ನಿಮ್ಮ ಕನಸಿನ ಮನೆಯನ್ನು ಹೊಂದುವತ್ತ ಮೊದಲ ಹೆಜ್ಜೆ ಇಡಲು ನೀವು ಸಿದ್ಧರಿದ್ದೀರಾ? ನಮ್ಮ ʼಹೋಮ್‌ಲೋನ್ ಕೋರ್ಸ್ʼ Ffreedom Appನಲ್ಲಿ ಗೃಹ ಸಾಲವನ್ನು ಸುರಕ್ಷಿತಗೊಳಿಸುವ ಮತ್ತು ನಿಮ್ಮ ಕನಸನ್ನು ನನಸಾಗಿಸುವ ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ಈ ಕೋರ್ಸ್ ತಯಾರು ಮಾಡಲಾಗಿದೆ. ಈ ಕೋರ್ಸ್ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಆದಾಯದ ಅವಶ್ಯಕತೆಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಹಿಡಿದು ವಿವಿಧ ಸಾಲದ ಆಯ್ಕೆಗಳನ್ನು ಹೋಲಿಸುವುದು ಮತ್ತು ದಾಖಲೆಗಳನ್ನು ನ್ಯಾವಿಗೇಟ್ ಮಾಡುವವರೆಗೆ ಎಲ್ಲ ಮಾಹಿತಿಯನ್ನು ತಿಳಿಸುತ್ತದೆ.
ಹೋಮ್‌ಲೋನ್‌ಗೆ ಅಪ್ಲೈ ಮಾಡಲು ಅಗತ್ಯವಿರುವ ಎಲ್ಲ ಸಮಗ್ರ ಮಾಹಿತಿ ಮತ್ತು ಜ್ಞಾನವನ್ನು ನಿಮಗೆ ನಾವು ಈ ಕೋರ್ಸ್ ಮೂಲಕ ಕೊಡುತ್ತಿದ್ದೇವೆ. ಇಂಡಿಯನ್ ಮನಿ ಡಾಟ್ ಕಾಮ್‌ನ ಸಂಸ್ಥಾಪಕ ಮತ್ತು Ffreedom Appನ ಸಿ.ಇ.ಓ ಶ್ರೀ ಸಿ.ಎಸ್.ಸುಧೀರ್ ಅವರೊಂದಿಗೆ ಸೇರಿ, ನಿಮ್ಮ ಆರ್ಥಿಕ ಸ್ವಾತಂತ್ರ್ಯದ ಪ್ರಯಾಣದಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಅವರ ಪರಿಣತಿ, ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ನಿಮ್ಮ ಹಣಕಾಸಿನ ನಿಯಂತ್ರಣವನ್ನು ತೆಗೆದುಕೊಳ್ಳಲು, ನಿಮಗೆ ಮತ್ತು ನಿಮ್ಮ ಸಮುದಾಯಕ್ಕೆ ಉಜ್ವಲ ಭವಿಷ್ಯವನ್ನು ರಚಿಸಲು ನೀವು ಕಲಿಯುವಿರಿ.
ಮನೆ ಖರೀದಿಗೆ ಸರಿಯಾದ ಬಜಟ್ ಮಾಡುವುದು ಹೇಗೆ, ಉತ್ತಮ ಕ್ರೆಡಿಟ್ ಸ್ಕೋರ್‌ನ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಲಭ್ಯವಿರುವ ವಿವಿಧ ರೀತಿಯ ಗೃಹ ಸಾಲಗಳ ಬಗ್ಗೆ ನೀವು ತಿಳಿಯುವಿರಿ. ಬಡ್ಡಿ ದರ ಮತ್ತು ನಿಯಮಗಳನ್ನು ಹೇಗೆ ಹೋಲಿಸುವುದು ಮತ್ತು ನಿಮ್ಮ ನಿರ್ಗದಿಷ್ಟ ಅಗತ್ಯಗಳಿಗಾಗಿ ಉತ್ತಮ ಸಾಲವನ್ನು ಹೇಗೆ ಆಯ್ಕೆ ಮಾಡುವುದು ಎಂವುದನ್ನು ಸಹ ಕಲಿಯುವಿರಿ.
