ನೀವು ಕಲಿಸುವ ಉತ್ಸಾಹವನ್ನು ಹೊಂದಿದ್ದೀರಾ? ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆಯನ್ನು ಮಾಡಲು ಬಯಸುವಿರಾ? ಶಿಕ್ಷಕರಾಗುವುದು ಒಂದು ನೋಬಲ್ ಪ್ರೊಫೆಶನ್ ಎಂದು ಆಂಗ್ಲ ಭಾಷೆಯಲ್ಲಿ ಹೇಳುತ್ತಾರೆ. ಇದಕ್ಕೆ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ನಿರ್ದಿಷ್ಟ ಕೌಶಲ್ಯ ಮತ್ತು ಗುಣಗಳು ಬೇಕಾಗುತ್ತವೆ. ಈ ಕೋರ್ಸ್ ಉತ್ತಮ ಶಿಕ್ಷಕರಾಗಲು ಅಗತ್ಯ ತಂತ್ರಗಳು ಮತ್ತು ಕೌಶಲ್ಯಗಳ ಬಗ್ಗೆ ತಿಳಿಹೇಳುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ಬಹುಮುಖ್ಯ. ಶಿಕ್ಷಕರು ನೈತಿಕತೆ, ವಿಮರ್ಶಾತ್ಮಕ ಚಿಂತನೆ ಮತ್ತು ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಕಲಿಸುತ್ತಾರೆ. ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಪಾತ್ರ, ಉದ್ಯೋಗಗಳು ಮತ್ತು ಜೀವನಕ್ಕಾಗಿ ವಿಶ್ವ ದೃಷ್ಟಿಕೋನವನ್ನು ರೂಪಿಸುತ್ತಾರೆ. ಶಿಕ್ಷಕರು ದೇಶವನ್ನು ರೂಪಿಸುತ್ತಾರೆ. ಅವರು ಶಾಲಾ ಶಿಕ್ಷಣವನ್ನು ರೂಪಿಸಿ, ನಾವೀನ್ಯತೆಯನ್ನು ಬೆಳೆಸಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಿಸುತ್ತಾರೆ. ಶಾಲಾ ಶಿಕ್ಷಣ ಮತ್ತು ಶಿಕ್ಷಕರ ಗುಣಮಟ್ಟ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುತ್ತದೆ. ಹೀಗಾಗಿ, ಶಿಕ್ಷಕರ ವೃತ್ತಿಪರ ಬೆಳವಣಿಗೆ ಮತ್ತು ಮನ್ನಣೆಯಲ್ಲಿ ಹೂಡಿಕೆ ಮಾಡುವುದು ರಾಷ್ಟ್ರದ ಭವಿಷ್ಯದ ಸಮೃದ್ಧಿ ಮತ್ತು ಯೋಗಕ್ಷೇಮಕ್ಕೆ ನೈತಿಕ ಮತ್ತು ಕಾರ್ಯತಂತ್ರವಾಗಿದೆ. ಬೋಧನೆಯ ಮೂಲಭೂತ ಅಂಶಗಳನ್ನು ಹಿಡಿದು ಶಿಕ್ಷಕರು ಎದುರಿಸುತ್ತಿರುವ ಆಧುನಿಕ ಸವಾಲುಗಳು ಮತ್ತು ಅವಕಾಶಗಳನ್ನು ಈ ಕೋರ್ಸ್ ಕಲಿಸುತ್ತದೆ. ಶಿಕ್ಷಕರ ಪಾತ್ರ ಮತ್ತು ಬದಲಾಗುತ್ತಿರುವ ಶಿಕ್ಷಣದ ಭೂದೃಶ್ಯವನ್ನು ಹೇಗೆ ನ್ಯಾವಿಗೇಟ್ ಮಾಡುವುದು ಎಂಬುದನ್ನು ನಾವು ಅನ್ವೇಷಿಸುತ್ತೇವೆ. ಯಶಸ್ವಿ ಕಲಿಕಾ ಸಮುದಾಯವನ್ನು ಹೇಗೆ ರಚಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ. ಡಾ ಗುರುರಾಜ ಕರಜಗಿ ಅವರು ಶಿಕ್ಷಣದಲ್ಲಿ 40 ವರ್ಷಗಳ ಅನುಭವ ಮತ್ತು ಶಿಕ್ಷಕರನ್ನು ಸಬಲೀಕರಣಗೊಳಿಸುವ ಉತ್ಸಾಹ ಹೊಂದಿದ್ದಾರೆ. ವಿಶ್ವಾದ್ಯಂತ 50 ಕ್ಕೂ ಹೆಚ್ಚು ಉತ್ತಮ ಗುಣಮಟ್ಟದ ಶಾಲೆಗಳನ್ನು ನಿರ್ಮಿಸಿದ್ದಾರೆ. 