ಈ ಕೋರ್ಸ್ ಒಳಗೊಂಡಿದೆ
ಪಶುಪಾಲನೆ ಅನಾದಿ ಕಾಲದಿಂದಲೂ ಕೃಷಿಯೊಂದಿಗೆ ಅವಿನಾಭಾವ ನಂಟನ್ನು ಹೊಂದಿದೆ. ಹೈನುಗಾರಿಕೆ, ಕೋಳಿ ಸಾಕಣೆ, ಮೀನು ಸಾಕಣೆ, ಕುರಿ ಸಾಕಣೆ ಮುಂತಾದವುಗಳನ್ನು ಇಂದು ಕೃಷಿಯೊಂದಿಗೆ ಸಾಕುತ್ತಿದ್ದೇವೆ. ಇಂದು ಜನಸಂಖ್ಯೆ ಹೆಚ್ಚಾದಂತೆ ಮಾಂಸಕ್ಕೆ ಕೂಡ ಬೇಡಿಕೆ ಹೆಚ್ಚಾಗುತ್ತಿದೆ. ಇಂದು ಹೈನುಗಾರಿಕೆಯಿಂದ ಹಾಲು, ಮೊಸರು, ತುಪ್ಪ ಮುಂತಾದವುಗಳನ್ನು ಉತ್ಪಾದಿಸುತ್ತಿದ್ದರೆ ಕುರಿ, ಮೇಕೆಗಳನ್ನು ಮಾಂಸಕ್ಕೆ ಉಪಯೋಗಿಸಲಾಗುಯತ್ತಿದೆ. ಇಲ್ಲಿ ನಾವು ನಿಮಗೆ ಬಂಡೂರು ಕುರಿ ಸಾಕಾಣಿಕೆ ಹೇಗೆ ಎಂಬುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಬಂಡೂರು ಕುರಿ ಮಂಡ್ಯ ಜಿಲ್ಲೆಯ ಒಂದು ತಳಿ. ಇದರ ಮಾಂಸ ಬಹಳ ರುಚಿಕರವಾಗಿದ್ದು, ಈ ಕುರಿ ಇಂದು ಅಳಿವಿನಂಚಿನಲ್ಲಿದ್ದು, ಇದರ ಸಾಕಣಿಕೆಯಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು.