆಯ್ಕೆ ಮಾಡುವುದು, ಬಂಡವಾಳ, ಅನುಮತಿ ಮತ್ತು ಪರವಾನಗಿಗಳಂತಹ ಕಾನೂನುಬದ್ಧತೆಗಳು, ಉಪಕರಣಗಳು ಮತ್ತು ಮೂಲಸೌಕರ್ಯಗಳ ಬಗ್ಗೆ ತಿಳಿದುಕೊಳ್ಳುವುದು, ಮೆನುಗಳನ್ನು ರಚಿಸುವುದು ಮತ್ತು ಬೆಲೆಗಳನ್ನು ನಿರ್ಧರಿಸವುದು, ಸಿಬ್ಬಂದಿ ನೇಮಕಾತಿ ಮತ್ತು ತರಬೇತಿ, ಕಚ್ಚಾ ವಸ್ತುಗಳ ಸಂಗ್ರಹಣೆ ತಂತ್ರಗಳು, ಯುನಿಟ್ ಎಕನಾಮಿಕ್ಸ್, ಬಿಸಿನೆಸ್ ಪ್ಲಾನ್ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಸ್ಟ್ರೀಟ್ ಫುಡ್ ಬಿಸಿನೆಸ್ ಜಗತ್ತನ್ನು ಅರಿತು, ಅಲ್ಲಿ ನಿಮ್ಮ ಉದ್ಯಮ ಪ್ರಯಾಣವನ್ನು ಆರಂಭಿಸಲು ಇರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ಈ ಕೋರ್ಸ್ ಖರೀದಿಸಿ ಮತ್ತು ನಿಮ್ಮ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕಿ.
ಸ್ಟ್ರೀಟ್ ಫುಡ್ ಬಿಸಿನೆಸ್ ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಪಾರ್ಟ್ ಟೈಮ್ v/s ಫುಲ್ ಟೈಮ್ ಸ್ಟ್ರೀಟ್ ಫುಡ್ ಬಿಸಿನೆಸ್
ವ್ಯಾಪಾರ ಆರಂಭಿಸುವ ಮೊದಲು ತಿಳಿದುಕೊಳ್ಳಬೇಕಾದ ವಿಷಯ
ಸ್ಥಳ ಆಯ್ಕೆ
ಬಂಡವಾಳ, ಅನುಮತಿ ಮತ್ತು ಪರವಾನಗಿ
ಸಲಕರಣೆಗಳು ಮತ್ತು ಬಿಸಿನೆಸ್ ಸೆಟಪ್
ಮೆನು ಮತ್ತು ಬೆಲೆ ತಂತ್ರ
ಸಿಬ್ಬಂದಿ ನೇಮಕ ಮತ್ತು ತರಬೇತಿ
ಕಚ್ಚಾ ವಸ್ತುಗಳ ಖರೀದಿ
ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್
ಯುನಿಟ್ ಎಕನಾಮಿಕ್ಸ್
ಬಿಸಿನೆಸ್ ಪ್ಲಾನ್
ಸವಾಲುಗಳು ಮತ್ತು ಸಾರಾಂಶ
- ಸ್ಟ್ರೀಟ್ ಫುಡ್ ಬಿಸಿನೆಸ್ ಆರಂಭಿಸಲು ಬಯಸುವ ಜನರು
- ಸ್ಟ್ರೀಟ್ ಫುಡ್ ಬಿಸಿನೆಸ್ ವಿಸ್ತರಿಸಲು ಬಯಸುವ ಉದ್ಯಮಿಗಳು
- ಸ್ಟ್ರೀಟ್ ಫುಡ್ ವ್ಯವಹಾರವನ್ನೇ ದೊಡ್ಡ ಅವಕಾಶವಾಗಿ ಬಳಸಿಕೊಳ್ಳಲು ಬಯಸುವವರು
- ತಮ್ಮ ಬಂಡವಾಳವನ್ನು ವೈವಿಧ್ಯಗೊಳಿಸಲು ಬಯಸುವರು
- ಫುಡ್ ಇಂಡಸ್ಟ್ರಿ ಬಿಸಿನೆಸ್‌ನಲ್ಲಿ ಆಸಕ್ತಿ ಹೊಂದಿರುವವರು
- ಸ್ಟ್ರೀಟ್ ಫುಡ್ ಉದ್ಯಮದ ಬೇಸಿಕ್ ಅಂಶಗಳು ಮತ್ತು ಅದರ ಲಾಭದಾಯಕತೆಯ ಸಾಮರ್ಥ್ಯ
- ಪಾರ್ಟ್ ಟೈಮ್ ಮತ್ತು ಫುಲ್ ಟೈಮ್ ಸ್ಟ್ರೀಟ್ ಫುಡ್ ವ್ಯಾಪಾರ ಮಾದರಿಗಳ ವ್ಯತ್ಯಾಸ
- ಸೂಕ್ತ ಸ್ಥಳಗಳನ್ನು ಗುರುತಿಸಲು ಪರಿಣಾಮಕಾರಿ ಸ್ಥಳ ಸಂಶೋಧನಾ ತಂತ್ರ
- ಕಚ್ಚಾ ಸಾಮಗ್ರಿಗಳ ಖರೀದಿ ಮತ್ತು ಸಂಗ್ರಹಣೆ ಪ್ರಕ್ರಿಯೆ
- ಸ್ಟ್ರೀಟ್ ಫುಡ್ ಉದ್ಯಮಿಗಳು ಎದುರಿಸುವ ಸವಾಲು ಮತ್ತು ಎದುರಿಸುವ ತಂತ್ರ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...