4.4 from 5.2K ರೇಟಿಂಗ್‌ಗಳು
 2Hrs 21Min

ಹಾರ್ಡ್‌ವೇರ್ ಶಾಪ್ ಬಿಸಿನೆಸ್ ಆರಂಭಿಸಿ, 15% ಲಾಭ ಗಳಿಸಿ!

ಈ ಕೋರ್ಸ್‌ ವೀಕ್ಷಿಸಿ, ಹಾರ್ಡ್‌ವೇರ್‌ ಅಂಗಡಿ ಬಿಸಿನೆಸ್‌ ಸಾಮರ್ಥ್ಯ ಅನ್ಲಾಕ್‌ ಮಾಡಿ 15% ಲಾಭವನ್ನು ಗಳಿಸಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Hardware Shop Business Course Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(42)
ಕೃಷಿ ಕೋರ್ಸ್‌ಗಳು(146)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 21Min
 
ಪಾಠಗಳ ಸಂಖ್ಯೆ
18 ವೀಡಿಯೊಗಳು
 
ನೀವು ಕಲಿಯುವುದು
ಬಿಸಿನೆಸ್ ಅವಕಾಶಗಳು, Completion Certificate
 
 

ನಿಮ್ಮ ಹಾರ್ಡ್‌ವೇರ್ ಅಂಗಡಿಯನ್ನು ಪ್ರಾರಂಭಿಸಲು ನೋಡುತ್ತಿರುವಿರಾ? ಹಾರ್ಡ್‌ವೇರ್ ಶಾಪ್ ಬಿಸಿನೆಸ್‌ ಪ್ರಾರಂಭಿಸುವ ಒಳ ಮತ್ತು ಹೊರಗಿನ ಮಾಹಿತಿಯನ್ನು ನಿಮಗೆ ಕಲಿಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಹಾರ್ಡ್‌ವೇರ್ ಶಾಪ್ ಲಾಭದಾಯಕವಾಗಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ನಿಮಗೆ ಸಹಾಯ ಮಾಡಲು ಕೋರ್ಸ್‌ಅನ್ನು ಸಿದ್ಧಪಡಿಸಲಾಗಿದೆ. 

ಹಾರ್ಡ್‌ವೇರ್ ಬಿಸಿನೆಸ್‌ ಕೋರ್ಸ್ - ಮಾರುಕಟ್ಟೆ ಸಂಶೋಧನೆ ಮತ್ತು ಬಿಸಿನೆಸ್‌ ಪ್ಲಾನ್‌ ಮೂಲಕ ದಾಸ್ತಾನು ನಿರ್ವಹಣೆಯನ್ನು ಕಲಿಸಿಕೊಡುತ್ತದೆ. ಮಾರ್ಕೆಟಿಂಗ್‌ ತಂತ್ರಗಳು ಮತ್ತು ಹಾರ್ಡ್‌ವೇರ್ ಅಂಗಡಿಯನ್ನು ಪ್ರಾರಂಭಿಸುವ ಎಲ್ಲಾ ಅಗತ್ಯ ಅಂಶಗಳನ್ನು ಕಲಿಸಿಕೊಡುತ್ತದೆ. ಹಾರ್ಡ್‌ವೇರ್ ಮಾರುಕಟ್ಟೆಯಲ್ಲಿ ಲಾಭದಾಯಕ ಮಾರುಕಟ್ಟೆಯಕನ್ನು ಹೇಗೆ ಗುರುತಿಸುವುದು ಮತ್ತು ಯಶಸ್ಸಿಗೆ ನಿಮ್ಮನ್ನು ಹೊಂದಿಸುವ ಬಿಸಿನೆಸ್‌ ಪ್ಲಾನ್ ಅಭಿವೃದ್ಧಿಪಡಿಸುವ ಬಗ್ಗೆ ಮಾಹಿತಿ ಪಡೆಯುವಿರಿ.

ಗ್ರಾಹಕರನ್ನು ಆಕರ್ಷಿಸಲು ಉತ್ಪನ್ನಗಳನ್ನು ಹೇಗೆ ಉತ್ಪಾದನೆ ಮಾಡುವುದು ಮತ್ತು ನಿಮ್ಮ ಹಾರ್ಡ್‌ವೇರ್ ಅಂಗಡಿಯ ಮೂಲಕ ಅವನ್ನು ಮಾರಾಟ ಮಾಡುವುದು ಹೇಗೆ ಎಂಬ ಪ್ರಮುಖ ವಿಷಯಗಳನ್ನು ಸಹ ಕೋರ್ಸ್ ಒಳಗೊಂಡಿದೆ. ಹೊಸ ಹಾರ್ಡ್‌ವೇರ್ ಅಂಗಡಿ ಮಾಲೀಕರಿಗೆ ಅಥವಾ  ಈ ವಲಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರಿಗೆಂದು ವಿನ್ಯಾಸಗೊಳಿಸಲಾಗಿದೆ. 

ಕಾರ್ಯಾಚರಣೆಗಳು ಮತ್ತು ಆದಾಯ ಹೆಚ್ಚಿಸಲು ಬಯಸುವ ಪ್ರಸ್ತುತ ಹಾರ್ಡ್‌ವೇರ್ ಅಂಗಡಿ ಮಾಲೀಕರು ಸಹ ಇದರಿಂದ ಪ್ರಯೋಜನ ಪಡೆಯಬಹುದು. ಈ ಕೋರ್ಸ್‌ನ ಮಾರ್ಗದರ್ಶಕರಾದ ಶ್ರೀ ಮುರಳಿ ಮತ್ತು ಶ್ರೀ ನಧೀಮ್ ಮೊಹಮ್ಮದ್ ಅವರು ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸರಿಯಾದ ಮಾರ್ಗದರ್ಶನದಿಂದ ಬಿಸಿನೆಸ್‌ ಯಶಸ್ಸು ಸಾಧ್ಯ ಎಂದು ಸಾಬೀತುಪಡಿಸಿದ್ದಾರೆ. ಅವರ ಪರಿಶ್ರಮ ಮತ್ತು ಯಶಸ್ಸಿನ ಕಥೆಗಳು ತಮ್ಮ ಸ್ವಂತ ಬಿಸಿನೆಸ್‌ ಪ್ರಾರಂಭಿಸಲು ಬಯಸುವವರಿಗೆ ಸ್ಫೂರ್ತಿಯ ಚಿಲುಮೆಯಾಗಿವೆ.

ಕೋರ್ಸ್‌ನ ಅಂತ್ಯದ ವೇಳೆಗೆ, ನೀವು ಯಶಸ್ವಿ ಹಾರ್ಡ್‌ವೇರ್ ಅಂಗಡಿಯನ್ನು ಪ್ರಾರಂಭಿಸಲು ಮತ್ತು ಚಲಾಯಿಸಲು ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯುತ್ತೀರಿ. ಹಾರ್ಡ್‌ವೇರ್ ಶಾಪ್ ಬಿಸಿನೆಸ್‌ ನಿಮಗೆ ಲಾಭದಾಯಕ ಉದ್ಯಮವೇ ಎಂಬುದರ ಕುರಿತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀವು ಸಜ್ಜುಗೊಳ್ಳುತ್ತೀರಿ. ಹಾರ್ಡ್‌ವೇರ್ ಶಾಪ್ ಬಿಸಿನೆಸ್ ಹೇಗೆ ಪ್ರಾರಂಭಿಸುವುದು ಮತ್ತು ನಿಮ್ಮ ವಾಣಿಜ್ಯೋದ್ಯಮ ಕನಸುಗಳನ್ನು ವಾಸ್ತವಕ್ಕೆ ತಿರುಗಿಸುವುದು ಹೇಗೆ ಎಂದು ತಿಳಿಯಲು ಈಗಲೇ ಸೈನ್ ಅಪ್ ಮಾಡಿ. 

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ಮಹತ್ವಾಕಾಂಕ್ಷೆಯುಳ್ಳ ಹಾರ್ಡ್‌ವೇರ್ ಅಂಗಡಿ ಮಾಲೀಕರು

  • ಪ್ರಸ್ತುತ ಹಾರ್ಡ್‌ವೇರ್ ಅಂಗಡಿ ಮಾಲೀಕರು ತಮ್ಮ ವ್ಯಾಪಾರವನ್ನು ಸುಧಾರಿಸಲು ನೋಡುತ್ತಿರುವವರು

  • ಹಾರ್ಡ್‌ವೇರ್ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಬಿಸಿನೆಸ್‌ಮನ್‌ಗಳು

  • ಹಾರ್ಡ್‌ವೇರ್ ವ್ಯವಹಾರಕ್ಕೆ ಹೊಸ ವ್ಯಕ್ತಿಗಳು

  • ವ್ಯಾಪಾರ ಮಾಲೀಕರು ತಮ್ಮ ಆದಾಯದ ಸ್ಟ್ರೀಮ್‌ಗಳನ್ನು ವೈವಿಧ್ಯಗೊಳಿಸಲು ಬಯಸುವವರು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಹಾರ್ಡ್‌ವೇರ್ ಶಾಪ್ ವ್ಯವಹಾರವನ್ನು ಹೇಗೆ ಪ್ರಾರಂಭಿಸುವುದು ಎಂದು ತಿಳಿಯಿರಿ

