//=$aboutHtml?>
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
3Hrs 30Min
ಪಾಠಗಳ ಸಂಖ್ಯೆ
18 ವೀಡಿಯೊಗಳು
ನೀವು ಕಲಿಯುವುದು
ಬಿಸಿನೆಸ್ ಅವಕಾಶಗಳು, Completion Certificate
ನೀವು ಭಾರತದಲ್ಲಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿದ್ದರೆ, ನಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್ ನಿಮಗೆ ಸೂಕ್ತವಾಗಿದೆ. ನಿಮ್ಮದೇ ಸ್ವಂತ ಯಶಸ್ವಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನಿಮಗೆ ಕಲಿಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಸುಂದರವಾದ ಕ್ಯಾಂಡಲ್ ಗಳನ್ನು ತಯಾರಿಸಲು ನೀವು ಬಳಸಬಹುದಾದ ವಿವಿಧ ರೀತಿಯ ಮೇಣಗಳು, ವಿಕ್ ಗಳು, ಪರಿಮಳಗಳು ಮತ್ತು ಬಣ್ಣಗಳನ್ನು ಒಳಗೊಂಡಂತೆ ಕ್ಯಾಂಡಲ್ ಮೇಕಿಂಗ್ ಕುರಿತ ಎಲ್ಲಾ ಮೂಲಭೂತ ಅಂಶಗಳನ್ನು ನಾವು ಕವರ್ ಮಾಡುತ್ತೇವೆ. ನಿಮ್ಮ ಕ್ಯಾಂಡಲ್ ಗಳನ್ನು ಇತರರಿಗಿಂತ ಭಿನ್ನವಾಗಿ ಮತ್ತು ಆಕರ್ಷಕವಾಗಿ ಕಾಣುವಂತೆ ವಿನ್ಯಾಸ ಮಾಡುವುದು ಹೇಗೆ ಎಂಬುದನ್ನು ನಾವು ನಿಮಗೆ ಕಲಿಸುತ್ತೇವೆ.
ಕ್ಯಾಂಡಲ್ ತಯಾರಿಕೆ ಕೌಶಲ್ಯಗಳನ್ನು ಒದಗಿಸುವ ಜೊತೆಗೆ, ನಾವು ಭಾರತದಲ್ಲಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ನಡೆಸುವ ಬಗ್ಗೆಯೂ ಸಹ ತಿಳಿಸುತ್ತೇವೆ. ನಿಮ್ಮ ಕ್ಯಾಂಡಲ್ ಗಳಿಗೆ ಸ್ಪರ್ಧಾತ್ಮಕ ಬೆಲೆಯನ್ನು ನಿಗದಿ ಪಡಿಸಿ ಆನ್‌ಲೈನ್ ಮೂಲಕ ಮತ್ತು ವೈಯಕ್ತಿಕವಾಗಿ ಮಾರಾಟ ಮಾಡುವುದು ಹೇಗೆ ಎಂದು ಸಹ ನಾವು ಚರ್ಚಿಸುತ್ತೇವೆ.
ಈ ಕೋರ್ಸ್ ಅನ್ನು ಯಶಸ್ವಿ ಕ್ಯಾಂಡಲ್ ಮೇಕಿಂಗ್ ಉದ್ಯಮಿ ಶ್ರೀಮತಿ ಶ್ರೀ ವಿದ್ಯಾ ಕಾಮತ್ ನೇತೃತ್ವದಲ್ಲಿ ಸಿದ್ದಪಡಿಸಲಾಗಿದೆ. ಅವರು ತಮ್ಮ ಆರಾ ಕ್ಯಾಂಡಲ್ಸ್ ಅನ್ನು 2017 ರಲ್ಲಿ ಕೇವಲ 4000 ರೂ. ನೊಂದಿಗೆ ಪ್ರಾರಂಭಿಸಿದರು ಮತ್ತು ಪ್ರಸ್ತುತ ಅವರು 13 ಉದ್ಯೋಗಿಗಳೊಂದಿಗೆ 5 ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಅವರ ಯಶಸ್ಸು ಮತ್ತು ಅನುಭವವು ಅವರನ್ನು ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್‌ಗೆ ಉತ್ತಮ ಮಾರ್ಗದರ್ಶಕರನ್ನಾಗಿ ಮಾಡುತ್ತದೆ.
ಈ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್ ಅಂತ್ಯದ ವೇಳೆಗೆ, ಭಾರತದಲ್ಲಿ ನಿಮ್ಮದೇ ಆದ ಯಶಸ್ವಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸಲು ನಿಮಗೆ ಅಗತ್ಯವಿರುವ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳನ್ನು ನೀವು ಹೊಂದಿರುತ್ತೀರಿ. ಕ್ಯಾಂಡಲ್ ಮೇಕಿಂಗ್ ಬಗೆಗಿನ ನಿಮ್ಮ ಪ್ಯಾಷನ್ ಅನ್ನು ಲಾಭದಾಯಕ ಬಿಸಿನೆಸ್ ಆಗಿಸಲು ಒದಗಿಸಲಾಗಿರುವ ಈ ಅವಕಾಶದ ಲಾಭವನ್ನು ಪಡೆದುಕೊಳ್ಳಿ. ಇಂದೇ ಸೈನ್ ಅಪ್ ಮಾಡಿ!
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
-
ಭಾರತದಲ್ಲಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ನಲ್ಲಿ ಆಸಕ್ತಿ ಹೊಂದಿರುವ ಮಹತ್ವಾಕಾಂಕ್ಷಿ ಉದ್ಯಮಿಗಳು
-
ತಮ್ಮ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಲು ಬಯಸುತ್ತಿರುವ ಅಸ್ತಿತ್ವದಲ್ಲಿರುವ ಬಿಸಿನೆಸ್ ಮಾಲೀಕರು
-
ತಮ್ಮ ಪ್ಯಾಷನ್ ಅನ್ನು ಲಾಭವಾಗಿ ಪರಿವರ್ತಿಸಲು ಬಯಸುವ ಕುಶಲಕರ್ಮಿಗಳು ಮತ್ತು ಕರಕುಶಲ ಉತ್ಸಾಹಿಗಳು
-
ಸೃಜನಾತ್ಮಕ ಮತ್ತು ಲಾಭದಾಯಕ ಹವ್ಯಾಸವನ್ನು ಕಲಿಯಲು ಬಯಸುವ ವ್ಯಕ್ತಿಗಳು
-
ಆರಂಭಿಕ ಹಂತದಿಂದ ಕ್ಯಾಂಡಲ್ ಗಳನ್ನು ಹೇಗೆ ತಯಾರಿಸಬೇಕೆಂದು ಕಲಿಯಲು ಬಯಸುವ ಯಾರಾದರೂ
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
-
ವಿವಿಧ ರೀತಿಯ ಮೇಣಗಳು, ವಿಕ್ ಗಳು ಮತ್ತು ಪರಿಮಳಗಳನ್ನು ಒಳಗೊಂಡಂತೆ ಕ್ಯಾಂಡಲ್ ಮೇಕಿಂಗ್ ನ ಮೂಲಭೂತ ಅಂಶಗಳು
-
ವಿವಿಧ ರೀತಿಯ ಕ್ಯಾಂಡಲ್ ವಿನ್ಯಾಸಗಳು ಮತ್ತು ಶೈಲಿಗಳನ್ನು ರಚಿಸುವ ತಂತ್ರಗಳು
-
ಲಾಭವನ್ನು ಹೆಚ್ಚಿಸಲು ನಿಮ್ಮ ಕ್ಯಾಂಡಲ್ ಗಳಿಗೆ ಸೂಕ್ತ ಬೆಲೆ ನಿಗದಿಸಿ ಮಾರಾಟ ಮಾಡುವುದು ಹೇಗೆ
-
ನಿಮ್ಮ ಕ್ಯಾಂಡಲ್ ಗಳನ್ನು ಆನ್‌ಲೈನ್ ಮತ್ತು ವೈಯಕ್ತಿಕವಾಗಿ ಮಾರಾಟ ಮಾಡುವ ತಂತ್ರಗಳು
-
ಭಾರತದಲ್ಲಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ನಿರ್ವಹಿಸಲು ಮತ್ತು ಬೆಳೆಸಲು ಸಲಹೆಗಳು
ಅಧ್ಯಾಯಗಳು
- ಕ್ಯಾಂಡಲ್ ಮೇಕಿಂಗ್ ಬಿಸಿನೆಸ್: ಲಾಭದಾಯಕ ಉದ್ಯಮಶೀಲತೆಗೆ ಮಾರ್ಗ: ಭಾರತದಲ್ಲಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ನ ಮೂಲಭೂತ ಅಂಶಗಳನ್ನು ಮತ್ತು ನಿಮ್ಮ ಸ್ವಂತ ಯಶಸ್ವಿ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ನಡೆಸುವುದು ಎಂಬುದನ್ನು ತಿಳಿಯಿರಿ.
