ಈ ಕೋರ್ಸ್ ಒಳಗೊಂಡಿದೆ
ಇಂದಿನ ಫ್ಯಾಷನ್ ಜಗತ್ತಿನಲ್ಲಿ ಹಲವು ಹೊಸ ರೀತಿಯ ಜ್ಯುವೆಲರಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಚಿನ್ನದ ಬೆಲೆಗಳು ಗಗನ ಮುಟ್ಟುತ್ತಿರುವ ಈ ಸಂದರ್ಭದಲ್ಲಿ ಇಮಿಟೇಶನ್ ಜ್ಯುವೆಲರಿಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇಮಿಟೇಶನ್ ಜ್ಯುವೆಲರಿಗಳು ಹೆಣ್ಣು ಮಕ್ಕಳು ಹೆಚ್ಚು ಇಷ್ಟಪಡುವ ವಸ್ತುಗಳಲ್ಲಿ ಒಂದಾಗಿದೆ. ಇಂತದ್ದೇ ಇಮಿಟೇಶನ್ ಜ್ಯುವೆಲರಿಗಳಲ್ಲಿ ಒಂದು ಈ ಟೆರಾಕೋಟಾ ಜ್ಯುವೆಲರಿಗಳು. ಇವುಗಳನ್ನು ಮಣ್ಣಿನಿಂದ ತಯಾರಿಸಲಾಗುತ್ತದೆ ಮತ್ತು ಅದಕ್ಕೆ ಸುಂದರವಾದ ಬಣ್ಣವನ್ನು ಮಿಶ್ರಿಣ ಮಾಡಿ ಮೆರುಗು ನೀಡಲಾಗುತ್ತದೆ.
ಟೆರಾಕೋಟಾ ಜ್ಯುವೆಲರಿಗಳು ನಮ್ಮ ಪುರಾಣ, ಪ್ರಕೃತಿ ಮತ್ತು ಪ್ರಾಚೀನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇದು ಮಹಿಳೆಯರನ್ನು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಆಕರ್ಷಿಸುತ್ತಿದೆ. ಉತ್ತಮ ಗುಣಮಟ್ಟದ ಟೆರಾಕೋಟಾ ಜ್ಯುವೆಲರಿಗಳನ್ನು ಉತ್ಪಾದಿಸುವ ದೇಶಗಳಲ್ಲಿ ಭಾರತವೂ ಕೂಡ ಒಂದಾಗಿದೆ. ಆಕರ್ಷಕವಾದ ಈ ಜ್ಯುವೆಲರಿಗಳಿಗೆ ದೇಶ ವಿದೇಶಗಳಲ್ಲೂ ಸಹ ಹೆಚ್ಚಿನ ಮನ್ನಣೆ ಸಿಗುತ್ತಿರುವುದನ್ನು ನಾವು ಗಮನಿಸಬಹುದಾಗಿದೆ.
ಟೆರಾಕೋಟಾ ಜ್ಯುವೆಲರಿಗಳಲ್ಲಿ ಹಲವು ವಿಧಗಳಿವೆ. ಅದರಲ್ಲಿ ಕೆಲವನ್ನು ಹೆಸರಿಸುವುದಾದರೆ ಟೆರಾಕೋಟಾ ಕಿವಿಯೋಲೆಗಳು, ಬ್ಯಾಂಡ್ ಗಳು, ಖಡಗ ಹಾಗು ಹೂಕ್ಸ್ ಇತ್ಯಾದಿಗಳು. ಭಾರತದಲ್ಲಿ ಇಮಿಟೇಶನ್ ಜ್ಯುವೆಲರಿ ಬಿಸಿನೆಸ್ ಸುಮಾರು 65 ಸಾವಿರ ಕೋಟಿಯಷ್ಟು ಮಾರ್ಕೆಟ್ ಗಾತ್ರವನ್ನು ಹೊಂದಿದೆ. ಹಾಗಾಗಿ ಇದರಲ್ಲಿ ಉತ್ತಮವಾದ ಉದ್ಯಮ ಅವಕಾಶವೂ ಸಹ ಇದೆ.
ಈ ಜ್ಯುವೆಲರಿ ಬಿಸಿನೆಸ್ ಕುರಿತಂತೆ ಉಪಯುಕ್ತ ಮಾಹಿತಿ ಒದಗಿಸುವ ಉದ್ದೇಶದಿಂದ ffreedom ಅಪ್ಲಿಕೇಶನ್ ಟೆರಾಕೋಟಾ ಜ್ಯುವೆಲರಿ ಬಿಸಿನೆಸ್ ಕುರಿತ ಸಮಗ್ರ ಕೋರ್ಸ್ ಅನ್ನು ಸಿದ್ಧಪಡಿಸಿದೆ. ನೀವು ಸಹ ಈ ಕೋರ್ಸ್ ಮೂಲಕ ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು.