ಫಂಗೈ ಕೃಷಿಯ ಜಗತ್ತಿನಲ್ಲಿ ರೋಮಾಂಚಕಾರಿ ಪ್ರಯಾಣವನ್ನು ಕೈಗೊಳ್ಳಲು ನೀವು ಸಿದ್ಧರಿದ್ದೀರಾ? ಹಾಗಿದ್ದರೆ, ನಿಮ್ಮದೇ ಸ್ವಂತ ಅಣಬೆ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಸಂಪೂರ್ಣ ಪ್ರಾಯೋಗಿಕ ಮಾರ್ಗದರ್ಶಿಯನ್ನು ನಿಮಗೆ ಒದಗಿಸಲು ನಮ್ಮ ಈ ಆಯ್ಸ್ಟರ್ ಮಶ್ರೂಮ್ ಫಾರ್ಮಿಂಗ್ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಆರೋಗ್ಯಕರ ಮತ್ತು ಸಾವಯವ ಆಹಾರಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಅಣಬೆ ಕೃಷಿಯು ಗಮನಾರ್ಹ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದರ ಜೊತೆಗೆ ಜಾಗತಿಕ ಮಶ್ರೂಮ್ ಮಾರುಕಟ್ಟೆಯು 2027 ರ ವೇಳೆಗೆ ಸುಮಾರು $69.3 ಶತಕೋಟಿ ಮೌಲ್ಯವನ್ನು ತಲುಪುವ ನಿರೀಕ್ಷೆಯಿದೆ. ಭಾರತದಲ್ಲಿ, ಅಣಬೆ ಉದ್ಯಮವು 2020-2025ರ ಅವಧಿಯಲ್ಲಿ 11.4% CAGR ನಲ್ಲಿ ಬೆಳೆಯುವ ನಿರೀಕ್ಷೆಯಿದೆ. ಈ ಉದ್ಯಮದಲ್ಲಿ ಹೂಡಿಕೆ ಮಾಡಲು ಬಯಸುವ ಉದ್ಯಮಿಗಳಿಗೆ ಇದು ಲಾಭದಾಯಕ ಅವಕಾಶವನ್ನು ಒದಗಿಸುತ್ತದೆ.
ನಮ್ಮ ಈ ಆಯ್ಸ್ಟರ್/ಸಿಂಪಿ ಮಶ್ರೂಮ್ ಫಾರ್ಮಿಂಗ್ ಕೋರ್ಸ್, ಅಣಬೆ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ಪ್ರಾಯೋಗಿಕ ಜ್ಞಾನವನ್ನು ನಿಮಗೆ ಒದಗಿಸುತ್ತದೆ. ಫಾರ್ಮ್ ಅನ್ನು ಸೆಟ್ ಅಪ್ ಮಾಡುವುದು, ಸರಿಯಾದ ಸಬ್ಸ್ಟ್ರೇಟ್ ಆಯ್ಕೆ ಮಾಡುವುದು, ಕೊಯ್ಲು ಮಾಡುವುದು, ಪ್ಯಾಕೇಜಿಂಗ್ ಮಾಡುವುದು ಮತ್ತು ನಿಮ್ಮ ಅಣಬೆಗಳನ್ನು ಮಾರಾಟ ಮಾಡುವುದು ಮುಂತಾದ ಎಲ್ಲವನ್ನೂ ಈ ಕೋರ್ಸ್ ಒಳಗೊಂಡಿದೆ. ಸಾಮಾನ್ಯ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಮತ್ತು ಇಳುವರಿಯನ್ನು ಹೆಚ್ಚಿಸುವ ಬಗ್ಗೆ ಕೂಡ ಮಾಡ್ಯೂಲ್‌ಗಳನ್ನು ಈ ಕೋರ್ಸ್ ಒಳಗೊಂಡಿದೆ.
