ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಎಜಿ ರಾಮಚಂದ್ರ, ಹಿರಿಯ ಗೀರ್ ಮತ್ತು ಜೆರ್ಸಿ ಹಸುವಿನ ಸಾಕಾಣಿಕೆದಾರ. ಹುಟ್ಟಿದ್ದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನವರು. ಡಿಪ್ಲೋಮಾ ಓದಿನ ನಂತರ ಉದ್ಯೋಗದ ಕಡೆಗೆ ವಾಲದೆ ತನ್ನ ತಂದೆ ಪಾಲಿನ ಕೃಷಿ ಭೂಮಿಯಲ್ಲಿ ಕೃಷಿ ಬದುಕನ್ನ ಕಟ್ಟಿಕೊಂಡ್ರು. ಗುಡ್ಡಗಾಡು ಪ್ರದೇಶದಲ್ಲಿದ್ದ ಭೂಮಿಯನ್ನ ಅತ್ಯುತ್ತಮ ಕೃಷಿ ನಗರವನ್ನಾಗಿ ಬದಲಿಸಿ ಅದಕ್ಕೆ ತನ್ನ ಮಗ ಅರವಿಂದನ ಹೆಸರನ್ನೇ ಇಟ್ಟರು. ಸಾಂಪ್ರದಾಯಕ ಕೃಷಿಯನ್ನ ಬದಿಗಿರಿಸಿ ಜಾನುವಾರು, ಪಕ್ಷಿಗಳ ಸಾಕಣೆಗೆ ಮುಂದಾದರು. ಹೇಳಿ ಕೇಳಿ ಅವರದ್ದು ಬರೋಬ್ಬರಿ 150 ಎಕರೆಯ ದೊಡ್ಡ ಜಮೀನುದಾರರ ವಂಶ. ಹೀಗಾಗಿ ಇವರ 150 ಎಕರೆ...
ಎಜಿ ರಾಮಚಂದ್ರ, ಹಿರಿಯ ಗೀರ್ ಮತ್ತು ಜೆರ್ಸಿ ಹಸುವಿನ ಸಾಕಾಣಿಕೆದಾರ. ಹುಟ್ಟಿದ್ದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನವರು. ಡಿಪ್ಲೋಮಾ ಓದಿನ ನಂತರ ಉದ್ಯೋಗದ ಕಡೆಗೆ ವಾಲದೆ ತನ್ನ ತಂದೆ ಪಾಲಿನ ಕೃಷಿ ಭೂಮಿಯಲ್ಲಿ ಕೃಷಿ ಬದುಕನ್ನ ಕಟ್ಟಿಕೊಂಡ್ರು. ಗುಡ್ಡಗಾಡು ಪ್ರದೇಶದಲ್ಲಿದ್ದ ಭೂಮಿಯನ್ನ ಅತ್ಯುತ್ತಮ ಕೃಷಿ ನಗರವನ್ನಾಗಿ ಬದಲಿಸಿ ಅದಕ್ಕೆ ತನ್ನ ಮಗ ಅರವಿಂದನ ಹೆಸರನ್ನೇ ಇಟ್ಟರು. ಸಾಂಪ್ರದಾಯಕ ಕೃಷಿಯನ್ನ ಬದಿಗಿರಿಸಿ ಜಾನುವಾರು, ಪಕ್ಷಿಗಳ ಸಾಕಣೆಗೆ ಮುಂದಾದರು. ಹೇಳಿ ಕೇಳಿ ಅವರದ್ದು ಬರೋಬ್ಬರಿ 150 ಎಕರೆಯ ದೊಡ್ಡ ಜಮೀನುದಾರರ ವಂಶ. ಹೀಗಾಗಿ ಇವರ 150 ಎಕರೆ ಪ್ರದೇಶದಲ್ಲಿ ಇಲ್ಲದ ಸಾಕು ಪಕ್ಷಿಗಳಿಲ್ಲ, ಜಾನುವಾರುಗಳಿಲ್ಲ. ದೇಶದ ಪ್ರಖ್ಯಾತ ಗೀರ್, ಸಾಹಿವಾಲ್, ಪುಂಗನೂರು ತಳಿ ಸೇರಿದಂತೆ ಜೆರ್ಸಿ, ಹೆಚ್ ಎಫ್ ಹಸುವನ್ನ ಕೂಡ ಸಾಕ್ತಿದ್ದಾರೆ. ಹಾಗೆನೆ ಒಂಟೆ, ಕತ್ತೆ, ಮೊಲ, ಕುರಿ - ಮೇಕೆ ಸಾಕಣೆ ಕೂಡ ಮಾಡ್ತಿದ್ದಾರೆ. ಅದೇ ರೀತಿ ಗೌಜುಗ, ಬಾತುಕೋಳಿ, ಟರ್ಕಿಕೋಳಿ, ಅಸಿಲ್ ಕೋಳಿ, ಡಿ.ಪಿ ಕ್ರಾಸ್ ಕೋಳಿಯನ್ನ ಕೂಡ ಸಾಕಣೆ ಮಾಡ್ತಿದ್ದಾರೆ. ಅಗರ್ ವುಡ್ ಕೃಷಿ ಜತೆಗೆ ಅಗರ್‌ವುಡ್ ನರ್ಸರಿ ಕೂಡ ಮಾಡಿದ್ದಾರೆ. ಹೀಗೆ ಕೃಷಿಯ ಎಲ್ಲಾ ಚಟುವಟಿಕೆಗಳೂ ಇವ್ರ ಜಮೀನಿನಲ್ಲಿದೆ. ಕೃಷಿ ಆಸಕ್ತರಿಗೆ ತಮ್ಮ ಜಮೀನಿನಲ್ಲೇ ವಸತಿ ನೀಡಿ ತರಬೇತಿ ನೀಡ್ತಿದ್ದಾರೆ.
... ಪ್ರದೇಶದಲ್ಲಿ ಇಲ್ಲದ ಸಾಕು ಪಕ್ಷಿಗಳಿಲ್ಲ, ಜಾನುವಾರುಗಳಿಲ್ಲ. ದೇಶದ ಪ್ರಖ್ಯಾತ ಗೀರ್, ಸಾಹಿವಾಲ್, ಪುಂಗನೂರು ತಳಿ ಸೇರಿದಂತೆ ಜೆರ್ಸಿ, ಹೆಚ್ ಎಫ್ ಹಸುವನ್ನ ಕೂಡ ಸಾಕ್ತಿದ್ದಾರೆ. ಹಾಗೆನೆ ಒಂಟೆ, ಕತ್ತೆ, ಮೊಲ, ಕುರಿ - ಮೇಕೆ ಸಾಕಣೆ ಕೂಡ ಮಾಡ್ತಿದ್ದಾರೆ. ಅದೇ ರೀತಿ ಗೌಜುಗ, ಬಾತುಕೋಳಿ, ಟರ್ಕಿಕೋಳಿ, ಅಸಿಲ್ ಕೋಳಿ, ಡಿ.ಪಿ ಕ್ರಾಸ್ ಕೋಳಿಯನ್ನ ಕೂಡ ಸಾಕಣೆ ಮಾಡ್ತಿದ್ದಾರೆ. ಅಗರ್ ವುಡ್ ಕೃಷಿ ಜತೆಗೆ ಅಗರ್‌ವುಡ್ ನರ್ಸರಿ ಕೂಡ ಮಾಡಿದ್ದಾರೆ. ಹೀಗೆ ಕೃಷಿಯ ಎಲ್ಲಾ ಚಟುವಟಿಕೆಗಳೂ ಇವ್ರ ಜಮೀನಿನಲ್ಲಿದೆ. ಕೃಷಿ ಆಸಕ್ತರಿಗೆ ತಮ್ಮ ಜಮೀನಿನಲ್ಲೇ ವಸತಿ ನೀಡಿ ತರಬೇತಿ ನೀಡ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