ಈ ಕೋರ್ಸ್ ಒಳಗೊಂಡಿದೆ
ಅಕಾಲಿಕ ಮಳೆ, ಪ್ರವಾಹ, ಬರ, ಬೆಳೆನಾಶ ಹೀಗೆ ನಾನಾ ಕಾರಣಗಳಿಂದ ಬೆಳೆದ ಬೆಳೆಗಳು ಹಾನಿಗೀಡಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂಥ ಸಂದರ್ಭಗಳಲ್ಲಿ ಉಂಟಾದ ನಷ್ಟ ಭರಿಸಲು ರೈತರು ಸಾಲ ಪಡೆಯೋದು ಅನಿವಾರ್ಯ. ಬಹುತೇಕ ಸಂದರ್ಭಗಳಲ್ಲಿ ಹೆಚ್ಚಿನ ಬಡ್ಡಿದರಕ್ಕೆ ಸಾಲ ಪಡೆಯಲೇಬೇಕಾದಂತಹ ಪರಿಸ್ಥಿತಿ ರೈತರದ್ದು. ಎಷ್ಟೋ ರೈತರು ಬಡ್ಡಿಯ ಹೊರೆಯಿಂದ ಸಾಲ ತೀರಿಸಲಾಗದಂತಹ ಪರಿಸ್ಥಿತಿಗೆ ಸಿಲುಕಿರುತ್ತಾರೆ. ಇದನ್ನು ಮನಗಂಡ ಕೇಂದ್ರ ಸರ್ಕಾರ, ರೈತರಿಗೆ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ಉದ್ದೇಶದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ರೈತರು ಗರಿಷ್ಠ 3ಲಕ್ಷ ರೂ. ತನಕ ಸಾಲ ಪಡೆಯಬಹುದು. ಕಿಸಾನ್ ಕ್ರಡಿಟ್ ಕಾರ್ಡ್ ನಿಂದ ಯಾವ ಯಾವ ಕೃಷಿಗೆ ಸಾಲ ಕೊಡಬಹುದು ಎಂಬುವುದನ್ನು ನೀವು ಇಲ್ಲಿ ಎಲ್ಲಾ ಮಾಹಿತಿಯನ್ನು ಪಡೆಯಬಹುದು.