  • ಹಾರ್ಡ್‌ವೇರ್ ಅಂಗಡಿ ವ್ಯಾಪಾರವನ್ನು ನಡೆಸುವ ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ನಿರ್ವಹಣೆಯ ಅಂಶಗಳನ್ನು ತಿಳಿಯಿರಿ

  • ಹಾರ್ಡ್‌ವೇರ್ ಅಂಗಡಿ ವ್ಯಾಪಾರಕ್ಕಾಗಿ ಮಾರುಕಟ್ಟೆ ಸಂಶೋಧನೆ ಮತ್ತು ಬಿಸಿನೆಸ್‌ ಪ್ಲಾನ್‌ ಮಾಡುವುದು ಹೇಗೆ ಕಲಿಯಿರಿ

  • ಹಾರ್ಡ್‌ವೇರ್ ಅಂಗಡಿ ಬಿಸಿನೆಸ್‌ಗಾಗಿ ಗ್ರಾಹಕರನ್ನು ಆಕರ್ಷಿಸಲು ಮಾರ್ಕೆಟಿಂಗ್ ತಂತ್ರಗಳು

  • ಹಾರ್ಡ್‌ವೇರ್ ಅಂಗಡಿಯನ್ನು ನಡೆಸುವ ಹಣಕಾಸಿನ ಖರ್ಚು ವೆಚ್ಚದ ಬಗ್ಗೆ ಅರಿಯಿರಿ

 

