ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಜಗದೀಶ್ ಕೆ ಎಸ್, ಹಿರಿಯ ಪ್ರಗತಿಪರ ಕೃಷಿಕ. ಹುಟ್ಟಿದ್ದು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಪುಟ್ಟ ಗ್ರಾಮದಲ್ಲಿ. ಓದಿದ್ದು ಬರೀ ಎಸ್ಎಸ್ಎಲ್ಸಿ. ಆದ್ರೆ ಕೃಷಿ ಸಾಧನೆ ವಿಚಾರಕ್ಕೆ ಬಂದ್ರೆ ಅಲ್ಪಾವಧಿ ಬೆಳೆಯಲ್ಲೇ ಅಗ್ರಗಣ್ಯ ಸ್ಥಾನಕ್ಕೆ ಏರಿದವರಿವರು. ಹೌದು..ಬಡ ಕುಟುಂಬದಲ್ಲಿ ಹುಟ್ಟಿದ ಜಗದೀಶ್ 10ನೇ ತರಗತಿ ಮುಗಿದ ನಂತರ ನೇರವಾಗಿ ಕೃಷಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಮೊದಲೆಲ್ಲ ಸಾಂಪ್ರದಾಯಿಕ ಬೆಳೆಯನ್ನೇ ಬೆಳೆಯುತ್ತಿದ್ದ ಇವರು ಕಾಲಕ್ರಮೇಣ ನೂತನ ಬೆಳೆಗಳ ಮಾರುಹೋದರು. ಕೃಷಿ ಮೇಲಿದ್ದ ಅತೀವ ಆಸಕ್ತಿ ಇವರನ್ನ ಸದಾ ಹೊಸ ಬೆಳೆಯನ್ನ ಹುಡುಕುವಂತೆ...
ಜಗದೀಶ್ ಕೆ ಎಸ್, ಹಿರಿಯ ಪ್ರಗತಿಪರ ಕೃಷಿಕ. ಹುಟ್ಟಿದ್ದು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಪುಟ್ಟ ಗ್ರಾಮದಲ್ಲಿ. ಓದಿದ್ದು ಬರೀ ಎಸ್ಎಸ್ಎಲ್ಸಿ. ಆದ್ರೆ ಕೃಷಿ ಸಾಧನೆ ವಿಚಾರಕ್ಕೆ ಬಂದ್ರೆ ಅಲ್ಪಾವಧಿ ಬೆಳೆಯಲ್ಲೇ ಅಗ್ರಗಣ್ಯ ಸ್ಥಾನಕ್ಕೆ ಏರಿದವರಿವರು. ಹೌದು..ಬಡ ಕುಟುಂಬದಲ್ಲಿ ಹುಟ್ಟಿದ ಜಗದೀಶ್ 10ನೇ ತರಗತಿ ಮುಗಿದ ನಂತರ ನೇರವಾಗಿ ಕೃಷಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಮೊದಲೆಲ್ಲ ಸಾಂಪ್ರದಾಯಿಕ ಬೆಳೆಯನ್ನೇ ಬೆಳೆಯುತ್ತಿದ್ದ ಇವರು ಕಾಲಕ್ರಮೇಣ ನೂತನ ಬೆಳೆಗಳ ಮಾರುಹೋದರು. ಕೃಷಿ ಮೇಲಿದ್ದ ಅತೀವ ಆಸಕ್ತಿ ಇವರನ್ನ ಸದಾ ಹೊಸ ಬೆಳೆಯನ್ನ ಹುಡುಕುವಂತೆ ಪ್ರೇರೇಪಿಸುತ್ತಿತ್ತು. ಹೀಗಾಗಿ ಎಲ್ಲೇ ಮಾಹಿತಿ ಸಿಕ್ಕರು ಅಲ್ಲಿಗೆ ಲಗ್ಗೆ ಇಡ್ತಿದ್ರು. ಈ ಓಡಾಟದ ಪರಿಣಾಮ ಮೂರೇ ತಿಂಗಳಲ್ಲಿ ದೊಡ್ಡ ಆದಾಯ ಹೊತ್ತು ತರುವ ಚಿಯಾ ಮತ್ತು ಬ್ರಾಕಲಿ ಬೆಳೆ ಇವರ ಭೂಮಿಲಿ ಬೆಳೆಯುವಂತಾಯಿತು. ಚಿಯಾ ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವ ಬೆಳೆ. ಬ್ರಾಕಲಿ ಎಕ್ಸಾಟಿಕ್ ವೆಜಿಟೇಬಲ್. ಪ್ರತೀ ವರ್ಷವೂ ಈ ಎರಡು ಬೆಳೆಯನ್ನ ತಪ್ಪದೇ ಬೆಳೆಯುತ್ತಾರೆ ಜಗದೀಶ್. ಮೊದಲ ಮೂರು ತಿಂಗಳು ಚಿಯಾ ಬೆಳೆದುಕೊಂಡರೆ ನಂತರದ ಮೂರು ತಿಂಗಳು ಬ್ರಾಕಲಿ ಬೆಳೆಯುತ್ತಾರೆ. ತದನಂತರದ ಮೂರು ತಿಂಗಳು ಬೇರೆ ತರಕಾರಿ ಬೆಳೆ ಬೆಳೆಯುವ ಮೂಲಕ ಒಂದೇ ಭೂಮಿಯಲ್ಲಿ ವರ್ಷಕ್ಕೆ ಮೂರು ಬೆಳೆ ಮೂರು ಆದಾಯ ಕಂಡುಕೊಂಡಿದ್ದಾರೆ ಜಗದೀಶ್.
... ಪ್ರೇರೇಪಿಸುತ್ತಿತ್ತು. ಹೀಗಾಗಿ ಎಲ್ಲೇ ಮಾಹಿತಿ ಸಿಕ್ಕರು ಅಲ್ಲಿಗೆ ಲಗ್ಗೆ ಇಡ್ತಿದ್ರು. ಈ ಓಡಾಟದ ಪರಿಣಾಮ ಮೂರೇ ತಿಂಗಳಲ್ಲಿ ದೊಡ್ಡ ಆದಾಯ ಹೊತ್ತು ತರುವ ಚಿಯಾ ಮತ್ತು ಬ್ರಾಕಲಿ ಬೆಳೆ ಇವರ ಭೂಮಿಲಿ ಬೆಳೆಯುವಂತಾಯಿತು. ಚಿಯಾ ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವ ಬೆಳೆ. ಬ್ರಾಕಲಿ ಎಕ್ಸಾಟಿಕ್ ವೆಜಿಟೇಬಲ್. ಪ್ರತೀ ವರ್ಷವೂ ಈ ಎರಡು ಬೆಳೆಯನ್ನ ತಪ್ಪದೇ ಬೆಳೆಯುತ್ತಾರೆ ಜಗದೀಶ್. ಮೊದಲ ಮೂರು ತಿಂಗಳು ಚಿಯಾ ಬೆಳೆದುಕೊಂಡರೆ ನಂತರದ ಮೂರು ತಿಂಗಳು ಬ್ರಾಕಲಿ ಬೆಳೆಯುತ್ತಾರೆ. ತದನಂತರದ ಮೂರು ತಿಂಗಳು ಬೇರೆ ತರಕಾರಿ ಬೆಳೆ ಬೆಳೆಯುವ ಮೂಲಕ ಒಂದೇ ಭೂಮಿಯಲ್ಲಿ ವರ್ಷಕ್ಕೆ ಮೂರು ಬೆಳೆ ಮೂರು ಆದಾಯ ಕಂಡುಕೊಂಡಿದ್ದಾರೆ ಜಗದೀಶ್.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