ffreedom app ನ "ಹೋಮ್ ಲೋನ್ ಬೇಗ ತೀರಿಸಿ, ಲಕ್ಷ ಲಕ್ಷ ಉಳಿಸುವುದು ಹೇಗೆ?" ಕೋರ್ಸ್ ಗೆ ಸುಸ್ವಾಗತ. ಈ ಕೋರ್ಸ್ ಮೂಲಕ ನೀವು ಅವಧಿಗೆ ಮೊದಲೇ ನಿಮ್ಮ ಗೃಹ ಸಾಲವನ್ನು ತೀರಿಸುವುದು ಹೇಗೆ ಮತ್ತು ಲಕ್ಷ ಲಕ್ಷ ಉಳಿಸುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ. ಹಿರಿಯ ಪತ್ರಕರ್ತರು ಮತ್ತು ವೈಯಕ್ತಿಕ ಹಣಕಾಸು ವಿಚಾರಗಳ ಬರಹಗಾರರಾದ ಶರತ್ ಎಂ.ಎಸ್ ಈ ಕೋರ್ಸ್‌ನಲ್ಲಿ ನಿಮ್ಮ ಮಾರ್ಗದರ್ಶಕರು.
ಸ್ವಂತ ಮನೆ ಅಥವಾ ಫ್ಲ್ಯಾಟ್ ಪ್ರತಿಯೊಬ್ಬರ ಕನಸು. ಇದನ್ನು ನನಸು ಮಾಡಲು ಎಷ್ಟೋ ಮಂದಿ ಹೋಮ್ ಲೋನ್ ಮಾಡಿ ಅದನ್ನು ತೀರಿಸುವುದಕ್ಕಾಗದೆ ಒದ್ದಾಡುತ್ತಿದ್ದಾರೆ. ಯಾಕಂದ್ರೆ ಗೃಹ ಸಾಲವು 15 ರಿಂದ 25 ವರ್ಷಗಳ ದೀರ್ಘಾವಧಿಯ ಸಾಲ. ಆದರೆ ಗೃಹ ಸಾಲದ ಆರಂಭಿಕ ವರ್ಷಗಳಲ್ಲಿ ಪಾವತಿಸುವ ಕಂತುಗಳ ಸಿಂಹಪಾಲು ಬಡ್ಡಿಗೇ ಹೋಗುತ್ತದೆ. ಅಸಲಿನ ಮೊತ್ತಕ್ಕೆ ಹೋಗುವ ಪಾಲು ತೀರಾ ಕಡಿಮೆ. ಹೀಗಾಗಿ ಹೆಚ್ಚಿನ ಮಂದಿ ತಮ್ಮ ಅರ್ಧ ಬದುಕನ್ನು ಈ ಲೋನ್ ತೀರಿಸುವುದರಲ್ಲಿಯೇ ಕಳೆಯಬೇಕಾಗುತ್ತದೆ.
ತುಂಬಾ ಮಂದಿ ಸಾಲಗಾರರು ಈ ಗೃಹ ಸಾಲದ ಹೊರೆಯನ್ನು ಬೇಗ ಇಳಿಸಿಕೊಳ್ಳೋದು ಹೇಗೆ ಎಂದು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಆದರೆ ಸಾಲ ಮರುಪಾವತಿ ಪ್ರಕ್ರಿಯೆಯಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡರೆ, ಈ ಸಾಲದ ಮೇಲಿನ ಬಡ್ಡಿ ಕಡಿಮೆ ಮಾಡಿಕೊಳ್ಳುವ ಜೊತೆಗೆ ಮರುಪಾವತಿ ಅವಧಿಯನ್ನೂ ತಗ್ಗಿಸಿ ಬೇಗ ಗೃಹಸಾಲವನ್ನು ಕ್ಲೋಸ್ ಮಾಡಬಹುದು. ಅದನ್ನು ನಿಮಗೆ ಕಲಿಸಿಕೊಡುವ ಉದ್ದೇಶದಿಂದ ಈ ಕೋರ್ಸ್ ಡಿಸೈನ್ ಮಾಡಲಾಗಿದೆ.
