ಈ ಕೋರ್ಸ್ ಒಳಗೊಂಡಿದೆ
ಏಲಕ್ಕಿ ಬಾಳೆಹಣ್ಣಿನ ಕೃಷಿಯನ್ನು ಮಾಡಿ ಹೇಗೆ ಲಾಭ ಗಳಿಸಬಹುದು ಎಂಬುವುದನ್ನು ಈ ಕೋರ್ಸ್ ನಲ್ಲಿ ತಿಳಿಸುತ್ತಿದ್ದೇವೆ. ಸಾಮಾನ್ಯವಾಗಿ ಬಾಳೆಹಣ್ಣು ಗಳನ್ನು ನಾವು ಊಟವಾದ ಬಳಿಕ ತಿನ್ನುತ್ತೇವೆ. ಅಥವಾ ಹಸಿವೆಯಾದ್ರೂ ಬಾಳೆಹಣ್ಣ ಅನ್ನು ತಿನ್ನುತ್ತೇವೆ. ಅದರಲ್ಲೂ ಏಲಕ್ಕಿ ಬಾಳೆಹಣ್ಣು ಇಷ್ಟಪಡದವರು ಯಾರು ಇರಲಾರರು. ಇದು ಚಿಕ್ಕ ಬಾಳೆಹಣ್ಣು. ಆದರೆ ತಿನ್ನಲು ಬಹಳ ರುಚಿ.
ಈ ಏಲಕ್ಕಿ ಬಾಳೆ ಹಣ್ಣಿನಲ್ಲಿ ಜೌಷಧೀಯ ಗುಣಗಳು ಹೆಚ್ಚಿಗೆ ಇರುವುದರಿಂದ ಆಯುರ್ವೇದದಲ್ಲಿ ಇದಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಲಾಗಿದೆ. ಈ ಬಾಳೆಹಣ್ಣಿನಲ್ಲಿ ಪೌಷ್ಟಿಕಾಂಶಗಳು ಕೂಡ ಹೆಚ್ಚಿರುತ್ತದೆ. ಈ ಕೋರ್ಸ್ ನಲ್ಲಿ ನಾವು ನಿಮಗೆ banana farming ಏಲಕ್ಕಿ ಬಾಳೆಹಣ್ಣಿನ ಕೃಷಿಯನ್ನು ಮಾಡಿ ಹೇಗೆ ಯಶಸ್ವಿಯಾಗಬಹುದು ಎಂಬುವುದನ್ನು ತಿಳಿಸಿಕೊಡುತ್ತೇವೆ.