ಈ ಕೋರ್ಸ್ ಒಳಗೊಂಡಿದೆ
ಪ್ರಕೃತಿ ವಿಕೋಪಗಳಿಂದ ನಿಮ್ಮ ಬೆಳೆಗಳನ್ನು ರಕ್ಷಿಸಲು ಹೆಣಗಾಡುತ್ತಿದ್ದೀರಾ? ಹಾಗಾದರೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) - ಬೆಳೆ ವಿಮೆ ಕೋರ್ಸ್ ನಿಮಗೆ ಉತ್ತಮ ಪರಿಹಾರವಾಗಿದೆ. ಈ ಕೋರ್ಸ್ ಫಸಲ್ ಬಿಮಾ ಯೋಜನೆಯ ಪ್ರಯೋಜನಗಳು ಮತ್ತು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನಾ ವಿವರಗಳನ್ನು ಒಳಗೊಂಡಂತೆ PMFBY ಯೋಜನೆಯ ಪ್ರಯೋಜನಗಳು ಮತ್ತು ವಿವರಗಳ ಕುರಿತು ಪ್ರಾಯೋಗಿಕ ವಿಧಾನಗಳನ್ನು ಈ ಕೋರ್ಸ್ ಮೂಲಕ ನೀವು ಮಾಹಿತಿಯನ್ನು ಪಡೆಯಬಹುದು.
10 ಮಾಡ್ಯೂಲ್‌ಗಳನ್ನು ಒಳಗೊಂಡಿರುವ ಈ ಕೋರ್ಸ್ PMFBY ಯೋಜನೆಯ ಮೂಲಗಳಿಂದ ಹಿಡಿದು ಕ್ಲೈಮ್ ಪ್ರಕ್ರಿಯೆಯ ವಿವರಗಳು ಮತ್ತು ತ್ವರಿತ ಪರಿಹಾರದವರೆಗೆ ಎಲ್ಲವನ್ನೂ ಒಳಗೊಂಡಿದೆ. ಈ ಕೋರ್ಸ್ ಅನ್ನು ಪ್ರಾಯೋಗಿಕವಾಗಿ ವಿನ್ಯಾಸಗೊಳಿಸಲಾಗಿದ್ದು, ಈ ಕೋರ್ಸ್ ಅನ್ನು ಯಾರೂ ಕೂಡ ಮಾಡಬಹುದು.
ಫಸಲ್ ಬಿಮಾ ಯೋಜನೆಯ ಪ್ರಯೋಜನಗಳು, ನೋಂದಣಿ ಪ್ರಕ್ರಿಯೆಯನ್ನು ಹೇಗೆ ನ್ಯಾವಿಗೇಟ್ ಮಾಡುವುದು ಮತ್ತು ಕ್ಲೈಮ್ ಪ್ರಕ್ರಿಯೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. PMFBY ಯೋಜನೆಯು ರೈತರಿಗೆ ತಮ್ಮ ಬೆಳೆಗಳನ್ನು ಸುರಕ್ಷಿತಗೊಳಿಸುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ತಿಳಿಯಬಹುದು.
PMFBY ಯೋಜನೆಯ ಪರಿಣಾಮಕಾರಿತ್ವ ಅಥವಾ ವಿಶ್ವಾಸಾರ್ಹತೆಯ ಬಗ್ಗೆ ನಿಮಗೆ ಕಾಳಜಿ ಇದ್ದರೆ, ನಮ್ಮ ಕೋರ್ಸ್ ವೀಡಿಯೊವನ್ನು ವೀಕ್ಷಿಸಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯೊಂದಿಗೆ ನಿಮ್ಮ ಬೆಳೆಗಳು ಮತ್ತು ಜೀವನೋಪಾಯವನ್ನು ಸುರಕ್ಷಿತಗೊಳಿಸಲು ಈ ಅವಕಾಶವನ್ನು ಕಳೆದುಕೊಳ್ಳಬೇಡಿ!
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಈ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಯಬಯಸುವ ಎಲ್ಲಾ ರೈತರು ಈ ಕೋರ್ಸ್ ಅನ್ನು ಪಡೆಬಹುದು
ಯೋಜನೆಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ರೈತರೊಂದಿಗೆ ಕೆಲಸ ಮಾಡುವ ಕೃಷಿ ವಿಸ್ತರಣಾ ಕಾರ್ಯಕರ್ತರು
ಬೆಳೆ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವ ವಿಮಾ ಏಜೆಂಟ್‌ಗಳು
ರೈತರಿಗೆ ಸಾಲ ನೀಡುವ ಬ್ಯಾಂಕರ್‌ಗಳು
ಕೃಷಿ ಅಥವಾ ವಿಮೆ-ಸಂಬಂಧಿತ ಕೋರ್ಸ್‌ಗಳನ್ನು ಮುಂದುವರಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
PMFBY ಬೆಳೆ ವಿಮಾ ಯೋಜನೆಯ ವೈಶಿಷ್ಟ್ಯಗಳು, ಪ್ರಯೋಜನಗಳು ಮತ್ತು ಕವರೇಜ್‌ಗಳ ಬಗ್ಗೆ ತಿಳಿಯಿರಿ
PMFBY ಯೋಜನೆಗಾಗಿ ಹಂತ-ಹಂತದ ದಾಖಲಾತಿ ಪ್ರಕ್ರಿಯೆಯ ಕುರಿತು ತಿಳಿಯಿರಿ
ವಿವಿಧ ಬೆಳೆಗಳಿಗೆ ಪ್ರೀಮಿಯಂ ದರಗಳು, ಸರ್ಕಾರ ನೀಡುವ ಸಬ್ಸಿಡಿ ಮತ್ತು ಪ್ರೀಮಿಯಂನ ರೈತರ ಪಾಲು
ನೈಸರ್ಗಿಕ ವಿಪತ್ತುಗಳು, ಕೀಟಗಳು ಮತ್ತು ರೋಗಗಳನ್ನು ಒಳಗೊಂಡಂತೆ PMFBY ಯೋಜನೆಯಡಿಯಲ್ಲಿ ಅಪಾಯಗಳ ಕುರಿತು ಕಲಿಯಿರಿ
PMFBY ಯೋಜನೆಯ ಪರಿಣಾಮಕಾರಿತ್ವವನ್ನು ಸುಧಾರಿಸಲು ಸರ್ಕಾರದ ತಂತ್ರಜ್ಞಾನ-ಶಕ್ತಗೊಂಡ ಉಪಕ್ರಮಗಳ ಬಗ್ಗೆ ಈ ಕೋರ್ಸ್‌ನಲ್ಲಿ ಕಲಿಯುವಿರಿ.
ಅಧ್ಯಾಯಗಳು