ಈ ಕೋರ್ಸ್ ಒಳಗೊಂಡಿದೆ
ಕಾರೊಂದನ್ನು ಖರೀದಿಸಬೇಕು ಎಂಬುದು ಬಹಳಷ್ಟು ಮಂದಿಯ ಕನಸಾಗಿರುತ್ತದೆ. ಮಧ್ಯಮ ವರ್ಗದ ಜನರು ಕಾರ್ ಅನ್ನು ಖರೀದಿಸುವ ಕುರಿತಂತೆ ಬಹಳಷ್ಟು ವರ್ಷಗಳ ಮೊದಲಿನಿಂದಲೇ ಲೆಕ್ಕಾಚಾರ ಆರಂಭಿಸಿರುತ್ತಾರೆ. ಬಹಳಷ್ಟು ಮಂದಿಗೆ ಸ್ವಂತ ಮನೆಯನ್ನು ಹೊಂದಬೇಕು ಎಂಬ ಆಸೆಯ ನಂತರದ ಸ್ಥಾನದಲ್ಲಿ ಸ್ವಂತ ಕಾರ್ ತೆಗೆದುಕೊಳ್ಳಬೇಕು ಎಂಬ ಆಸೆ ಇರುತ್ತದೆ.
ಆದರೆ ಇಂದು ಕನಸಿನ ಕಾರ್ ಅನ್ನು ಕೊಳ್ಳಲು ಬಹಳಷ್ಟು ವರ್ಷಗಳ ಲೆಕ್ಕಾಚಾರವನ್ನು ಮಾಡುತ್ತ ಕನಸನ್ನು ಕಾಣುವ ಅವಶ್ಯಕತೆ ಇಲ್ಲ. ಬಹಳಷ್ಟು ವರ್ಷಗಳ ವರೆಗೆ ಹಣವನ್ನು ಕೂಡಿಡುವ ಅವಶ್ಯಕತೆ ಸಹ ಇಲ್ಲ. ಯಾಕೆಂದರೆ ಇಂದು ಬ್ಯಾಂಕ್‌ಗಳು ವಿವಿಧ ಬಗೆಯ ಅತ್ಯಾಕರ್ಷಕ ಕಾರ್ ಲೋನ್ ನೀಡುತ್ತವೆ. ಇದರಿಂದ ಕಾರ್ ಡೀಲರ್ ಗೆ ಮುಂಗಡವಾಗಿ ಪೂರ್ಣ ಬೆಲೆಯನ್ನು ಪಾವತಿ ಮಾಡದೆ ವಾಹನವನ್ನು ಖರೀದಿಸಲು ನಿಮಗೆ ಅದು ಅನುವು ಮಾಡಿಕೊಡುತ್ತದೆ.
ಬ್ಯಾಂಕ್ ಗಳು ನಿಮಗೆ ಲೋನ್ ರೂಪದಲ್ಲಿ ನಿಮ್ಮ ಕನಸಿನ ಕಾರ್ ಅನ್ನು ಖರೀದಿ ಮಾಡಲು ಸಹಾಯ ಮಾಡುತ್ತದೆ. ನೀವು ಈ ಸಾಲವನ್ನು ಒಂದೇ ಬಾರಿಗೆ ಮರುಪಾವತಿಸಬೇಕಾಗಿಲ್ಲ. ಮಾಸಿಕ ಪಾವತಿಗಳಲ್ಲಿ ನಿಮ್ಮ ಸಾಲವನ್ನು ಮರುಪಾವತಿಸಲು ನೀವು ಸುಲಭವಾಗಿ ಸಮಯದ ಚೌಕಟ್ಟನ್ನು ಆಯ್ಕೆ ಮಾಡಬಹುದು.
ಕಾರ್ ಲೋನ್ ಕುರಿತಂತೆ ಉತ್ತಮ ಮಾರ್ಗದರ್ಶನವನ್ನು ನೀಡುವ ನಿಟ್ಟಿನಲ್ಲಿ ffreedom ಅಪ್ಲಿಕೇಶನ್ ಅತ್ಯುತ್ತಮ ಕಾರ್ ಲೋನ್ ಕೋರ್ಸ್ ಅನ್ನು ಸಿದ್ಧಪಡಿಸಿದೆ. ನೀವೂ ಸಹ ಕಾರ್ ಕೊಳ್ಳುವ ಮುನ್ನ ಈ ಕೋರ್ಸ್ ಅನ್ನು ವೀಕ್ಷಿಸಿ ಅದರಿಂದ ಲಾಭವನ್ನು ಪಡೆದುಕೊಳ್ಳಬಹುದು.