ಈ ಕೋರ್ಸ್ ಒಳಗೊಂಡಿದೆ
ಯೂಟ್ಯೂಬ್ ಎನ್ನುವುದು ಇಂದು ಟ್ರೆಂಡ್ ಆಗಿದೆ. ಇದೊಂದು ಪರಿಣಾಮಕಾರಿಯಾದ ಸಾಮಾಜಿಕ ಜಾಲತಾಣವಾಗಿದೆ. ಇದೊಂದು ವಿಡಿಯೋ ಆಧಾರಿತ ಪ್ಲಾಟ್ಫಾರ್ಮ್ ಆಗಿರುವ ಕಾರಣ, ಹೆಚ್ಚು ಹೆಚ್ಚು ವೀಕ್ಷಕರ ವರ್ಗವನ್ನು ತನ್ನತ್ತ ಸೆಳೆದು, ಅವರಿಗೆ ಬೇಕಾಗಿರುವ ಮನರಂಜನೆ, ಮಾಹಿತಿ ಮುಂತಾದವುಗಳನ್ನು ಒಂದೇ ವೇದಿಕೆ ಅಡಿ ನೀಡುತ್ತಾ ಬರುತ್ತಿದೆ.
ಹೀಗಾಗಿಯೇ ಯೂಟ್ಯೂಬ್ ಇಂದು ಪ್ರಪಂಚಾದ್ಯಂತ ತನ್ನ ಬಾಹುಗಳನ್ನು ಚಾಚಿಕೊಂಡು ನಿಂತಿದೆ. ಯೂಟ್ಯೂಬ್ ಸರಿ ಸುಮಾರು 200 ಕೋಟಿ ಬಳಕೆದಾರರನ್ನು ಪ್ರಪಂಚಾದ್ಯಂತ ಹೊಂದ್ದಿದ್ದು, ಅದರಲ್ಲಿ 3 ಕೋಟಿಯಷ್ಟು ಜನ ಸಕ್ರಿಯವಾಗಿ ದಿನವೂ ಬಳಕೆ ಮಾಡುತ್ತಿದ್ದಾರೆ.
ಇಷ್ಟು ದೊಡ್ಡ ಬಳಕೆದಾರರೊಂದಿಗೆ, ಯೂಟ್ಯೂಬ್ ಇಂದು ವಿಶ್ವದ 2ನೇ ಜನಪ್ರಿಯ ವಿಡಿಯೋ ಶೇರಿಂಗ್ ವೆಬ್ ಸೈಟ್ ಆಗಿದೆ. ಇದರ ಕಾರಣದಿಂದಲೇ ಇಂದು ಯೂಟ್ಯೂಬ್ ವಾಣಿಜ್ಯ ರೂಪ ಪಡೆದು, ಅನೇಕರಿಗೆ ಕೈ-ತುಂಬಾ ಹಣಗಳಿಸುವ ದಾರಿಯನ್ನು ತೋರಿಸಿಕೊಟ್ಟಿದೆ.
ಯೂಟ್ಯೂಬ್ ನಿಂದ ಹಣ ಗಳಿಸಬಹುದು ಎಂದು ತಿಳಿದ ಮೇಲೆ, ಯೂಟ್ಯೂಬ್ ಗೆ ಹಲವಾರು ತರಹದ ಕಂಟೆಂಟ್ ಗಳನ್ನು ಸಿದ್ದಪಡಿಸಿ, ಅದನ್ನು ಜಗತ್ತಿಗೆ ತಲುಪಿಸಲು ಬಹಳಷ್ಟು ಜನ ಕಂಟೆಂಟ್ ಕ್ರಿಯೇಟರ್ ಗಳು ಸಹ ಹುಟ್ಟಿಕೊಂಡಿದ್ದಾರೆ. ಅನೇಕ ಕಂಟೆಂಟ್ ಕ್ರಿಯೇಟರ್ ಗಳು ವಿಡಿಯೋಗಳನ್ನು ಸಿದ್ಧಪಡಿಸಿ ಅದನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಿ ಅದರಿಂದ ಲಕ್ಷ ಲಕ್ಷವನ್ನು ಗಳಿಸುತ್ತಿದ್ದಾರೆ.
ನೀವೂ ಸಹ ಯೂಟ್ಯೂಬ್ ಮೂಲಕ ಹಣ ಗಳಿಸಬೇಕು ಎಂಬ ಉದ್ದೇಶದಿಂದ, ffreddom ಅಪ್ಲಿಕೇಶನ್ ಈ ಕೋರ್ಸ್ ಅನ್ನು ಸಿದ್ದಪಡಿಸಿದೆ. ನೀವೂ ಸಹ ಈ ಕೋರ್ಸ್ ಮೂಲಕ ಉತ್ತಮ ಲಾಭವನ್ನು ಪಡೆದುಕೊಳ್ಳಬಹುದು.