ಈ ಕೋರ್ಸ್ ಒಳಗೊಂಡಿದೆ
ಕಲ್ಲಂಗಡಿ ಕೃಷಿಯು ಭಾರತದಲ್ಲಿ ಹೆಚ್ಚು ಲಾಭದಾಯಕ ಕೃಷಿಯಲ್ಲಿ ಒಂದಾಗಿದೆ. ಕಲ್ಲಂಗಡಿ ಕೃಷಿ ಮಾಡಿ 3 ತಿಂಗಳಲ್ಲಿ ಎಕರೆಗೆ 2 ಲಕ್ಷ ಗಳಿಸುವು ತಂತ್ರ ನಿಮಗೆ ತಿಳಿದಿದೆಯೇ. ಹಾಗಾದರೆ ಈ ತಂತ್ರದ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿದ್ದೇವೆ. ಕುಮಾರ್ ಅವರ ಮಾರ್ಗದರ್ಶನದಲ್ಲಿ ವಿನ್ಯಾಸಗೊಂಡಿರುವ ಈ ಕೋರ್ಸ್ ಕಲ್ಲಂಗಡಿ ಕೃಷಿಯ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ. ಇದರಲ್ಲಿ ಕಲ್ಲಂಗಡಿಗಳನ್ನು ಬೆಳೆಯಲು ಸೂಕ್ತವಾದ ಮಣ್ಣು ಮತ್ತು ಹವಾಮಾನ ಹೇಗಿರಬೇಕು ಎಂಬುವುದನ್ನು ಕೂಡ ಒಳಗೊಂಡಿದೆ.
ಈ ಕೋರ್ಸ್ ಸಂಪೂರ್ಣ ಪ್ರಾಕ್ಟಿಕಲ್ ಆಗಿದ್ದು, ಕಲ್ಲಂಗಡಿ ಕೃಷಿಯ ಪ್ರತಿಯೊಂದು ಅಂಶವನ್ನು ಒಳಗೊಂಡಿದೆ. ಭೂಮಿಯನ್ನು ಸಿದ್ಧಪಡಿಸುವುದು ಮತ್ತು ನೆಡುವಿಕೆಯಿಂದ ನೀರು, ಗೊಬ್ಬರ, ರೋಗ ನಿಯಂತ್ರಣ ಮತ್ತು ಕಾರ್ಮಿಕ ನಿರ್ವಹಣೆ ಇವುಗಳೆನ್ನೆಲ್ಲ ಒಳಗೊಂಡಿದೆ. ಮಾರ್ಕೆಟಿಂಗ್ ಮತ್ತು ರಫ್ತು ತಂತ್ರಗಳೊಂದಿಗೆ ಇಳುವರಿ ಮತ್ತು ಲಾಭವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಈ ಕೋರ್ಸ್ ಮೂಲಕ ತಿಳಿಯಬಹುದು.
ಕಲ್ಲಂಗಡಿಗೆ 1 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯ ಮತ್ತು ವಾರ್ಷಿಕ ಬೆಳವಣಿಗೆ ದರ 6% ಇದ್ದು, ಲಾಭದಾಯಕ ವ್ಯವಹಾರವಾಗಿದೆ. ಈ ಕೋರ್ಸ್‌ಗೆ ಸೇರ್ಪಡೆಗೊಳ್ಳುವ ಮೂಲಕ, ಕಲ್ಲಂಗಡಿ ಕೃಷಿ ಎಷ್ಟು ಲಾಭದಾಯಕವಾಗಿದೆ ಮತ್ತು ಈ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಯಿಂದ ಹೇಗೆ ಲಾಭ ಮಾಡಿಕೊಳ್ಳಬಹುದು ಎಂಬುದನ್ನು ಕಲಿಯಬಹುದು.
ಈ ಕೋರ್ಸ್‌ನಲ್ಲಿ ವಿವಿಧ ಕಲ್ಲಂಗಡಿ ಪ್ರಭೇದಗಳು, ಹಾಗೂ ತಮ್ಮ ಜಮೀನಿಗೆ ಸರಿಯಾದದನ್ನು ಆಯ್ಕೆ ಮಾಡಬಹುದು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ಕಲಿಯಬಹುದು. ಕಲ್ಲಂಗಡಿಗಳನ್ನು ಬೆಳೆಯಲು ಮತ್ತು ಹೆಚ್ಚಿನ ಲಾಭವನ್ನು ಗಳಿಸುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ನಮ್ಮ ಕಲ್ಲಂಗಡಿ ಕೃಷಿ ಕೋರ್ಸ್‌ಗೆ ನೋಂದಾಯಿಸಿ!
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಕಲ್ಲಂಗಡಿ ಕೃಷಿ ಬಿಸಿನೆಸ್ ಆರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು
ತಮ್ಮ ಕೃಷಿ ಚಟುವಟಿಕೆಗಳನ್ನು ವಿಸ್ತರಿಸಲು ಮತ್ತು ಕಲ್ಲಂಗಡಿ ಕೃಷಿಯನ್ನು ಆದಾಯದ ಮೂಲವಾಗಿ ಸೇರಿಸಲು ಬಯಸುವ ರೈತರು
ಕಲ್ಲಂಗಡಿ ಕೃಷಿಯಲ್ಲಿ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಪಡೆಯಲು ಬಯಸುವ ಕೃಷಿ ವಿದ್ಯಾರ್ಥಿಗಳು ಮತ್ತು ಸಂಶೋಧಕರು
ಸುಸ್ಥಿರ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿರುವವರು
ತಮ್ಮ ವ್ಯಾಪಾರವನ್ನು ವೈವಿಧ್ಯಗೊಳಿಸಲು ಮತ್ತು ತಮ್ಮ ಅಸ್ತಿತ್ವದಲ್ಲಿರುವ ಫಾರ್ಮ್‌ಗೆ ಹೊಸ ಉತ್ಪನ್ನವನ್ನು ಸೇರಿಸಲು ಬಯಸುವ ಉದ್ಯಮಿಗಳು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಮಣ್ಣಿನ ತಯಾರಿ, ನಾಟಿ, ನೀರಾವರಿ ಮತ್ತು ಇನ್ನಿತರ ಅಂಶಗಳನ್ನು ಒಳಗೊಂಡಂತೆ ಕಲ್ಲಂಗಡಿ ಕೃಷಿಯ ಮೂಲಭೂತ ಅಂಶಗಳು
ಬೆಳವಣಿಗೆ ಮತ್ತು ಅಭಿವೃದ್ಧಿಯ ವಿವಿಧ ಹಂತಗಳು ಮತ್ತು ಗರಿಷ್ಠ ಇಳುವರಿಗಾಗಿ ಬೆಳೆ ಬೆಳವಣಿಗೆಯನ್ನು ಉತ್ತಮಗೊಳಿಸುವುದು ಹೇಗೆ
ಸ್ಥಳೀಯ ಮಾರುಕಟ್ಟೆಗಳು, ಸೂಪರ್‌ಮಾರ್ಕೆಟ್‌ಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ಕಲ್ಲಂಗಡಿಗಳನ್ನು ಮಾರಾಟ ಮಾಡಲು ಮತ್ತು ವಿತರಿಸಲು ಚಾನಲ್‌ಗಳು
ಕಲ್ಲಂಗಡಿ ಕೃಷಿಯ ವೆಚ್ಚ ಮತ್ತು ಇಳುವರಿಯನ್ನು ಹೆಚ್ಚಿಸುವಾಗ ವೆಚ್ಚವನ್ನು ಉತ್ತಮಗೊಳಿಸುವುದು ಹೇಗೆ
ಸುಸ್ಥಿರವಾದ ಕಲ್ಲಂಗಡಿ ಕೃಷಿ ಪದ್ಧತಿಗಳ ಪ್ರಾಮುಖ್ಯತೆ ಮತ್ತು ಪರಿಸರ ಸ್ನೇಹಿ ತಂತ್ರಗಳು
ಅಧ್ಯಾಯಗಳು