ಈ ಕೋರ್ಸ್ ಅಂತ್ಯದ ವೇಳೆಗೆ ನಿಮ್ಮ ಹೋಮ್‌ಲೋನ್ ಬಗ್ಗೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ನಿಮ್ಮ ಕನಸಿನ ಮನೆಯನ್ನು ಹೊಂದಲು ಅಗತ್ಯವಿರುವ ಕ್ರಮಗಳ ಬಗ್ಗೆ ಅರಿಯುವಿರಿ. ನೀವು ಮೊದಲ ಬಾರಿಗೆ ಮನೆ ಖರೀದಿ ಮಾಡುವವರಾಗಿರಲಿ ಅಥವಾ ಹಣಕಾಸನ್ನು ಮತ್ತೆ ತೆಗೆದುಕೊಳ್ಳುವವರಾಗಿರಲಿ, ಈ ಕೋರ್ಸ್ ನಿಮಗೆ ಸರಳವಾದ ಭಾಷೆಯಲ್ಲಿ ಹೋಮ್‌ಲೋನ್ ಬಗ್ಗೆ ತಿಳಿಸಿಕೊಡುತ್ತದೆ. ಅದರಲ್ಲಿ ಇರುವ ಎಲ್ಲ ಹಂತಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಇನ್ನು ಕಾಯುವುದು ಯಾಕೆ?
ಇಂದೇ ನಿಮ್ಮ ಗೃಹ ಮಾಲೀಕತ್ವದ ಪ್ರಯಾಣವನ್ನು ಆರಂಭಿಸಿ ನಮ್ಮ ಹೋಮ್‌ಲೋನ್ ಕೋರ್ಸ್‌ಗೆ ಈಗಲೇ ನೋಂದಾಯಿಸಿಕೊಳ್ಳಿ!
ಹೋಮ್ ಲೋನ್‌ಗಳ ಮೂಲಭೂತ ಅಂಶಗಳನ್ನು ಮತ್ತು ಅರ್ಜಿ ಸಲ್ಲಿಸುವ ಮೊದಲು ಅದರ ಹಂತಗಳನ್ನು ತಿಳಿದುಕೊಳ್ಳಿ
ವಿವಿಧ ರೀತಿಯ ಹೋಮ್ ಲೋನ್‌ಗಳನ್ನು ಅನ್ವೇಷಿಸಿ ಮತ್ತು ಯಾವುದು ನಿಮಗೆ ಉತ್ತಮವಾಗಿದೆ ಎಂಬುದನ್ನು ಕಂಡುಕೊಳ್ಳಿ.
ನಿಮ್ಮ ಹೋಮ್ ಲೋನ್ ಬಡ್ಡಿದರದ ಮೇಲೆ ಪ್ರಭಾವ ಬೀರುವ ಅಂಶಗಳ ತಿಳುವಳಿಕೆಯನ್ನು ಪಡೆದುಕೊಂಡು ಅದನ್ನು ಸುಧಾರಣೆ ಮಾಡುವ ಅಂಶಗಳ ಬಗ್ಗೆ ಅರಿಯಿರಿ
ಭಾರತದಲ್ಲಿ ಅಗ್ಗದ ಹೋಮ್ ಲೋನ್ ದರವನ್ನು ಹೇಗೆ ಪಡೆಯುವುದು ಎಂದು ತಿಳಿಯಿರಿ.
ಹೋಮ್ ಲೋನ್‌ನೊಂದಿಗೆ ಬರುವ ವಿವಿಧ ರೀತಿಯ ಶುಲ್ಕಗಳನ್ನು ಅರ್ಥಮಾಡಿಕೊಳ್ಳಿ
ಹೋಮ್ ಲೋನ್ ಅನ್ನು ಸುರಕ್ಷಿತವಾಗಿರಿಸಲು ಮಾಡಬೇಕಾದ ಮತ್ತು ಮಾಡಬಾರದ ಸಂಗತಿ ಮತ್ತು ಸಾಮಾನ್ಯ ತಪ್ಪುಗಳ ಬಗ್ಗೆ ತಿಳಿದುಕೊಳ್ಳಿ
ನಿಮ್ಮ ಹೋಮ್ ಲೋನ್ ಅರ್ಜಿಯನ್ನು ನಿರಾಕರಿಸಿದರೆ ಏನು ಮಾಡಬೇಕು ಮತ್ತು ನೀವು ಯಶಸ್ಸು ಪಡೆಯುವ ಅವಕಾಶಗಳನ್ನು ಹೇಗೆ ಸುಧಾರಿಸಿಕೊಳ್ಳಬೇಕು ಎಂದು ತಿಳಿಯಿರಿ
ಪದೇ ಪದೇ ಕೇಳಲಾಗುವ ಹೋಮ್ ಲೋನ್ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ.
ಹೋಮ್ ಲೋನ್ ಅನ್ನು ಸುರಕ್ಷಿತಗೊಳಿಸುವ ಮಾನದಂಡಗಳ ಬಗ್ಗೆ ಮತ್ತು ನಿಮ್ಮ ಅನುಮೋದನೆಯ ಸಾಧ್ಯತೆಗಳ ಕುರಿತು ತಿಳಿಯಿರಿ.

- ಮೊದಲ ಬಾರಿಗೆ ಮನೆ ಖರೀದಿ ಮಾಡಲು ಬಯಸುತ್ತಿರುವವರು, ಹೋಮ್ ಲೋನ್ ಪ್ರಕ್ರಿಯೆ ಬಗ್ಗೆ ತಿಳಿಯಲು ಆಸಕ್ತಿ ಇರುವ ವ್ಯಕ್ತಿಗಳು
- ಪ್ರಸ್ತುತ ಮನೆ ಮಾಲೀಕರು, ತಮ್ಮ ಅಸ್ತಿತ್ವದಲ್ಲಿರುವ ಮನೆ ಸಾಲವನ್ನು ಮರುಹಣಕಾಸಿಗಾಗಿ ಅಪ್ಲೈ ಮಾಡಲು ಬಯಸುತ್ತಿರುವವರು
- ಗೃಹ ಸಾಲಕ್ಕೆ ಅರ್ಹತೆ ಪಡೆಯಲು ತಮ್ಮ ಕ್ರೆಡಿಟ್ ಸ್ಕೋರ್ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಬಯಕೆ ಹೊಂದಿರುವ ವ್ಯಕ್ತಿಗಳು
- ರಿಯಲ್ ಎಸ್ಟೇಟ್ ಹೂಡಿಕೆದಾರರು, ಹಣಕಾಸಿನ ಆಯ್ಕೆಗಳ ಮೂಲಕ ತಮ್ಮ ಪೋರ್ಟ್ ಫೋಲಿಯೋ ವಿಸ್ತರಿಸಲು ಬಯಸುವವರು
- ವಿವಿಧ ರೀತಿಯ ಹೋಮ್‌ಲೋನ್ ಕುರಿತು ಇನ್ನಷ್ಟು ಮಾಹಿತಿ ಪಡೆಯಲು ಆಸಕ್ತಿ ಹೊಂದಿರುವ ವ್ಯಕ್ತಿಗಳು



- ಮನೆ ಖರೀದಿಗೆ ಸರಿಯಾಗಿ ಬಜಟ್ ಮಾಡುವುದು ಮತ್ತು ಮನೆ ಹೊಂದಲು ಸಂಬಂಧಿಸಿದ ವೆಚ್ಚಗಳನ್ನು ಅರ್ಥ ಮಾಡಿಕೊಳ್ಳುವ ಬಗ್ಗೆ ಮಾಹಿತಿ
- ಮನೆ ಖರೀದಿಗೆ ಸರಿಯಾಗಿ ಬಜಟ್ ಮಾಡುವುದು ಮತ್ತು ಮನೆ ಹೊಂದಲು ಸಂಬಂಧಿಸಿದ ವೆಚ್ಚಗಳನ್ನು ಅರ್ಥ ಮಾಡಿಕೊಳ್ಳುವ ಬಗ್ಗೆ ಮಾಹಿತಿ
- ಸ್ಥಿರ ದರ, ಹೊಂದಾಣಿಕೆ ದರ ಮತ್ತು ಸರ್ಕಾರಿ ಬೆಂಬಲಿತ ಸಾಲಗಳು ಸೇರಿದಂತೆ ವಿವಿಧ ರೀತಿಯ ಗೃಹ ಸಾಲಗಳ ಲಭ್ಯತೆ ಬಗ್ಗೆ
- ಬಡ್ಡಿದರಗಳು ಮತ್ತು ನಿಯಮಗಳನ್ನು ಹೇಗೆ ಹೋಲಿಸುವುದು, ನಿಮ್ಮ ನಿರ್ದಿಷ್ಟ ಅಗತ್ಯತೆಗಳು ಮತ್ತು ಹಣಕಾಸಿನ ಪರಿಸ್ಥಿತಿಗಾಗಿ ಉತ್ತಮ ಸಾಲದ ಆಯ್ಕೆ
- ಹೋಮ್‌ಲೋನ್ ಅಪ್ಲಿಕೇಶನ್ ಪ್ರಕ್ರಿಯೆ, ದಾಖಲೆಗಳನ್ನು ಸಬ್ಮಿಟ್ ಮಾಡುವ ಬಗೆ ಮತ್ತು ದಾಖಲಾತಿಯ ಅಗತ್ಯತೆ ಬಗ್ಗೆ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
Home Loan Course - How To Finance Your Dream Home?
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...