ಅಧ್ಯಾಯಗಳು 

  • ಹಾರ್ಡ್‌ವೇರ್ ಶಾಪ್ ಬಿಸಿನೆಸ್ ಕೋರ್ಸ್‌ಗೆ ಪರಿಚಯ: ಕೋರ್ಸ್ ಮತ್ತು ಉದ್ದೇಶಗಳ ಅವಲೋಕನ ಒದಗಿಸಿ, ಜೊತೆಗೆ ಕೋರ್ಸ್ ರಚನೆ ಮತ್ತು ನೀವು ಏನನ್ನು ಕಲಿಯಲು ನಿರೀಕ್ಷಿಸಬಹುದು ಎಂಬ ಮಾಹಿತಿಯನ್ನು ಒದಗಿಸುತ್ತದೆ.
  • ಮಾರ್ಗದರ್ಶಕರನ್ನು ಭೇಟಿ ಮಾಡಿ: ಕೋರ್ಸ್‌ ಮಾರ್ಗದರ್ಶಕರ ಪರಿಚಯಮತ್ತು ಹಾರ್ಡ್‌ವೇರ್ ಶಾಪ್ ಬಿಸಿನೆಸ್‌ನಲ್ಲಿ ಅವರ ಹಿನ್ನೆಲೆ, ಅನುಭವ ಮತ್ತು ಪರಿಣತಿಯ ಬಗ್ಗೆ ಕಲಿಯುವಿರಿ.
  • ಹಾರ್ಡ್‌ವೇರ್ ಶಾಪ್ ಬಿಸಿನೆಸ್‌ ಅರ್ಥಮಾಡಿಕೊಳ್ಳುವುದು: ಹಾರ್ಡ್‌ವೇರ್ ಬಿಸಿನೆಸ್‌ ಪರಿಚಯ ಮತ್ತು ಹಾರ್ಡ್‌ವೇರ್ ಶಾಪ್ ಬಿಸಿನೆಸ್‌ನ ಮೂಲಭೂತ ಅಂಶಗಳ ಬಗ್ಗೆ  ಹಾಗೂ ಅದು ಏನನ್ನು ಒಳಗೊಂಡಿರುತ್ತದೆ ಎಂಬುದನ್ನು ಕಲಿಯುವಿರಿ.
  • ಪರಿಪೂರ್ಣ ಸ್ಥಳವನ್ನು ಹುಡುಕುವ ತಂತ್ರಗಳು: ನಿಮ್ಮ ಹಾರ್ಡ್‌ವೇರ್ ಶಾಪ್ ಬಿಸಿನೆಸ್‌ಗಾಗಿ ಸರಿಯಾದ ಸ್ಥಳವನ್ನು ಆಯ್ಕೆಮಾಡುವುದರ ಪ್ರಾಮುಖ್ಯತೆಯ ಕುರಿತು ನೀವು ಕಲಿಯುವಿರಿ ಹಾಗೂ ಸಲಹೆಗಳನ್ನು ಪಡೆಯುವಿರಿ.
  • ನಿಮ್ಮ ಹಾರ್ಡ್‌ವೇರ್ ಶಾಪ್ ಬಿಸಿನೆಸ್‌ಗೆ ಹಣಕಾಸು ಮತ್ತು ನೋಂದಣಿ: ಹಾರ್ಡ್‌ವೇರ್‌ ಶಾಪ್‌ಗೆ ಅಗತ್ಯವಿರುವ ನೋಂದಣಿ ಪ್ರಕ್ರಿಯೆ, ಹಣಕಾಸು ನಿರ್ವಹಣೆ ಮತ್ತು ಸರಿಯಾದ ಮಾಲೀಕತ್ವದ ರಚನೆಯ ಬಗ್ಗೆ ಕಲಿತುಕೊಳ್ಳುವಿರಿ.
  • ಉತ್ಪನ್ನ ಆಯ್ಕೆ ಮತ್ತು ದಾಸ್ತಾನು ನಿರ್ವಹಣೆ: ನಿಮ್ಮ ಶಾಪ್‌ಗೆ ಲಭ್ಯವಿರುವ ಹಾರ್ಡ್‌ವೇರ್‌ ಐಟೆಮ್‌ಗಳು ಮತ್ತು ಮಾರುಕಟ್ಟೆಯಬೇಡಿಕೆಯ ಬಗ್ಗೆ ಕಲಿತುಕೊಳ್ಳುತ್ತೀರಿ.
  • ಪೂರೈಕೆ ಸರಪಳಿಯನ್ನು ನಿರ್ವಹಿಸುವುದು: ಹಾರ್ಡ್‌ವೇರ್‌ ಶಾಪ್‌ ಬಿಸಿನೆಸ್‌ ನಡೆಸುವ ಲಾಜಿಸ್ಟಿಕ್ಸ್‌ ಮತ್ತು ಪೂರೈಕೆಯ ಸರಪಳಿ ನಿರ್ವಹಣೆಯ ಅಂಶಗಳನ್ನು ಈ ಮಾಡ್ಯೂಲ್‌ ತಿಳಿಸುತ್ತದೆ.
  • ಪೂರೈಕೆ ಸರಪಳಿ ಮತ್ತು ಪಾವತಿ ಪ್ರಕ್ರಿಯೆ: ಈ ಮಾಡ್ಯೂಲ್ ಹಾರ್ಡ್‌ವೇರ್ ಅಂಗಡಿ ವ್ಯಾಪಾರಕ್ಕಾಗಿ ಪೂರೈಕೆದಾರರು ಮತ್ತು ಪಾವತಿ ಪ್ರಕ್ರಿಯೆಯ ವಿವರಗಳನ್ನು ಒಳಗೊಂಡಿದೆ.
  • ನಿಮ್ಮ ಹಾರ್ಡ್‌ವೇರ್ ಅಂಗಡಿಯನ್ನು ಹೊಂದಿಸುವ ವಿಧಾನ: ಅಂಗಡಿಯನ್ನು ವಿನ್ಯಾಸಗೊಳಿಸುವುದು ಮತ್ತು ಹೊಂದಿಸುವುದು  ಹಾಗೂ ಪ್ರದರ್ಶನಗಳನ್ನು ನಿರ್ವಹಿಸುವುದು ಸೇರಿದಂತೆ ಭೌತಿಕ ಅಂಶಗಳನ್ನು ಒಳಗೊಂಡಿದೆ.
