4.4 from 29.2K ರೇಟಿಂಗ್‌ಗಳು
 3Hrs 41Min

ಸೂಪರ್‌ ಮಾರ್ಕೆಟ್ ಬಿಸಿನೆಸ್‌ ನಿರ್ಮಿಸುವುದು ಹೇಗೆ ಎಂದು ತಿಳಿಯಿರಿ

ಈ ಸಾಬೀತಾದ ತಂತ್ರಗಳೊಂದಿಗೆ ಯಶಸ್ವಿ ಸೂಪರ್ ಮಾರ್ಕೆಟ್ ಬಿಸಿನೆಸ್ ನಿರ್ಮಿಸುವ ನಿಟ್ಟಿನಲ್ಲಿ ರಹಸ್ಯಗಳನ್ನು ಅನ್ಲಾಕ್ ಮಾಡಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

How Start A Supermarket Business?
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(147)
ಬಿಸಿನೆಸ್ ಕೋರ್ಸ್‌ಗಳು(105)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 41Min
 
ಪಾಠಗಳ ಸಂಖ್ಯೆ
20 ವೀಡಿಯೊಗಳು
 
ನೀವು ಕಲಿಯುವುದು
ಇನ್ಶೂರೆನ್ಸ್ ಪ್ಲಾನಿಂಗ್ ,ಸ್ಟಾಕ್ ಮಾರ್ಕೆಟ್ ಹೂಡಿಕೆ,ಬಿಸಿನೆಸ್ ಅವಕಾಶಗಳು, Completion Certificate
 
 

ಸೂಪರ್ ಮಾರ್ಕೆಟ್ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸಬೇಕು ಎಂದು ನೀವು ಯೋಚಿಸುತ್ತಿದ್ದರೆ ಮತ್ತು ಅದರ ಸಿದ್ದತೆಯನ್ನು ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿದುಕೊಳ್ಳಲು ಬಯಸಿದ್ದರೆ, ಈ ಕೋರ್ಸ್ ನಿಮಗೆ ಪರಿಪೂರ್ಣ ಆರಂಭಿಕ ಹಂತದಿಂದ ಮಾಹಿತಿ ಒದಗಿಸಲಿದೆ. "ಸೂಪರ್ ಮಾರ್ಕೆಟ್ ಕೋರ್ಸ್- ಪ್ರತಿ ತಿಂಗಳು 10 ಲಕ್ಷದವರೆಗೆ ಗಳಿಸಿ" ಎಂಬ ಕೋರ್ಸ್ ನಿಮಗೆ ಯಶಸ್ವಿ ಉದ್ಯಮವನ್ನು ಕಟ್ಟಲು ಮತ್ತು ಮುನ್ನಡೆಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ. ಭಾರತದಲ್ಲಿ ಯಶಸ್ವಿ ಸೂಪರ್ ಮಾರ್ಕೆಟ್ ಬಿಸಿನೆಸ್ ನಿರ್ಮಿಸುವ ನಿಟ್ಟಿನಲ್ಲಿ ಜ್ಞಾನವನ್ನು ನೀಡಲು ಅನುಭವಿ ಉದ್ಯಮ ತಜ್ಞರು ಈ ಕೋರ್ಸ್ ಅನ್ನು ಮುನ್ನಡೆಸುತ್ತಾರೆ.

ಈ ಕೋರ್ಸ್ ಮಾರ್ಕೆಟ್ ರಿಸರ್ಚ್, ಬಿಸಿನೆಸ್ ಪ್ಲಾನ್ , ಹಣಕಾಸು ನಿರ್ವಹಣೆ, ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್, ಆಪರೇಷನ್ಸ್ ಮ್ಯಾನೇಜ್ಮೆಂಟ್ ಮತ್ತು ಕಸ್ಟಮರ್ ಸರ್ವಿಸ್ ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಿದೆ. ಸೂಕ್ತವಾದ ಗ್ರಾಹಕರ ನೆಲೆಯನ್ನು ಗುರುತಿಸಲು ಮತ್ತು ಗುರಿಯಾಗಿಸಲು ಮಾರ್ಕೆಟ್ ರಿಸರ್ಚ್ ಅನ್ನು ಹೇಗೆ ನಡೆಸುವುದು, ಜೊತೆಗೆ ಸೂಪರ್ ಮಾರ್ಕೆಟ್ ಬಿಸಿನೆಸ್ ನ ಯಶಸ್ವೀ ತಂತ್ರಗಳನ್ನು ಮತ್ತು ಗುರಿಗಳನ್ನು ವಿವರಿಸುವ ನಿಟ್ಟಿನಲ್ಲಿ ಸೂಪರ್ ಮಾರ್ಕೆಟ್ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ಅಭಿವೃದ್ಧಿಪಡಿಸುವುದು ಜೊತೆಗೆ ಬಜೆಟಿಂಗ್ ಮತ್ತು ಫೋರ್ ಕ್ಯಾಸ್ಟಿಂಗ್ ಮಾಡುವುದನ್ನು ಇದು ಒಳಗೊಂಡಿರುತ್ತದೆ. ಇದರೊಟ್ಟಿಗೆ ಹಣಕಾಸಿನ ಯೋಜನೆಯನ್ನು ಸಹ ಹೇಗೆ ರೂಪಿಸಬೇಕು ಎಂಬುದನ್ನು ನೀವು ಇಲ್ಲಿ ಕಲಿಯುವಿರಿ.

ಹೆಚ್ಚುವರಿಯಾಗಿ, ಪ್ರಬಲ ಬ್ರಾಂಡ್ ಅನ್ನು ಹೇಗೆ ನಿರ್ಮಿಸುವುದು ಮತ್ತು ಪೊಟೆನ್ಷಿಯಲ್ ಗ್ರಾಹಕರನ್ನು ತಲುಪಲು ಪರಿಣಾಮಕಾರಿಯಾಗಿ ಹೇಗೆ ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಸೂಪರ್ ಮಾರ್ಕೆಟ್ ಬಿಸಿನೆಸ್ ಗೆ ಅಗತ್ಯವಿರುವ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್‌ನ ಪ್ರಾಮುಖ್ಯತೆಯ ಬಗ್ಗೆ ಕೂಡ ನೀವು ಕಲಿಯುವಿರಿ. ದಾಸ್ತಾನು ನಿರ್ವಹಣೆ, ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ನಿರ್ವಹಣೆ ಸೇರಿದಂತೆ ವಿವಿಧ ಕಾರ್ಯಾಚರಣೆಗಳ ನಿರ್ವಹಣೆಯ ಬಗ್ಗೆ ವಿವರವಾಗಿ ಕಲಿಯುವಿರಿ.  

ಈ ಕೋರ್ಸ್ ಗ್ರಾಹಕ ಸೇವೆಯ ಪ್ರಾಮುಖ್ಯತೆ ಬಗ್ಗೆ ಮತ್ತು ಗ್ರಾಹಕರಿಗೆ ಸಕಾರಾತ್ಮಕ ಅನುಭವವನ್ನು ಹೇಗೆ ನೀಡುವುದು ಎಂಬುದರ ಬಗ್ಗೆ ಅಗತ್ಯ ಮಾಹಿತಿಯನ್ನು ಇದು ನೀಡುತ್ತದೆ. ಇದರ ಜೊತೆಗೆ ನಿಷ್ಠಾವಂತ ಗ್ರಾಹಕರ ನೆಲೆಯನ್ನು ಹೇಗೆ ನಿರ್ಮಿಸುವುದು, ಗ್ರಾಹಕರ ರಿಟೆಂಷನ್ ಅನ್ನು ಹೇಗೆ ಹೆಚ್ಚಿಸುವುದು ಮತ್ತು ನಿಮ್ಮ ಸೂಪರ್ ಮಾರ್ಕೆಟ್ ಬಿಸಿನೆಸ್ ನ ಖ್ಯಾತಿಯನ್ನು ಧನಾತ್ಮಕವಾಗಿ  ಹೇಗೆ ನಿರ್ಮಿಸುವುದು ಎಂಬುದನ್ನು ನೀವು ಕಲಿಯುವಿರಿ.

ಯಶಸ್ವಿ ಸೂಪರ್ ಮಾರ್ಕೆಟ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ಮುನ್ನಡೆಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಈ ಕೋರ್ಸ್ ನಿಮಗೆ ನೀಡುತ್ತದೆ. ತಮ್ಮ ಸೂಪರ್ ಮಾರ್ಕೆಟ್ ಬಿಸಿನೆಸ್ ಅನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಬಯಸುವ ಬಿಸಿನೆಸ್ ಮಾಲೀಕರಿಗೆ ಕೂಡ ಇದು ಹೆಚ್ಚು ಸೂಕ್ತವಾಗಿದೆ.

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ತಮ್ಮ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಸೂಪರ್ ಮಾರ್ಕೆಟ್ ಮಾಲೀಕರು

  • ತಮ್ಮ ಕಾರ್ಯಾಚರಣೆಗಳನ್ನು ಸುಧಾರಿಸಲು ಮತ್ತು ತಮ್ಮ ಆದಾಯವನ್ನು ಹೆಚ್ಚಿಸಲು ಬಯಸುವ ಸೂಪರ್ ಮಾರ್ಕೆಟ್ ಬಿಸಿನೆಸ್ ಮಾಲೀಕರು 

  • ಸೂಪರ್ ಮಾರ್ಕೆಟ್ ಬಿಸಿನೆಸ್ ನಲ್ಲಿ ಆಸಕ್ತಿ ಹೊಂದಿರುವ ಉದ್ಯಮಿಗಳು

  • ಹೊಸ ಕೌಶಲ್ಯ ಮತ್ತು ಜ್ಞಾನವನ್ನು ಪಡೆಯಲು ಬಯಸುವ ಸೂಪರ್ ಮಾರ್ಕೆಟ್ ಉದ್ಯಮದ ಮ್ಯಾನೇಜರ್ ಗಳು ಮತ್ತು ಸೂಪರ್ವೈಸರ್ಗಳು  

  • ಸೂಪರ್ ಮಾರ್ಕೆಟ್ ಮ್ಯಾನೇಜ್ಮೆಂಟ್ ಅಥವಾ ಆಪರೇಷನ್ಸ್ ನಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ವ್ಯಕ್ತಿಗಳು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಯಶಸ್ವಿ ಸೂಪರ್ ಮಾರ್ಕೆಟ್ ಬಿಸಿನೆಸ್ ನಿರ್ಮಿಸುವ ಮತ್ತು ನಿರ್ವಹಿಸುವ ಬಗೆಗಿನ ಮೂಲಭೂತ ಅಂಶಗಳು

  • ಸ್ಟೋರ್ ಒಳಾಂಗಣ ವಿನ್ಯಾಸ, ಉತ್ಪನ್ನ ವರ್ಗೀಕರಣ, ಪೂರೈಕೆದಾರರ ಸಂಬಂಧ ಮತ್ತು ಸಾಲ ನಿರ್ವಹಣೆ ಮುಂತಾದ ತಂತ್ರಗಳ ಬಗ್ಗೆ ತಿಳಿಯಿರಿ

  • ಸೂಪರ್ ಮಾರ್ಕೆಟ್ ಬಿಸಿನೆಸ್ ಗಾಗಿ ಬಿಸಿನೆಸ್ ಪ್ಲಾನ್ ಮತ್ತು ಹಣಕಾಸು ನಿರ್ವಹಣೆಯ ನಿರ್ಣಾಯಕ ಅಂಶಗಳ ಬಗ್ಗೆ ತಿಳಿಯಿರಿ

  • ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ನ ಪ್ರಾಮುಖ್ಯತೆ ಬಗ್ಗೆ ಮತ್ತು ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ತಿಳಿಯಿರಿ 

  • ದಾಸ್ತಾನು ನಿರ್ವಹಣೆ, ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಮುಂತಾದ ನಿರ್ಣಾಯಕ ಅಂಶಗಳ ಬಗ್ಗೆ ತಿಳಿಯುತ್ತೀರಿ

 

