ಈ ಕೋರ್ಸ್ ಒಳಗೊಂಡಿದೆ
ನೀವು ಲಾಜಿಸ್ಟಿಕ್ಸ್ ಬಿಸಿನೆಸ್ ಆರಂಭಿಸಲು ಬಯಸುವುದಾದರೆ ಸರಿಯಾದ ಸ್ಥಳದಲ್ಲಿದ್ದೀರಿ. ಲಾಜಿಸ್ಟಿಕ್ಸ್ ಬಿಸಿನೆಸ್ ಎಂದರೇನು ಮತ್ತು ಅದನ್ನು ಹೇಗೆ ಆರಂಭಿಸಬೇಕು ಎಂಬುದರ ಕುರಿತು ಸಮಗ್ರ ಮಾಹಿತಿಯನ್ನು ನೀಡಲು ಈ ಕೋರ್ಸ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಭಾರತದ ಅತಿದೊಡ್ಡ ಲಾಜಿಸ್ಟಿಕ್ಸ್ ಸಂಸ್ಥೆ VRL ಗ್ರೂಪ್‌ನ ಅಧ್ಯಕ್ಷರಾದ ವಿಜಯ್ ಸಂಕೇಶ್ವರ್ ನೇತೃತ್ವದಲ್ಲಿ ಈ ಉದ್ಯಮದಲ್ಲಿ ಯಶಸ್ವಿಯಾಗಲು ಏನೆಲ್ಲ ಕೌಶಲ್ಯಗಳು ಬೇಕು ಎಂಬುವುದನ್ನು ಈ ಕೋರ್ಸ್ ಮೂಲಕ ಮಾರ್ಗದರ್ಶನ ನೀಡುತ್ತಾರೆ.
ಲಾಜಿಸ್ಟಿಕ್ಸ್ ಬಿಸಿನೆಸ್ ಮತ್ತು ಮಾರುಕಟ್ಟೆ ಸಂಶೋಧನೆಯನ್ನು ಅರ್ಥಮಾಡಿಕೊಳ್ಳಯವುದರಿಂದ ಹಿಡಿದು, ಬಿಸಿನೆಸ್ ಪ್ಲಾನ್, ಬಂಡವಾಳ ಹಾಗೂ ನಿಮ್ಮ ಸ್ವಂತ ಲಾಜಿಸ್ಟಿಕ್ಸ್ ಬಿಸಿನೆಸ್ ಆರಂಭಿಸುವುದು ಹೇಗೆ ಎಂಬುವುದನ್ನು ಈ ಕೋರ್ಸ್ ಮೂಲಕ ತಿಳಿದುಕೊಳ್ಳಬಹುದು. ಪರಿಣಾಮಕಾರಿ ಪೂರೈಕೆ ಸರಪಳಿ ನಿರ್ವಹಣೆಯಿಂದ ಬಲವಾದ ಬ್ರಾಂಡ್ ಅನ್ನು ನಿರ್ಮಿಸುವವರೆಗೆ ಲಾಜಿಸ್ಟಿಕ್ಸ್ ಕಂಪನಿಯನ್ನು ಯಶಸ್ವಿಯಾಗಿಸುವ ಪ್ರಮುಖ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೋರ್ಸ್ ಮೂಲಕ ಪಡೆಯಿರಿ.
ಭಾರತದಲ್ಲಿ ಲಾಜಿಸ್ಟಿಕ್ಸ್ ಉದ್ಯಮವನ್ನು ಕೇಂದ್ರೀಕರಿಸಿ, ಈ ಮಾರುಕಟ್ಟೆಯಲ್ಲಿ ಲಾಜಿಸ್ಟಿಕ್ಸ್ ಬಿಸಿನೆಸ್ ಆರಂಭಿಸುವಲ್ಲಿ ಇರುವ ನಿರ್ದಿಷ್ಟ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಕಲಿಯುವಿರಿ. ಈ ಕೋರ್ಸ್‌ನ ಕೊನೆಯಲ್ಲಿ ಲಾಜಿಸ್ಟಿಕ್ಸ್ ಕಂಪೆನಿಯನ್ನು ಆರಂಭಿಸಲು ಹೇಗೆ ಅಡಿಪಾಯ ಹಾಕಬೇಕು, ನಿಮ್ಮ ಸ್ವಂತ ಬಿಸಿನೆಸ್ ಆರಂಭಿಸಲು ಅಥವಾ ನಿಮ್ಮ ಬಿಸಿನೆಸ್ ಅನ್ನು ಲಾಜಿಸ್ಟಿಕ್ ಗೆ ವಿಸ್ತರಿಸಲು ಬಯಸುವವರಿಗೆ ಈ ಕೋರ್ಸ್ ಸೂಕ್ತವಾಗಿದೆ.
