ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಡಾ. ಮಾದೇಶ್ ಪಿ, ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಜಾಗೇರಿ ಎಂಬ ಪುಟ್ಟ ಗ್ರಾಮದವರು. ವೃತ್ತಿಯಲ್ಲಿ ಡಾಕ್ಟರ್ ಆದ್ರೂ ಸಾಧನೆ ಮಾಡಿದ್ದು ಮಾತ್ರಾ ಮೀನು ಕೃಷಿಯಲ್ಲಿ. ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದ ಇವ್ರಿಗೆ ಸಮಾಜಕ್ಕೆ ಕೊಡುಗೆ ನೀಡುವಂತಹ ಬಿಸಿನೆಸ್ ಆರಂಭಿಸಬೇಕು ಎಂಬ ಮಹದಾಸೆ ಇತ್ತು. ಅದರಂತೆ ಮೊದಲಿಗೆ ಪೌಲ್ಟ್ರಿ ಫಾರ್ಮ್ ಆರಂಭಿಸೋ ಇವ್ರು ಅದ್ರಲ್ಲಿ ಅಷ್ಟೇನು ಸಕ್ಸಸ್ ಕಾಣೋದಿಲ್ಲ. ಹಾಗಂತ ಕೃಷಿಯ ಬಗ್ಗೆ ಇವರಿಗಿದ್ದ ತುಡಿತಕ್ಕೆ ಬ್ರೇಕ್ ಬೇಳೋದಿಲ್ಲ. ಬದಲಿಗೆ ಹಲವಾರು ಬಿಸಿನೆಸ್ ಗಳ ಬಗ್ಗೆ ಮಾದೇಶ್ ಅವ್ರು ಅಧ್ಯಯನ ನಡೆಸ್ತಾರೆ. ಈ ವೇಳೆಗೆ ಇವರಿಗೆ ಬಯೋಫ್ಲಾಕ್ ಮತ್ತು...
... ಪಾಂಡ್ ಕಲ್ಚರ್ ಮೀನು ಕೃಷಿ ಪದ್ಧತಿ ಬಗ್ಗೆ ತಿಳಿಯುತ್ತದೆ. ಈ ಬಗ್ಗೆ ತಿಳಿದಿದ್ದೇ ತಡ ಮಾದೇಶ್ ಅವ್ರು, ಹಲವು ಮೀನು ಸಾಕಾಣೆದಾರರ ಫಾರ್ಮ್‌ಗೆ ಭೇಟಿ ನೀಡಿ ಈ ಬಗ್ಗೆ ಸಾಕಷ್ಟು ಜ್ಞಾನವನ್ನು ಸಂಪಾದಿಸುತ್ತಾರೆ. ಅಷ್ಟೇ ಅಲ್ಲ ಸಾಂಪ್ರದಾಯಿಕ ಹಾಗೂ ಬಯೋಫ್ಲಾಕ್ ಮತ್ತು ಪಾಂಡ್ ಕಲ್ಚರ್ ಪದ್ಧತಿಯ ನಡುವಿನ ಪ್ಲಸ್ ಹಾಗೂ ಮೈನಸ್ ಪಾಯಿಂಟ್ ಗಳನ್ನ ಬಹಳ ಆಳವಾಗಿ ಅಧ್ಯಯನ ನಡೆಸಿ ಬರೋಬ್ಬರಿ 25 ಬಯೋಫ್ಲಾಕ್ ತೊಟ್ಟಿಗಳು ಹಾಗೂ ನ್ಯಾಚುರಲ್ ಪಾಂಡ್‌ಗಳನ್ನು ನಿರ್ಮಿಸಿ, ಹಲವಾರು ಟೆಕ್ನಿಕ್‌ಗಳನ್ನು ಬಳಸಿ ಮೀನು ಸಾಕಾಣೆ ಆರಂಭಿಸಿ ಉತ್ತಮ ಲಾಭ ಪಡೆಯುತ್ತಿದ್ದಾರೆ, ಹಾಗೂ ಯುವ ರೈತರಿಗೆ ಮಾದರಿಯಾಗಿದ್ದಾರೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