ಅಧ್ಯಾಯಗಳು 

  • ಸೂಪರ್ ಮಾರ್ಕೆಟ್ ಬಿಸಿನೆಸ್ ಕೋರ್ಸ್ ಪರಿಚಯ: ಈ ಮಾಡ್ಯೂಲ್ ಆಬ್ಜೆಕ್ಟಿವ್ಸ್ ಮತ್ತು ಲರ್ನಿಂಗ್ ಔಟ್ಕಮ್ಸ್  ಒಳಗೊಂಡಂತೆ ಕೋರ್ಸ್‌ನ ಅವಲೋಕನವನ್ನು ಒದಗಿಸುತ್ತದೆ, ಜೊತೆಗೆ ಸೂಪರ್ ಮಾರ್ಕೆಟ್ ಬಿಸಿನೆಸ್ ಬಗ್ಗೆ ಪರಿಚಯವನ್ನು ಒದಗಿಸುತ್ತದೆ
  • ನಿಮ್ಮ ಮಾರ್ಗದರ್ಶಕರನ್ನು ಭೇಟಿ ಮಾಡಿ: ಈ ಮಾಡ್ಯೂಲ್ ಕೋರ್ಸ್ ನ ಮಾರ್ಗದರ್ಶಕರನ್ನು ಪರಿಚಯಿಸುತ್ತದೆ, ಯಶಸ್ವಿ ಸೂಪರ್ ಮಾರ್ಕೆಟ್ ನಿರ್ಮಿಸುವ ಮತ್ತು ನಿರ್ವಹಿಸುವ ನಿಟ್ಟಿನಲ್ಲಿ ಅವರು ಉತ್ತಮ ಅನುಭವವನ್ನು ಹೊಂದಿದ್ದಾರೆ   
  • ಫಂಡಿಂಗ್ ಮತ್ತು ಹಣಕಾಸು ಯೋಜನೆ: ಈ ಮಾಡ್ಯೂಲ್ ನಲ್ಲಿ ಬಂಡವಾಳ ಹೊಂದಿಸುವುದು, ಬಜೆಟಿಂಗ್ ಮಾಡುವುದು, ಫೋರ್ ಕಾಸ್ಟಿಂಗ್ ಮತ್ತು ಹಣಕಾಸು ಯೋಜನೆ ಸೇರಿದಂತೆ ಈ ಬಿಸಿನೆಸ್ ಪ್ರಾರಂಭಿಸುವ ಕುರಿತ ಹಣಕಾಸಿನ ಅಂಶಗಳನ್ನು ತಿಳಿಯಿರಿ
  • ಸೂಕ್ತ ಸ್ಥಳ ಆಯ್ಕೆ : ಸೂಪರ್ ಮಾರ್ಕೆಟ್ ಬಿಸಿನೆಸ್ ಪ್ರಾರಂಭಿಸುವ ನಿಟ್ಟಿನಲ್ಲಿ ಸ್ಥಳದ ಪ್ರಾಮುಖ್ಯತೆ ಮತ್ತು ಅದನ್ನು ಹೇಗೆ ಗುರುತಿಸುವುದು ಎಂಬುದನ್ನು ತಿಳಿಯಿರಿ
  • ರೆಗ್ಯುಲೇಟರಿ ಮತ್ತು ಲೀಗಲ್ ಅವಶ್ಯಕತೆಗಳು: ಸೂಪರ್ ಮಾರ್ಕೆಟ್ ಬಿಸಿನೆಸ್ ಪ್ರಾರಂಭಿಸಲು ಅಗತ್ಯವಿರುವ ಲೀಗಲ್ ಮತ್ತು ರೆಗ್ಯುಲೇಟರಿ ಅವಶ್ಯಕತೆಗಳ ಬಗ್ಗೆ ಮತ್ತು ಬಿಸಿನೆಸ್ ನೋಂದಾಯಿಸುವುದರ ಬಗ್ಗೆ ತಿಳಿಯಿರಿ
  • ಸಿಬ್ಬಂದಿಗಳ ನಿರ್ವಹಣೆ: ಈ ಮಾಡ್ಯೂಲ್ ನಲ್ಲಿ ನೇಮಕಾತಿ, ತರಬೇತಿ ಮತ್ತು ಉದ್ಯೋಗಿಗಳನ್ನು ನಿರ್ವಹಿಸುವುದರ ಕುರಿತ ಮೂಲಭೂತ ಅಂಶಗಳನ್ನು ತಿಳಿಯಿರಿ
  • ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ತಂತ್ರಗಳು: ಈ ಮಾಡ್ಯೂಲ್ ಪ್ರಬಲ ಬ್ರಾಂಡ್ ಐಡೆಂಟಿಟಿ ರಚಿಸುವುದು, ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪೊಟೆನ್ಷಿಯಲ್ ಗ್ರಾಹಕರನ್ನು ತಲುಪುವುದರ ಬಗ್ಗೆ ತಿಳಿಸುತ್ತದೆ
  • ಸ್ಟೋರ್ ಇಂಟೀರಿಯರ್ ಡಿಸೈನ್: ಕಸ್ಟಮರ್ ಎಂಗೇಜ್ಮೆಂಟ್ ಮತ್ತು ಸೇಲ್ಸ್ ಅನ್ನು ಹೆಚ್ಚಿಸಲು ಆಕರ್ಷಕ ಮತ್ತು ಕ್ರಿಯಾತ್ಮಕ ಸ್ಟೋರ್ ಇಂಟೀರಿಯರ್ ಡಿಸೈನ್ ಮಾಡುವ ಬಗ್ಗೆ ತಿಳಿಯಿರಿ 
  • ಮರ್ಚಂಡೈಸಿಂಗ್ ಮತ್ತು ಡಿಸ್ಪ್ಲೇ ಟೆಕ್ನಿಕ್ಸ್: ಗ್ರಾಹಕರಿಗೆ ಹುಡುಕಲು ಮತ್ತು ಖರೀದಿಸಲು ಸುಲಭವಾಗುವ ರೀತಿಯಲ್ಲಿ ಉತ್ಪನ್ನಗಳನ್ನು ಆರ್ಗನೈಜ್  ಮತ್ತು ಡಿಸ್ಪ್ಲೇ ಮಾಡುವ ತಂತ್ರಗಳ ಬಗ್ಗೆ ಮಾಹಿತಿ
  • ಸಪ್ಲಯರ್ ರಿಲೇಶನ್ ಶಿಪ್ ಮತ್ತು ಪ್ರೊಕ್ಯೂರ್ಮೆಂಟ್: ಸಪ್ಲಯರ್ ರಿಲೇಶನ್ ಶಿಪ್ ನಿರ್ಮಿಸಲು ಮತ್ತು ನಿರ್ವಹಿಸಲು ಜೊತೆಗೆ ಕ್ರೆಡಿಟ್ ಮತ್ತು ಪಾವತಿ ನಿಯಮಗಳನ್ನು ನಿರ್ವಹಿಸಲು ಉತ್ತಮ ಅಭ್ಯಾಸಗಳ ಬಗ್ಗೆ ಕಲಿಯಿರಿ
  • ಬೆಲೆ ಮತ್ತು ಮಾರಾಟ ತಂತ್ರಗಳು: ಸೂಪರ್ ಮಾರ್ಕೆಟ್ ಬಿಸಿನೆಸ್ ನಲ್ಲಿ ಉತ್ಪನ್ನಗಳ ಬೆಲೆ ನಿಗದಿ ಪಡಿಸುವ ಬಗ್ಗೆ ಮತ್ತು ರಿಯಾಯಿತಿಗಳನ್ನು ನೀಡುವ ತಂತ್ರಗಳ ಬಗ್ಗೆ ತಿಳಿಯಿರಿ
  • ಇನ್ವೆಂಟರಿ ನಿಯಂತ್ರಣ ಮತ್ತು ಆಪ್ಟಿಮೈಸೇಶನ್: ಸರಿಯಾಗಿ ಇನ್ವೆಂಟರಿ ನಿರ್ವಹಿಸುವುದು ಜೊತೆಗೆ ತ್ಯಾಜ್ಯ ಮತ್ತು ನಷ್ಟವನ್ನು ಕಡಿಮೆ ಮಾಡುವುದು ಸೇರಿದಂತೆ ದಾಸ್ತಾನು ನಿರ್ವಹಿಸುವ ಮೂಲಭೂತ ಅಂಶಗಳ ಬಗ್ಗೆ ತಿಳಿಯಿರಿ
  • ಇ-ಕಾಮರ್ಸ್ ಮತ್ತು ಡೆಲಿವರಿ ಸರ್ವಿಸ್ ಗಳು: ಸೂಪರ್ ಮಾರ್ಕೆಟ್ ಬಿಸಿನೆಸ್ ನಲ್ಲಿ ಆನ್‌ಲೈನ್ ಆರ್ಡರ್ ಮತ್ತು ಹೋಮ್ ಡೆಲಿವರಿ ಕುರಿತ ಮೂಲಭೂತ ಅಂಶಗಳನ್ನು ತಿಳಿಯಿರಿ 