ಈ ಕೋರ್ಸ್ ಅನ್ನು ಪಡೆದುಕೊಳ್ಳುವ ಮೂಲಕ, ನೀವು ಅಣಬೆ ಕೃಷಿ ಬಿಸಿನೆಸ್ ಬಗ್ಗೆ, ಅದರ ಅವಕಾಶಗಳ ಬಗ್ಗೆ ಮತ್ತು ಯಶಸ್ವಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ನಡೆಸಲು ಅಗತ್ಯವಿರುವ ವಿವಿಧ ಹಂತಗಳ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಪಡೆಯುತ್ತೀರಿ.
ನಿಮ್ಮ ಎಲ್ಲಾ ಸಂದೇಹವನ್ನು ಪರಿಹರಿಸಲು ನಿಮಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. ffreedom appನಲ್ಲಿ ಇಂದೇ ನಮ್ಮ ಆಯ್ಸ್ಟರ್/ಸಿಂಪಿ ಮಶ್ರೂಮ್ ಫಾರ್ಮಿಂಗ್ ಕೋರ್ಸ್‌ಗೆ ನೋಂದಾಯಿಸಿ ಮತ್ತು ಉದ್ಯಮಶೀಲತೆಯತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.
ಸಿಂಪಿ ಮಶ್ರೂಮ್ ಕೃಷಿಯ ಮೂಲಭೂತ ಅಂಶಗಳನ್ನು ಕಲಿಯಿರಿ, ಸರಿಯಾದ ಸಬ್ ಸ್ಟೇಟ್ ಅನ್ನು ಗುರುತಿಸುವುದರಿಂದ ಹಿಡಿದು ಗರಿಷ್ಠ ಇಳುವರಿಗಾಗಿ ಸೂಕ್ತವಾದ ವಾತಾವರಣದ ವರೆಗೆ ಎಲ್ಲವನ್ನು ತಿಳಿಯಿರಿ.
ಉತ್ತಮ ಗುಣಮಟ್ಟವನ್ನು ಮತ್ತು ಇಳುವರಿಯನ್ನು ಖಚಿತಪಡಿಸಿಕೊಳ್ಳಲು ಅಣಬೆ ಕೃಷಿ ಘಟಕಗಳ ವಿನ್ಯಾಸದ ಬಗ್ಗೆ ಮತ್ತು ಕೊಯ್ಲು ತಂತ್ರಗಳ ಬಗ್ಗೆ ವಿವರವಾಗಿ ತಿಳಿಯಿರಿ.
ತಾಜಾತನವನ್ನು ಕಾಪಾಡುವ ಮತ್ತು ಶೆಲ್ಫ್ ಜೀವಿತಾವಧಿಯನ್ನು ವಿಸ್ತರಿಸುವ ತಂತ್ರಗಳನ್ನು ಒಳಗೊಂಡಂತೆ ಅಣಬೆ ಕೃಷಿಯಲ್ಲಿ ಬಳಸಲಾಗುವ ವಿಭಿನ್ನ ಪ್ಯಾಕಿಂಗ್ ವಿಧಾನಗಳನ್ನು ಅನ್ವೇಷಿಸಿ.
ಸಿಂಪಿ ಅಣಬೆಗಳ ಸ್ಪಾವ್ನಿಂಗ್ ಪ್ರಕ್ರಿಯೆಯ ಬಗ್ಗೆ ಮತ್ತು ಯಶಸ್ವಿ ಮಶ್ರೂಮ್ ಕೃಷಿಗಾಗಿ ಉತ್ತಮ-ಗುಣಮಟ್ಟದ ಸ್ಪಾನ್ ಅನ್ನು ಹೇಗೆ ರಚಿಸುವುದು ಎಂಬುದರ ಬಗ್ಗೆ ತಿಳಿಯಿರಿ.
ಮಶ್ರೂಮ್ ಕೃಷಿಯಲ್ಲಿ ಅತ್ಯುತ್ತಮ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು ಹೇಗೆ ನಿರ್ಮಿಸುವುದು ಮತ್ತು ನಿರ್ವಹಿಸುವುದು ಸೇರಿದಂತೆ ಡಾರ್ಕ್ ರೂಮ್ ವ್ಯವಸ್ಥೆಯ ಪ್ರಯೋಜನಗಳನ್ನು ಅನ್ವೇಷಿಸಿ.