500 ಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅವರ ಪರಿಣತಿ ಮತ್ತು ಸಮರ್ಪಣೆ ಎಲ್ಲ ಶಿಕ್ಷಕರಿಗೆ ಸ್ಫೂರ್ತಿ. ಶಿಕ್ಷಕರಿಗೆ ಅವರು ಅತ್ಯುತ್ತಮ ಮಾರ್ಗದರ್ಶಕ ಎಂದರೆ ತಪ್ಪಾಗಲಾರದು. ನೀವು ಶಿಕ್ಷಕರಾಗಲು ನಿಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತಿರಲಿ ಅಥವಾ ನಿಮ್ಮ ಕೌಶಲ್ಯಗಳನ್ನು ಪರಿಷ್ಕರಿಸಲು ಬಯಸುವ ಅನುಭವಿ ಶಿಕ್ಷಕರಾಗಿರಲಿ, ಈ ಕೋರ್ಸ್ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಬೋಧನಾ ಅಭ್ಯಾಸವನ್ನು ಹೆಚ್ಚಿಸಲು ಅಮೂಲ್ಯವಾದ ಒಳನೋಟಗಳು ಮತ್ತು ಸಾಧನಗಳನ್ನು ಒದಗಿಸುತ್ತದೆ. ನಮ್ಮ ಕೋರ್ಸ್‌ಗೆ ಸೇರಿಕೊಂಡು, ಇಂದೇ ನಿಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ.
ಕೋರ್ಸ್ ಪರಿಚಯ
ನಿಮ್ಮ ಮಾರ್ಗದರ್ಶಕರ ಪರಿಚಯ
ಈ ಕೋರ್ಸ್ ನ ಮಹತ್ವ
ಶಿಕ್ಷಕ ಅಂದ್ರೆ ಯಾರು?
ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ
ಉತ್ತಮ ಶಿಕ್ಷಕರಾಗುವುದು ಹೇಗೆ?
ನಿರಂತರ ಕಲಿಕೆ ಮತ್ತು ಜ್ಞಾನಾರ್ಜನೆ
ಶಿಕ್ಷಕರ ವೃತ್ತಿಜೀವನದ ಬೆಳವಣಿಗೆ ಮತ್ತು ವೃತ್ತಿ ಆಯ್ಕೆಗಳು
ಶಿಕ್ಷಕ ವೃತ್ತಿ ಮತ್ತು ಹಣಕಾಸು
ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ
ಶಿಕ್ಷಕರಿಗೆ ಸಿಗುವ ಪ್ರಶಸ್ತಿ ಮತ್ತು ಗೌರವ
- ಮಹತ್ವಾಕಾಂಕ್ಷಿ ಶಿಕ್ಷಕರು ಮತ್ತು ಶೈಕ್ಷಣಿಕ ವೃತ್ತಿಪರರು
- ತಮ್ಮ ಬೋಧನಾ ಕೌಶಲ್ಯವನ್ನು ಸುಧಾರಿಸಲು ಪ್ರಯತ್ನಿಸುತ್ತಿರುವ ಶಿಕ್ಷಕರು
- ಶಿಕ್ಷಣವನ್ನು ವೃತ್ತಿಯಾಗಿ ಪರಿಗಣಿಸಲು ಬೋಧನೆಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
- ವಿದ್ಯಾರ್ಥಿಗಳ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಬಯಸುವ ವ್ಯಕ್ತಿಗಳು
- ವೃತ್ತಿ ಬದಲಾವಣೆ ಹೊಂದಿ, ಶೀಕ್ಷಣದಲ್ಲಿ ವೃತ್ತಿಜೀವನವನ್ನು ಆರಂಭಿಸಲು ನೋಡುತ್ತಿರುವ ಇತ್ತೀಚಿನ ಪದವೀಧರರು
- ಉತ್ತಮ ಶಿಕ್ಷಕರ ಗುಣಗಳು ಮತ್ತು ಅವುಗಳನ್ನು ಹೇಗೆ ಅಭಿವೃದ್ಧಿಪಡಿಸುವುದು
- ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಮತ್ತು ಪ್ರೇರೇಪಿಸುವ ತಂತ್ರಗಳು
- ವಿದ್ಯಾರ್ಥಿಯ ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಯ ಮೇಲೆ ಶಿಕ್ಷಕರ ಪ್ರಭಾವ
- ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ
- ಸಮಾಜದಲ್ಲಿ ಶಿಕ್ಷಕರಿಗೆ ಸಿಗುವ ಗೌರವ ಮತ್ತು ಮನ್ನಣೆಯ ಬಗ್ಗೆ ಕಲಿಯುವಿರಿ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
How to Become a Great Teacher?
12 June 2023
ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...