ಈ ಕೋರ್ಸ್ ಒಳಗೊಂಡಿದೆ
ಜಿ.ಎಸ್.ಟಿ ಎಂಬ ಕಾನೂನನ್ನು ತರುವುದರ ಹಿಂದೆ ಸುಮಾರು ವರ್ಷಗಳ ಪರಿಶ್ರಮವಿದೆ. 2000ನೇ ಇಸವಿಯಲ್ಲಿ ಇದರ ರಚನಾ ಪ್ರಕ್ರಿಯೆ ಆರಂಭವಾಗಿ, ಒಂದು ಸ್ಪಷ್ಟ ಆಕಾರ ಕೊಡಲು ಸುಮಾರು 17 ವರ್ಷಗಳೇ ಬೇಕಾಯಿತು. ಅಂತಿಮವಾಗಿ 2017ರಲ್ಲಿ ಜಿ.ಎಸ್.ಟಿ. ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕಾರ ಮಾಡಿದ ಮೇಲೆ ಅದೇ ವರ್ಷ ಕಾನೂನನ್ನು ಸರ್ಕಾರ ಜಾರಿಗೆ ತಂದಿತು.
ಈ ತೆರಿಗೆಯ ಮೂಲ ಉದ್ದೇಶವೇ, “ಒಂದು ರಾಷ್ಟ್ರ - ಒಂದು ತೆರಿಗೆ”. ಭಾರತದಲ್ಲಿ ಇರುವ ಅನೇಕ ಇನ್‌ಡೈರೆಕ್ಟ್ ಟ್ಯಾಕ್ಸ್‌ಗಳನ್ನು ಒಂದೇ - ಡೈರೆಕ್ಟ್ ಟ್ಯಾಕ್ಸ್ ನ ಅಡಿಯಲ್ಲಿ ತಂದು ಅದರಲ್ಲಿರುವ ಕ್ಯಾಸ್ಕೇಡಿಂಗ್ ಅನ್ನು ಕೂಡ ನಿರ್ನಾಮ ಮಾಡಲು ಸಹಕಾರಿಯಾಗುತ್ತದೆ. ಇದಷ್ಟೇ ಅಲ್ಲದೇ ಕಾನೂನಿಂದ ಟ್ಯಾಕ್ಸ್ ಫ್ರಾಡ್ ಮಾಡುವುದನ್ನು ತಪ್ಪಿಸಬಹುದು ಮತ್ತು ಟ್ಯಾಕ್ಸ್ ಪೇಯರ್ಸ್ ನ ಸಂಖ್ಯೆಯನ್ನು ಹೆಚ್ಚಳ ಮಾಡಬಹುದು. ಅತ್ಯಂತ ಸುಲಭವಾಗಿ ಈ ಟ್ಯಾಕ್ಸ್ ಅನ್ನು ಆನ್‌ಲೈನ್ ಮೂಲಕ ಸಹ ಪಾವತಿ ಮಾಡಬಹುದು.
ಇದರ ಜೊತೆಗೆ ಪ್ರತಿಯೊಂದು ವಸ್ತುಗಳಿಗೂ ಸ್ಪರ್ಧಾತ್ಮಕ ಬೆಲೆ ಸಿಗುವಂತೆ ಉತ್ತೇಜಿಸಲು ಜಿ.ಎಸ್.ಟಿ ನೆರವಾಗುತ್ತದೆ. ಈ ಕಾನೂನಿಂದ ಉತ್ತಮವಾದ ಲಾಜಿಸ್ಟಿಕ್ಸ್ ಮತ್ತು ಡಿಸ್ಟ್ರಿಬ್ಯೂಶನ್ ವ್ಯವಸ್ಥೆಯನ್ನು ಸಹ ಹೊಂದಬಹುದು.