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಲಾಜಿಸ್ಟಿಕ್ಸ್ ಬಿಸಿನೆಸ್ ಆರಂಭಿಸಲು ಆಸಕ್ತಿ ಹೊಂದಿರುವವರು
ಅಸ್ತಿತ್ವದಲ್ಲಿರುವ ಬಿಸಿನೆಸ್ ಮ್ಯಾನ್‌ಗಳು ತಮ್ಮ ಕಾರ್ಯಾಚರಣೆಗಳನ್ನು ಲಾಜಿಸ್ಟಿಕ್ಸ್ ಉದ್ಯಮಕ್ಕೆ ವಿಸ್ತರಿಸಲು ಬಯಸುವವರು
ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಕೆಲಸ ಮಾಡುವ ವೃತ್ತಿಪರರು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಬಯಸುತ್ತಿರುವವರು
ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಹೂಡಿಕೆದಾರರು
ಲಾಜಿಸ್ಟಿಕ್ಸ್ ಉದ್ಯಮದ ಕಾರ್ಯಾಚರಣೆಗಳ ಬಗ್ಗೆ ತಿಳುವಳಿಕೆಯನ್ನು ಪಡೆಯಲು ಬಯಸುವ ಬಿಸಿನೆಸ್ ಲಾಜಿಸ್ಟಿಕ್ಸ್ ಅಧ್ಯಯನ ಮಾಡುವ ವಿದ್ಯಾರ್ಥಿಗಳು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಮಾರುಕಟ್ಟೆ ಸಂಶೋಧನೆ, ಬಿಸಿನೆಸ್ ಪ್ಲಾನ್ ಮತ್ತು ಲಾಜಿಸ್ಟಿಕ್ಸ್ ಬಿಸಿನೆಸ್ ಆರಂಭಿಸುವುದು ಹೇಗೆ ಎಂಬುವುದನ್ನು ಕಲಿಯಿರಿ
ಬಲವಾದ ಬ್ರ್ಯಾಂಡ್ ಅನ್ನು ನಿರ್ಮಿಸುವಂತಹ ಯಶಸ್ವಿ ಕಂಪನಿಯ ಅಗತ್ಯ ಘಟಕಗಳ ಬಗ್ಗೆ ತಿಳಿಯಿರಿ
ಭಾರತದಲ್ಲಿ ಲಾಜಿಸ್ಟಿಕ್ಸ್ ಬಿಸಿನೆಸ್ ಆರಂಭಿಸುವ ನಿರ್ದಿಷ್ಟ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ತಿಳಿಯಿರಿ
ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳು, ಸಾರಿಗೆ ಮತ್ತು ಗ್ರಾಹಕ ಸೇವೆಯಂತಹ ಬಿಸಿನೆಸ್ ನಿರ್ವಹಿಸಲು ಅಗತ್ಯವಿರುವ ಕೌಶಲ್ಯಗಳ ಬಗ್ಗೆ ತಿಳಿಯಿರಿ
ನಿಮ್ಮ ಲಾಜಿಸ್ಟಿಕ್ಸ್ ಬಿಸಿನೆಸ್ ಅನ್ನು ಬೆಳೆಸಲು ಮತ್ತು ಸ್ಕೇಲಿಂಗ್ ಮಾಡಲು ತಂತ್ರಗಳ ಬಗ್ಗೆ ತಿಳಿಯಿರಿ
ಅಧ್ಯಾಯಗಳು