  • ಹೊಸ ಸ್ಟಾಕ್‌ ಮತ್ತು ಗೋಡೌನ್‌ ನಿರ್ವಹಣೆ: ಈ ಮಾಡ್ಯೂಲ್ ಸ್ಟಾಕ್ ಮತ್ತು ಗೋದಾಮಿನ ಕಾರ್ಯಾಚರಣೆಗಳನ್ನು ನಿರ್ವಹಿಸಲು ಸಾಫ್ಟ್‌ವೇರ್ ಮತ್ತು ತಂತ್ರಜ್ಞಾನವನ್ನು ಬಳಸುವ ಮಾಹಿತಿಯನ್ನು ಒಳಗೊಂಡಂತೆ ತಾಂತ್ರಿಕ ಅಂಶಗಳನ್ನು ತಿಳಿಸುತ್ತದೆ.
  • ಬೆಲೆ ಮತ್ತು ಲಾಭ ಯೋಜನೆ: ಈ ಮಾಡ್ಯೂಲ್ ಬೆಲೆ ತಂತ್ರಗಳು, ಮುನ್ಸೂಚನೆ ಮತ್ತು ಲಾಭಕ್ಕಾಗಿ ಬಜೆಟ್‌ನ ಮಾಹಿತಿಯನ್ನು ಒಳಗೊಂಡಂತೆ ಹಾರ್ಡ್‌ವೇರ್ ಅಂಗಡಿ ವ್ಯಾಪಾರವನ್ನು ನಡೆಸುವ ಹಣಕಾಸಿನ ಅಂಶಗಳನ್ನು ಒಳಗೊಂಡಿದೆ.
  • ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳು: ಹಾರ್ಡ್‌ವೇರ್ ಅಂಗಡಿಗೆ ಗ್ರಾಹಕರನ್ನು ಆಕರ್ಷಿಸಲು ಬಳಸಬಹುದಾದ ವಿವಿಧ ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ನೀವು ಕಲಿಯುತ್ತೀರಿ.
  • ಸಂಗ್ರಹಣೆ ಮತ್ತು ಆದೇಶ ನಿರ್ವಹಣೆ: ಟೆಂಡರ್‌ಗಳು, ಬಿಡ್ಡಿಂಗ್‌ ಮತ್ತು ಬಲ್ಕ್‌ ಆರ್ಡರ್‌ ಮಾಹಿತಿಯನ್ನು ಒಳಗೊಂಡಂತೆ ಹಾರ್ಡ್‌ವೇರ್‌ ಶಾಪ್‌ ಬಿಸಿನೆಸ್‌ ಸಂಗ್ರಹಣೆ ಪ್ರಕ್ರಿಯೆಯ ಬಗ್ಗೆ ಮಾಹಿತಿ ಲಭ್ಯವಿದೆ. 
  • ಗ್ರಾಹಕರನ್ನು ಆಕರ್ಷಿಸುವ ಬಗ್ಗೆ: ಹಾರ್ಡ್‌ವೇರ್ ಶಾಪ್ ಬಿಸಿನೆಸ್‌ನ ಗ್ರಾಹಕರ ಸ್ವಾಧೀನದ ಅಂಶದ ಬಗ್ಗೆ ತಿಳಿಸಿ, ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಸಲಹೆಗಳು ಮತ್ತು ತಂತ್ರಗಳನ್ನು ಒದಗಿಸುತ್ತದೆ.
  • ಅನುಕರಣೀಯ ಗ್ರಾಹಕ ಸೇವಾ ಮಾನದಂಡಗಳು: ಈ ಮಾಡ್ಯೂಲ್ ಹಾರ್ಡ್‌ವೇರ್ ಶಾಪ್ ಬಿಸಿನೆಸ್‌ನ ಗ್ರಾಹಕ ಸೇವಾ ಅಂಶದ ಬಗ್ಗೆ ತಿಳಿಹೇಳಿ ಉತ್ತಮ ಗ್ರಾಹಕ ಸೇವೆಯನ್ನು ಒದಗಿಸಲು ಸಲಹೆ ಮತ್ತು ತಂತ್ರಗಳನ್ನು ಒದಗಿಸುತ್ತದೆ.
  • ಉದ್ಯೋಗಿಗಳ ನೇಮಕಾತಿ ಮತ್ತು ತರಬೇತಿ: ಹಾರ್ಡ್‌ವೇರ್‌ ಶಾಪ್‌ ಬಿಸಿನೆಸ್‌ಗೆ ಅಗತ್ಯವಿರುವ ಮಾನವ ಸಂಪನ್ಮೂಲ ಮತ್ತು ಅವರಿಗೆ ತರಬೇತಿ ನೀಡುವ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.
  • ಹಣಕಾಸು ಮತ್ತು ತೆರಿಗೆ ಯೋಜನೆ: ಬಜೆಟ್‌ ಮತ್ತು ಲೆಕ್ಕಪತ್ರ ನಿರ್ವಹಣೆಯ ಮಾಹಿತಿಯ ಜೊತೆಗೆ, ಹಾರ್ಡ್‌ವೇರ್‌ ಶಾಪ್‌ ನಡೆಸುವ ಹಣಕಾಸು ಮತ್ತು ತೆರಿಗೆ ನಿರ್ವಹಣೆಯ ಬಗ್ಗೆ ತಿಳಿಸುತ್ತದೆ.
  • ಮಾರ್ಗದರ್ಶಕರ ಕೊನೆಯ ಮಾತು: ಹಾರ್ಡ್‌ವೇರ್‌ ಶಾಪ್‌ ನಡೆಸಲು ಸಂಬಂಧಸಿದ ವಿಷಯಗಳ ಕುರಿತು ಮಾರ್ಗದರ್ಶಕರು ನಿಮಗೆ ಸಲಹೆ ಮತ್ತು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.

 

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.