ಈ ಕೋರ್ಸ್‌ನಲ್ಲಿ ನೀವು, ಹೋಮ್ ಲೋನ್ ಅಂದರೇನು? ಸಾಲದ ನಿಯಮಗಳು, ಇಎಂಐ ಲೆಕ್ಕಾಚಾರ, ಲೋನ್ ಅವಧಿ ಸಾಲಗಾರನ ಮೇಲೆ ಬೀರುವ ಪರಿಣಾಮ. ಹೋಮ್ ಲೋನ್ ಬೇಗ ತೀರಿಸುವ ತಂತ್ರ, ಹೋಮ್ ಲೋನ್ ಕ್ಯಾಲ್ಕುಲೇಟರ್ ಬಳಕೆಯ ಪ್ರಾಕ್ಟಿಕಲ್ ಮಾಹಿತಿ, ಲೋನ್ ಸ್ವಿಚ್ ಅಂದ್ರೆ ಏನು? ಹೇಗೆ ಕೆಲಸ ಮಾಡುತ್ತೆ? ಮೊದಲು ಸಾಲ ತೀರಿಸಬೇಕಾ? ಹೂಡಿಕೆ ಮಾಡ್ಬೇಕಾ? ಲೋನ್ ತೀರಿಸಿದ ಮೇಲೆ ತಪ್ಪದೇ ಮಾಡಬೇಕಾದ ಕೆಲಸಗಳ ಬಗ್ಗೆ ಸಂಪೂರ್ಣವಾಗಿ ಕಲಿಯುತ್ತೀರಿ. ಹೀಗಾಗಿ ಈಗಲೇ ಸಂಪೂರ್ಣ ಕೋರ್ಸ್ ವೀಕ್ಷಿಸಿ, ನಿಮ್ಮ ಹೋಮ್ ಲೋನ್ ಬೇಗ ತೀರಿಸಿ, ಲಕ್ಷ ಲಕ್ಷ ಉಳಿಸಿ.
ಈ ಮಾಡ್ಯೂಲ್ ನಲ್ಲಿ ಹೋಮ್ ಲೋನ್ ಅಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ಈ ಸಾಲದ ನಿಯಮಗಳೇನು ಅನ್ನುವುದನ್ನು ತಿಳಿಯಿರಿ
ಈ ಮ್ಯಾಡ್ಯೂಲ್ ನಲ್ಲಿ ಇಎಂಐ ಲೆಕ್ಕಾಚಾರ ಅಂದರೆ ಮಾಸಿಕ ಕಂತಿನಲ್ಲಿ ಅಸಲಿಗೆ ಮತ್ತು ಬಡ್ಡಿಗೆ ಹೋಗುವ ಮೊತ್ತದ ಬಗ್ಗೆ ತಿಳಿಯಿರಿ
ಈ ಮಾಡ್ಯೂಲ್ ನಲ್ಲಿ ಲೋನ್ ಅವಧಿ ಹೆಚ್ಚಿದ್ದರೆ ಎಷ್ಟು ಬಡ್ಡಿ ಕಟ್ಟಬೇಕು? ಅವಧಿ ಕಡಿಮೆ ಇದ್ದರೆ ಎಷ್ಟು ಬಡ್ಡಿ ಕಟ್ಟಬೇಕು? ಅನ್ನುವುದನ್ನು ತಿಳಿಯಿರಿ
ಈ ಮಾಡ್ಯೂಲ್ ನಲ್ಲಿ ಗೃಹ ಸಾಲವನ್ನು ಬೇಗ ತೀರಿಸಿ, ಲಕ್ಷ ಲಕ್ಷ ಉಳಿಸುವ ತಂತ್ರಗಳನ್ನು ತಿಳಿಯಿರಿ
ಈ ಮಾಡ್ಯೂಲ್ ನಲ್ಲಿ ಹೋಮ್ ಲೋನ್ ಕ್ಯಾಲ್ಕುಲೇಟರ್ ಬಳಕೆ ಮಾಡುವುದನ್ನು ಪ್ರಾಕ್ಟಿಕಲ್ ಆಗಿ ಕಲಿಯಿರಿ
ಈ ಮಾಡ್ಯೂಲ್ ನಲ್ಲಿ ಲೋನ್ ಸ್ವಿಚ್ ಅಥವಾ ಸಾಲ ವರ್ಗಾವಣೆಯ ಮೂಲಕ ಬಡ್ಡಿ ಹೊರೆ ತಗ್ಗಿಸುವುದನ್ನು ಕಲಿಯಿರಿ
ಈ ಮಾಡ್ಯೂಲ್ ನಲ್ಲಿ ಮೊದಲು ಸಾಲ ತೀರಿಸಬೇಕಾ ಅಥವಾ ಹೂಡಿಕೆ ಮಾಡ್ಬೇಕಾ? ಹೂಡಿಕೆ ಮಾಡುವುದಿದ್ದರೆ, ಯಾವುದರಲ್ಲಿ ಮಾಡಬೇಕು? ಅನ್ನುವುದನ್ನು ತಿಳಿಯಿರಿ
ಈ ಮಾಡ್ಯೂಲ್ ನಲ್ಲಿ ಹೋಮ್ ಲೋನ್ ತೀರಿಸಿದ ಮೇಲೆ ತಪ್ಪದೆ ಮಾಡಬೇಕಾದ ಕೆಲಸಗಳ ಬಗ್ಗೆ ತಿಳಿಯಿರಿ
ಈ ಮಾಡ್ಯೂಲ್ ನಲ್ಲಿ ಹೋಮ್ ಲೋನ್ ಮಾಡಿದವರಿಗೆ ಮತ್ತು ಮಾಡುವವರಿಗೆ ಮಾರ್ದರ್ಶಕರ ಕಿವಿಮಾತು ಮತ್ತು ಸಲಹೆಗಳನ್ನು ಪಡೆಯಿರಿ
- ಹೋಮ್ ಲೋನ್ ಪಡೆದಿರುವ ವ್ಯಕ್ತಿಗಳು
- ಮನೆ ಖರೀದಿಸುವ ಯೋಚನೆಯಲ್ಲಿರುವವರು
- ಹಣಕಾಸಿನ ಪ್ಲ್ಯಾನಿಂಗ್ ಮಾಡುವವರು
- ಹಣಕಾಸಿನ ಬಗ್ಗೆ ಜಾಗೃತಿ ಹೊಂದಿರುವ ವ್ಯಕ್ತಿಗಳು
- ಗೃಹ ಸಾಲದ ಕುರಿತು ಹೆಚ್ಚು ತಿಳಿಯಲು ಬಯಸುವವರು
- ಆರ್ಥಿಕ ಸ್ವಾತಂತ್ರ್ಯವನ್ನು ಬಯಸುವವರು
- ವೇಗವಾಗಿ ಹೋಮ್ ಲೋನ್ ತೀರಿಸುವ ತಂತ್ರಗಳು
- ಲಕ್ಷ ಲಕ್ಷ ಬಡ್ಡಿ ಉಳಿಸುವ ತಂತ್ರ
- ಮೊದಲು ಸಾಲ ತೀರಿಸುವುದೋ? ಹೂಡಿಕೆಯೋ ಅನ್ನುವ ತಿಳುವಳಿಕೆ
- ಹೋಮ್ ಲೋನ್ ಕ್ಯಾಲ್ಕುಲೇಟರ್ ಬಳಕೆ
- ಹೋಮ್ ಲೋನ್ ಇಎಂಐ ಲೆಕ್ಕಾಚಾರ
- ಹೋಮ್ ಲೋನ್ ತೀರಿಸಿದ ಮೇಲೆ ಮಾಡಬೇಕಾದ ಕೆಲಸಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...