  • ಹಣಕಾಸು ಮತ್ತು ಪರ್ಫಾರ್ಮೆನ್ಸ್ ಮ್ಯಾನೇಜ್ಮೆಂಟ್ : ಬಜೆಟಿಂಗ್, ಫೋರ್ ಕಾಸ್ಟಿಂಗ್ ಮತ್ತು ಹಣಕಾಸು ಯೋಜನೆ ಸೇರಿದಂತೆ ಯಶಸ್ವಿಯಾಗಿ ಈ ಬಿಸಿನೆಸ್ ಅನ್ನು ನಡೆಸಲು ಅಗತ್ಯವಿರುವ ಹಣಕಾಸಿನ ಅಂಶಗಳನ್ನು ತಿಳಿಯಿರಿ
  • ಕಸ್ಟಮರ್ ಸರ್ವಿಸ್ ಮತ್ತು ರಿಟೆನ್ಷನ್ : ಕಸ್ಟಮರ್ ಸರ್ವಿಸ್ ನ ಪ್ರಾಮುಖ್ಯತೆ ಮತ್ತು ಗ್ರಾಹಕ ಅನುಭವವನ್ನು ಸಕಾರಾತ್ಮಕವಾಗಿ ಹೇಗೆ ಹೆಚ್ಚಿಸುವುದು ಮತ್ತು ನಿಷ್ಠಾವಂತ ಗ್ರಾಹಕರ ನೆಲೆಯನ್ನು ನಿರ್ಮಿಸುವುದರ ಬಗ್ಗೆ ತಿಳಿಯಿರಿ
  • ವಿಸ್ತರಣೆ ಮತ್ತು ಬಿಸಿನೆಸ್ ಸ್ಕೇಲೆಬಿಲಿಟಿ: ಯಶಸ್ವಿ ಸೂಪರ್ ಮಾರ್ಕೆಟ್ ಬಿಸಿನೆಸ್ ಅನ್ನು ವಿಸ್ತರಿಸುವ ಮತ್ತು ರೆಪ್ಲಿಕೇಟ್ ಮಾಡುವ ತಂತ್ರಗಳ ಬಗ್ಗೆ ತಿಳಿಯಿರಿ
  • ರಿಸ್ಕ್ ಮ್ಯಾನೇಜ್ಮೆಂಟ್ ಮತ್ತು ಮಿಟಿಗೇಷನ್: ಕಳ್ಳತನ ಮತ್ತು ವಂಚನೆಯಂತಹ ಬಿಸಿನೆಸ್ ನ ಅಪಾಯಗಳನ್ನು ಗುರುತಿಸುವ ಮತ್ತು ತಗ್ಗಿಸುವ ಕುರಿತ ಮೂಲಭೂತ ಅಂಶಗಳ ಬಗ್ಗೆ ತಿಳಿಯಿರಿ
  • ಕಂಪ್ಲಿಯನ್ಸ್ ಮತ್ತು ಗವರ್ನೆನ್ಸ್: ಸೂಪರ್ ಮಾರ್ಕೆಟ್ ಬಿಸಿನೆಸ್ ಅನ್ನು ನಡೆಸಲು ಅಗತ್ಯವಿರುವ ಲೀಗಲ್ ಮತ್ತು ರೇಗುಲೇಟರಿ ಅವಶ್ಯಕತೆ  ಸೇರಿದಂತೆ ಸಂಬಂಧಿತ ಕಾನೂನು ಮತ್ತು ರೇಗುಲೇಷನ್ಸ್ ಬಗ್ಗೆ ತಿಳಿಯಿರಿ
  • ಈ ಬಿಸಿನೆಸ್ ಪ್ರಾರಂಭಿಸುವುದು ಮತ್ತು ಬೆಳೆಸುವುದು: ಅತ್ಯಂತ ಯಶಸ್ವೀ ಸೂಪರ್ ಮಾರ್ಕೆಟ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ಗೈಡೆನ್ಸ್ ಮತ್ತು ರಿಸೋರ್ಸಸ್ ಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಿರಿ

 

ಸಂಬಂಧಿತ ಕೋರ್ಸ್‌ಗಳು