ಗರಿಷ್ಟ ಎಫಿಶಿಯೆನ್ಸಿ ಗಾಗಿ ಕ್ರಾಪಿಂಗ್ ಕೋಣೆಯನ್ನು ವಿನ್ಯಾಸಗೊಳಿಸುವುದು ಮತ್ತು ನಿರ್ವಹಿಸುವುದು ಸೇರಿದಂತೆ ಇದರಲ್ಲಿ ಬಳಸುವ ವಿವಿಧ ಕ್ರಾಪಿಂಗ್ ರೂಮ್ ವ್ಯವಸ್ಥೆಗಳ ಬಗ್ಗೆ ತಿಳಿಯಿರಿ.
ಮಶ್ರೂಮ್ ಉತ್ಪನ್ನಗಳ ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ಮತ್ತು ನಿಮ್ಮ ಅಣಬೆ ಕೃಷಿ ಬಿಸಿನೆಸ್ ಅನ್ನು ಬೆಂಬಲಿಸುವ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ತಿಳಿಯಿರಿ.

- ತಮ್ಮ ಆದಾಯದ ಸ್ಟ್ರೀಮ್ ಗಳನ್ನು ವೈವಿಧ್ಯಗೊಳಿಸಲು ಬಯಸುವ ಅಥವಾ ಕೃಷಿ ಮಾಡಲು ಪರ್ಯಾಯ ಬೆಳೆಗಳನ್ನು ಹುಡುಕುತ್ತಿರುವ ರೈತರು
- ಅಣಬೆ ಫಾರ್ಮ್ ಅನ್ನು ಹೊಸ ಬಿಸಿನೆಸ್ ಆಗಿ ಪ್ರಾರಂಭಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು
- ಸುಸ್ಥಿರ ಕೃಷಿ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
- ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ಆಸಕ್ತಿ ಹೊಂದಿರುವ ಸರ್ಕಾರೇತರ ಸಂಸ್ಥೆಗಳು (NGOಗಳು) ಅಥವಾ ಸಮುದಾಯ ಸಂಸ್ಥೆಗಳು
- ಶೆಫ್ ಗಳು ಅಥವಾ ಆಹಾರ ವಿಜ್ಞಾನಿಗಳಂತಹ ಆಹಾರ ಉದ್ಯಮದಲ್ಲಿನ ವೃತ್ತಿಪರರು



- ಸಿಂಪಿ ಅಣಬೆ ಕೃಷಿ ತಂತ್ರಗಳ ಬಗ್ಗೆ ಪ್ರಾಯೋಗಿಕ ಮಾಹಿತಿ
- ಸಾಮಾನ್ಯ ರೋಗಗಳು ಮತ್ತು ಕೀಟಗಳನ್ನು ಹೇಗೆ ತಡೆಗಟ್ಟುವುದು ಮತ್ತು ನಿರ್ವಹಿಸುವುದು ಎಂಬುದರ ಕುರಿತು ಜ್ಞಾನವನ್ನು ಪಡೆದುಕೊಳ್ಳಿ
- ಮಾರುಕಟ್ಟೆ, ಹಣಕಾಸು ಯೋಜನೆ ಮತ್ತು ನಿರ್ವಹಣೆ ಸೇರಿದಂತೆ ಅಣಬೆ ಕೃಷಿಯ ಬಿಸಿನೆಸ್ ಅಂಶಗಳನ್ನು ತಿಳಿದುಕೊಳ್ಳಿ
- ಸಿಂಪಿ ಅಣಬೆಗಳ ಪೌಷ್ಟಿಕಾಂಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ
- ಅಣಬೆ ಕೃಷಿಯ ಪರಿಸರದ ಪ್ರಭಾವವನ್ನು ವಿವರವಾಗಿ ಅರ್ಥಮಾಡಿಕೊಳ್ಳಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಮನಸ್ವಿ ಹೆಗಡೆ ಕೆ. ಎನ್., ಯುವ ಉದ್ಯಮಿ ಶಿವಮೊಗ್ಗದ ಕೆರೆಕೊಪ್ಪದವರು. ಓದಿನ ನಂತರ ಬೆಂಗಳೂರಿನಲ್ಲಿ ಕೆಲ್ಸ ಮಾಡ್ತಿದ್ರು. ಕೋವಿಡ್ ಸಮಯದಲ್ಲಿ ಹುಟ್ಟೂರಿಗೆ ಮರಳಿ ಅಣಬೆ ಮೌಲ್ಯವರ್ಧನೆಗೆ ಕೈ ಹಾಕಿದ್ರು. ಅಣಬೆ ಕೃಷಿ ನಂತ್ರ ಅಣಬೆ ಉಪ್ಪಿನಕಾಯಿ,ಕುಕ್ಕೀಸ್ ,ಪೌಡರ್ ತಯಾರಿಸಿ ಆನ್ ಲೈನ್ ಆಫ್ಲೈನ್ ನಲ್ಲಿ ಮಾರಾಟ ಮಾಡಿ ವರ್ಷಕ್ಕೆ10 ಲಕ್ಷ ಆದಾಯ ಗಳಿಸೋ ಯಶಸ್ವಿ ಉದ್ಯಮಿಯಾಗಿದ್ದಾರೆ.
ಪ್ರಸನ್ನ ಡಿ.ಸೋಜಾ, ಯಶಸ್ವಿ ಮಿಲ್ಕಿ ಮಶ್ರೂಮ್ ಕೃಷಿಕ. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ವಿದ್ಯಾಭ್ಯಾಸ ಮುಗಿದ ಬಳಿಕ ಕೆಲಸಕ್ಕೆ ಹೋಗದೇ ಕೃಷಿಗೆ ಮುಂದಾದ ಸಾಧಕ. ಕೃಷಿಯಲ್ಲಿ ಹೊಸತನ ಮಾಡಬೇಕು ಎಂದು ಯೋಚಿಸಿ ಮಿಲ್ಕಿ ಮಶ್ರೂಮ್ ಕೃಷಿ ಆರಂಭಿಸಿದ್ರು. ಅಂದು ಒಂದು ಘಟಕದಲ್ಲಿ ಆರಂಭವಾದ ಇವರ ಈ ಕೃಷಿ ವರ್ಷಕ್ಕೆಲಕ್ಷ ಲಕ್ಷದಷ್ಟು ಆದಾಯ ತಂದುಕೊಡುತ್ತಿದೆ.
ಸಂಧ್ಯಾ ಬಿ.ಎಂ, ಬೆಂಗಳೂರಿನ ಯಶಸ್ವಿ ಮಹಿಳಾ ಅಣಬೆ ಕೃಷಿಕರು. ಐಟಿ ಉದ್ಯೋಗಿ ಆಗಿದ್ದರೂ ಕೂಡ ಉದ್ಯೋಗದ ಜೊತೆಗೆ ಆಯಿಸ್ಟರ್ ಅಣಬೆ ಕೃಷಿ ಮಾಡಿ ಗೆದ್ದ ಸಾಧಕಿ. 2020ರಲ್ಲಿ ಆರಂಭಿಸಿದ ಅಣಬೆ ಕೃಷಿ ಇಂದು ಪ್ರತೀ ವರ್ಷ ಮೂರು ಲಕ್ಷ ನಿವ್ವಳ ಲಾಭ ತರುತ್ತಿದೆ. ನಗರದಲ್ಲಿ ಉದ್ಯೋಗ ಮತ್ತು ಕೃಷಿ ಎರಡನ್ನೂ ಮಾಡಿ ಸಕ್ಸಸ್ ಆಗಿದ್ದಾರೆ
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
Oyster Mushroom Farming Course Complete Practical Information
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...