ಈ ಕೋರ್ಸ್ ಒಳಗೊಂಡಿದೆ
ಗಿರ್ ಹಸುವು ನಾಟಿ ತಳಿಯ ಒಂದು ಹಸು. ಗುಜರಾತ್ ನ ಗಿರ್ ಅರಣ್ಯ ಪ್ರದೇಶ ಈ ಹಸುವಿನ ಮೂಲ. ಈ ಕಾರಣಕ್ಕಾಗಿಯೇ ಈ ತಳಿಯ ಹಸುಗಳಿಗೆ ಗಿರ್ ಎಂಬ ಹೆಸರು ಬಂದಿದೆ. ನಾಟಿ ತಳಿಯ ಹಸುಗಳಿಂದ ನಮ್ಮ ಆರೋಗ್ಯಕ್ಕೂ ಸಹ ಬಹಳಷ್ಟು ಲಾಭವಿದೆ ಎಂದು ಹೇಳಬಹುದು. ನಾಟಿ ಹಸುವಿನ ಹಾಲನ್ನು ಆಯುರ್ವೇದದಲ್ಲಿಯೂ ಸಹ ಹೆಚ್ಚಾಗಿ ಬಳಸಲಾಗುತ್ತದೆ. ನಾಟಿ ಹಸುವಿನ ಹಾಲಿಗೂ ಮತ್ತು ಹಾಲಿನಿಂದ ತಯಾರಿಸಿದ ತುಪ್ಪಕ್ಕೂ ಸಹ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿದೆ. ಈ ಎಲ್ಲಾ ಕಾರಣಗಳಿಂದಾಗಿ ನಾಟಿ ಹಸುವನ್ನು ಸಾಕುವುದರಿಂದ ರೈತನು ಉತ್ತಮ ಆದಾಯವನ್ನು ಗಳಿಸಬಹುದು ಎಂದು ಹೇಳಬಹುದು.
ಸೀಮೆ ಹಸುವಿನ ಅಥವಾ ಎಚ್ ಎಫ್ ಹಸುವಿನ ಹಾಲಿನ ಹೋಲಿಕೆಯಲ್ಲಿ ನಾಟಿ ಹಸುವಿನ ಹಾಲು ಆರೋಗ್ಯಕ್ಕೆ ಹೆಚ್ಚು ಲಾಭದಾಯಕವಾಗಿರುತ್ತದೆ. ನಾಟಿ ತಳಿಯ ಹಸುವಿನ ಹಾಲನ್ನು A2 ಹಾಲು ಎಂದು ಪರಿಗಣಿಸಲಾಗುತ್ತದೆ. ಮಿಕ್ಕಂತೆ ಇತರೆ ಹಸುಗಳ ಹಾಲನ್ನು A1 ಎಂದು ಪರಿಗಣಿಸಲಾಗುತ್ತದೆ. A1 ಹಾಲುಗಳಲ್ಲಿ ಏಸೊಮೋರ್ಫಿನ್ ಎಂಬ ಕೆಮಿಕಲ್ ಅಂಶ ಇರುತ್ತದೆ. ಹಾಗಾಗಿ ಈ A1 ಹಾಲನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ.
ನಾಟಿ ತಳಿಯ A2 ಹಾಲಿನಲ್ಲಿ ಯಾವುದೇ ರೀತಿಯ ಕೆಮಿಕಲ್ ಅಂಶ ಇರುವುದಿಲ್ಲ. ಈ ಹಾಲಿನಲ್ಲಿ ಕೆಸಿನ್ ಎಂಬ ಸ್ಲೋ ಡೈಜೆಸ್ಟಿವ್ ಪ್ರೋಟೀನ್ ಇರುತ್ತದೆ. ಇದು ಆರೋಗ್ಯದ ಮೇಲೆ ಒಳ್ಳೆಯ ರೀತಿಯ ಪರಿಣಾಮವನ್ನು ಬೀರುತ್ತದೆ. ಈ ಕೋರ್ಸ್ ಮೂಲಕ ನೀವು ಸಹ ನಾಟಿ ತಳಿಯಾದ ಗಿರ್ ಹಸು ಸಾಕಣೆಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ.