ಈ ಕೋರ್ಸ್, ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ನೀವು ನಿಮ್ಮ ಹ್ಯಾಂಡಿಕ್ರಾಫ್ಟ್ ಬಿಸಿನೆಸ್‌ನ ಜಗತ್ತಿನ ಮೂಲೆ ಮೂಲೆಗೆ ತಲುಪಿಸಿ ಯಶಸ್ವಿಯಾಗಲು ಸಂಪೂರ್ಣ ಮಾರ್ಗದರ್ಶನ ನೀಡುತ್ತದೆ. ಸೋಷಿಯಲ್ ಮೀಡಿಯಾ ಬಳಸಿ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಮಾಡಿ ಸಕ್ಸಸ್ ಆಗಿರುವ ನೀಲಿ ಲೋಹಿತ್ ಮತ್ತು ಸೃಷ್ಠಿ ನರೇಗಲ್ ನೇತೃತ್ವದ ಈ ಕೋರ್ಸ್ ಈ ಉದ್ಯಮದ ಬಗ್ಗೆ ನಿಮಗೆ ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ಒದಗಿಸುತ್ತದೆ.
ಡಿಜಿಟಲ್ ಅಥವಾ ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಈಗಿನ ಟ್ರೆಂಡ್ ಅಷ್ಟೇ ಅಲ್ಲ.. ಅನಿವಾರ್ಯ ಕೂಡ ಹೌದು. ಇವತ್ತು ಎಲ್ಲಾ ಉದ್ಯಮಗಳು ಕೂಡ ತಮ್ಮ ಪಾಡಕ್ಟ್ ಅಥವಾ ಸರ್ವೀಸ್‌ಗಳ ಜಾಹೀರಾತಿಗೆ ಡಿಜಿಟಲ್ ಮಾರ್ಕೆಟಿಂಗ್‌ಗಳ ಮೊರೆ ಹೋಗಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್, ಯೂಟ್ಯೂಬ್ ನಂತ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ನಿಮ್ಮ ಹ್ಯಾಂಡಿಕ್ರಾಫ್ಟ್ ಉದ್ಯಮವನ್ನ ಜಗತ್ತಿನ ಮೂಲೆ ಮೂಲೆಗೆ ತಲುಪಿಸುವುದಕ್ಕೆ ಸಾಧ್ಯ. ಹೀಗಾಗಿ ಈ ಮಾರ್ಕೆಟಿಂಗ್ ಟೆಕ್ನಿಕ್‌ಗಳನ್ನು ನಿಮಗೆ ಕಲಿಸಿಕೊಡುವ ಉದ್ದೇಶದಿಂದ ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ.
ಮೊದಲಿಗೆ ಹ್ಯಾಂಡಿಕ್ರಾಫ್ಟ್ ಬಿಸಿನೆಸ್‌ಗೆ ಸೋಷಿಯಲ್ ಮೀಡಿಯಾ ಅಥವಾ ಡಿಜಿಟಲ್ ಮಾರ್ಕೆಟಿಂಗ್ ಯಾಕೆ ಮುಖ್ಯ ಅನ್ನುವುದನ್ನು ಈ ಕೋರ್ಸ್ ನಿಮಗೆ ಮನದಟ್ಟ ಮಾಡಿಸುತ್ತದೆ. ಮಾರ್ಕೆಟಿಂಗ್ ಮಾಡುವುದಕ್ಕೆ ಸೋಷಿಯಲ್ ಮೀಡಿಯಾ ಬಳಸುವುದಕ್ಕೂ ಮೊದಲಿನ ಸಿದ್ಧತೆ ಹೇಗಿರಬೇಕು? ಮಾರೆಕಟಿಂಗ್ ಮಾಡುವುದಕ್ಕೆ ಯಾವ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಬೆಸ್ಟ್ ಅನ್ನುವುದನ್ನು ಸಂಪೂರ್ಣವಾಗಿ ಈ ಕೋರ್ಸ್ ಕಲಿಸಿಕೊಡುತ್ತದೆ. ಸೋಷಿಯಲ್ ಮೀಡಿಯಾ ಹೇಗೆ ವರ್ಕ್ ಆಗುತ್ತದೆ? ಅದರ ವರ್ಕ್ ಸ್ಟಕ್ಚರ್ ಏನು ಅನ್ನುವುದನ್ನೂ ಕೂಡ ಈ ಕೋರ್ಸ್ ಕಲಿಸುತ್ತದೆ.
ಮಾರ್ಕೆಟಿಂಗ್ ಮಾಡುವುದಕ್ಕೆ ಯೂಟ್ಯೂಬ್ ಫೇಸ್ ಬುಕ್, ಇನ್ಸ್ಟ್ರಾಗ್ರಾಂ ಮತ್ತು ವಾಟ್ಸ್ ಆ್ಯಪ್ ಮೊದಲಾದ ಪ್ಲಾಟ್ ಫಾರ್ಮ್‌ಗಳನ್ನು ಬಳಸೋದು ಹೇಗೆ ಅನ್ನುವುದನ್ನು ಪ್ರಾಕ್ಟಿಕಲ್ ಆಗಿ ಇಲ್ಲಿ ಕಲಿಸಿ ಕೊಡಲಾಗುತ್ತದೆ. ಆಡಿಯನ್ಸ್ ಎಂಗೇಜ್ ಮೆಂಟ್ ಬಗ್ಗೆಯೂ ಸಂಪೂಣವಾಗಿ ಹೇಳಿಕೊಡಲಾಗುತ್ತದೆ. ಹೀಗೆ ಈ ಸಮಗ್ರ ಕೋರ್ಸ್ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ನಿಮಗೆ ಇಂಚಿಂಚನ್ನು ಹೇಳಿಕೊಡುತ್ತದೆ.
ಯಶಸ್ವಿ ಹ್ಯಾಂಡಿಕ್ರಾಫ್ಟ್ ಉದ್ಯಮಿಗಳಾದ ನೀಲಿ ಲೋಹಿತ್ ಮತ್ತು ಸೃಷ್ಠಿ ನರೇಗಲ್ ಅವರ ಅಪಾರ ಅನುಭವದ ಪ್ರಯೋಜನ ಪಡೆದು ಯಶಸ್ವಿ ಹ್ಯಾಂಡಿಕ್ರಾಫ್ಟ್ ಉದ್ಯಮಿಯಾಗಲು ನಿಮಗೆ ಈ ಕೋರ್ಸ್ ಅತ್ಯುತ್ತಮ ಆಯ್ಕೆ. ಹೀಗಾಗಿ ಈಗಲೇ ಸಂಪೂರ್ಣ ಕೋರ್ಸ್ ವೀಕ್ಷಿಸಿ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಈ ಮಾಡ್ಯೂಲ್‌ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಅಂದರೆ ಏನು? ಇದು ಯಾಕೆ ಮುಖ್ಯ ಅನ್ನುವುದನ್ನು ತಿಳಿದುಕೊಳ್ಳುತ್ತೀರಿ
ಈ ಮ್ಯಾಡ್ಯೂಲ್ ನಲ್ಲಿ ನಮ್ಮ ಈ ಕೋರ್ಸ್‌ನಲ್ಲಿರುವ ಮಾರ್ಗದರ್ಶಕರು ಅವರ ಸಾಧನೆಗಳ ಬಗ್ಗೆ ತಿಳಿದುಕೊಳ್ಳುತ್ತೀರಿ
ಈ ಮಾಡ್ಯೂಲ್ ನಲ್ಲಿ ಹ್ಯಾಂಡಿಕ್ರಾಫ್ಟ್ ಬಿಸಿನೆಸ್‌ಗೆ ಡಿಜಿಟಲ್ ಮಾರ್ಕೆಟಿಂಗ್ ಯಾಕೆ ಬೇಕು? ಮಾರ್ಕೆಟಿಂಗ್ ಮಾಡಲು ಯಾವ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಉತ್ತಮ ಅನ್ನುವ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಸೋಷಿಯಲ್ ಮೀಡಿಯಾ ಬಳಕೆಗೆ ಪೂರ್ವಸಿದ್ಧತೆ, ಕಂಟೆಂಟ್ ವಿಧಗಳು, ಪ್ರಮೋಷನ್ ಟೆಕ್ನಿಕ್ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಹ್ಯಾಂಡಿಕ್ರಾಫ್ಟ್ ಪಾಡಕ್ಟ್ ಗಳಿಗೆ ಬ್ರ್ಯಾಂಡ್ ಯಾಕೆ ಮುಖ್ಯ? ಬ್ರ್ಯಾಂಡಿಂಗ್ ನಿಂದ ಸಿಗುವ ಬೆನಿಫಿಟ್ ಏನು ಅನ್ನುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಸೋಷಿಯಲ್ ಮೀಡಿಯಾ ವರ್ಕ್ ಸ್ಟಕ್ಚರ್, ಕಾಪಿರೈಟ್, ಕಂಟೆಂಟ್ ಪೋಸ್ಟಿಂಗ್ ಮೊದಲಾದವುಗಳ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸುವುದು ಹೇಗೆ? ಕಂಟೆಂಟ್ ಗಳನ್ನು ಅಪ್ ಲೋಡ್ ಮಾಡುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಹ್ಯಾಂಡಿ ಕ್ರಾಫ್ಟ್ ಬಿಸಿನೆಸ್ ಮಾರ್ಕೆಟಿಂಗ್‌ಗೆ ಫೇಸ್ ಬುಕ್ ಬಳಕೆ ಮಾಡುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಹ್ಯಾಂಡಿ ಕ್ರಾಫ್ಟ್ ಬಿಸಿನೆಸ್ ಮಾರ್ಕೆಟಿಂಗ್‌ಗೆ ಇನ್ಸ್ಟ್ರಾಗ್ರಾಂ ಬಳಕೆ ಮಾಡುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಈ ಮಾಡ್ಯೂಲ್ ನಲ್ಲಿ ಹ್ಯಾಂಡಿ ಕ್ರಾಫ್ಟ್ ಬಿಸಿನೆಸ್ ಮಾರ್ಕೆಟಿಂಗ್‌ಗೆ ವಾಟ್ಸ್ ಆ್ಯಪ್ ಬಳಕೆ ಮಾಡುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಲ್ಲಿ ಆಡಿಯನ್ಸ್ ಎಂಗೇಜ್ ಮೆಂಟ್ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಡಿಜಿಟಲ್ ಮೀಡಿಯಾ ಮಾರ್ಕೆಟಿಂಗ್ ನಿಂದ ನಿಮಗೆ ಸಿಕ್ಕಿದ ಯಶಸ್ಸನ್ನು ಅಳೆಯುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ವೇಳೆ ಎದುರಾಗುವ ಸವಾಲುಗಳು ಮತ್ತು ಅದನ್ನು ಎದುರಿಸುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ
- ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಆರಂಭಿಸಲು ಬಯಸುವವರು
- ಈಗಾಗ್ಲೇ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಮಾಡುತ್ತಿರುವವರು
- ಹ್ಯಾಂಡಿಕ್ರಾಫ್ಟ್ ವಸ್ತುಗಳನ್ನು ತಯಾರಿಸುವ ಹವ್ಯಾಸಿಗಳು
- ಹ್ಯಾಂಡಿಕ್ರಾಫ್ಟ್ ವಸ್ತು ಪ್ರದರ್ಶಕರು ಮತ್ತು ಮಾರಾಟಗಾರರು
- ಗ್ರಾಮೀಣ ಪ್ರದೇಶಗಳಲ್ಲಿ ಇರುವ ಕುಶಲಕರ್ಮಿಗಳು
- ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಕಲಿಯಲು ಬಯಸುವರು
- ಡಿಜಿಟಲ್ ಮಾರ್ಕೆಟಿಂಗ್ ಸ್ಟ್ರಾಟಜಿ ರೂಪಿಸುವ ಜ್ಞಾನ
- ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಬಗ್ಗೆ ಮಾಹಿತಿ
- ಆಕರ್ಷಕ ಕಂಟೆಂಟ್ ಕ್ರಿಯೇಟ್ ಮಾಡುವ ತಂತ್ರ
- ಸಮಯ ನಿರ್ವಹಣೆ ಮತ್ತು ಪೋಸ್ಟಿಂಗ್ ವೇಳಾಪಟ್ಟಿ
- ಹ್ಯಾಶ್‌ಟ್ಯಾಗ್ ಮತ್ತು SEO ತಂತ್ರಗಳು
- ಆಡಿಯನ್ಸ್ ಎಂಗೇಜ್‌ಮೆಂಟ್
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...