- ತಜ್ಞರ ಮಾರ್ಗದರ್ಶನ: ನಮ್ಮ ಮಾರ್ಗದರ್ಶಕರು ನಿಮಗೆ ಯಶಸ್ವಿಯಾಗಲು ಹೇಗೆ ಸಹಾಯ ಮಾಡಬಹುದು: ನಿಮ್ಮ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಲಾಭದಾಯಕವಾದ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ನ ಕಡೆಗೆ ಅವರು ನಿಮಗೆ ಹೇಗೆ ಮಾರ್ಗದರ್ಶನ ನೀಡಬಹುದು ಎಂಬುದನ್ನು ತಿಳಿದುಕೊಳ್ಳಿ.
- ಏಕೆ ಕ್ಯಾಂಡಲ್ ಮೇಕಿಂಗ್ ಒಂದು ಸ್ಮಾರ್ಟ್ ಬಿಸಿನೆಸ್ ಆಯ್ಕೆಯಾಗಿದೆ: ಭಾರತದಲ್ಲಿ ಕ್ಯಾಂಡಲ್ ಗಳಿಗೆ ಇರುವ ಬೇಡಿಕೆ ಮತ್ತು ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸುವುದರಿಂದ ಆಗುವ ಲಾಭವನ್ನು ಅನ್ವೇಷಿಸಿ.
- ನಿಮ್ಮ ಯಶಸ್ಸನ್ನು ರೂಪಿಸುವುದು: ಸಮಗ್ರ ಬಿಸಿನೆಸ್ ಯೋಜನೆಯನ್ನು ನಿರ್ಮಿಸುವುದು: ನಿಮ್ಮ ಗುರಿಗಳನ್ನು ಸಾಧಿಸಲು ಮತ್ತು ಕ್ಯಾಂಡಲ್ ಮೇಕಿಂಗ್ ಉದ್ಯಮದಲ್ಲಿ ಯಶಸ್ವಿಯಾಗಲು ಸಾಲಿಡ್ ಬಿಸಿನೆಸ್ ಯೋಜನೆಯನ್ನು ರಚಿಸಿ.
- ನಿಮ್ಮ ಬಿಸಿನೆಸ್ ಗಾಗಿ ಬಂಡವಾಳ ಮತ್ತು ಕಾರ್ಮಿಕರ ಅಗತ್ಯತೆಗಳು: ನಿಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ನಡೆಸಲು ಅಗತ್ಯವಿರುವ ಬಂಡವಾಳ ಮತ್ತು ಕಾರ್ಮಿಕರ ಅಗತ್ಯತೆಯನ್ನು ಹೇಗೆ ನಿರ್ಧರಿಸುವುದು ಎಂಬುದನ್ನು ತಿಳಿಯಿರಿ.
- ಕಾನೂನುಗಳನ್ನು ನ್ಯಾವಿಗೇಟ್ ಮಾಡುವುದು: ಲೈಸನ್ಸ್, ಪರ್ಮಿಟ್ ಗಳು ಮತ್ತು ನೋಂದಣಿಗೆ ಮಾರ್ಗದರ್ಶಿ: ಭಾರತದಲ್ಲಿ ನಿಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ನಿರ್ವಹಿಸಲು ಅಗತ್ಯವಿರುವ ಕಾನೂನು ಅವಶ್ಯಕತೆಗಳು ಮತ್ತು ದಾಖಲೆಗಳನ್ನು ಅರ್ಥಮಾಡಿಕೊಳ್ಳಿ.
- ನಿಮ್ಮ ಬಿಸಿನೆಸ್ ಗಾಗಿ ಸರಿಯಾದ ಸ್ಥಳ ಆಯ್ಕೆ: ಬಿಸಿನೆಸ್ ನ ಹಲವು ಅಂಶಗಳ ಆಧಾರದ ಮೇಲೆ ನಿಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಗೆ ಸೂಕ್ತವಾದ ಸ್ಥಳವನ್ನು ಆಯ್ಕೆಮಾಡಿ.
- ಕ್ಯಾಂಡಲ್ ತಯಾರಿಕೆಗೆ ಅಗತ್ಯವಾದ ವಸ್ತುಗಳು: ಉತ್ತಮ ಗುಣಮಟ್ಟದ ಕ್ಯಾಂಡಲ್ ಗಳನ್ನು ತಯಾರಿಸಲು ಅಗತ್ಯವಾದ ಕಚ್ಚಾ ವಸ್ತುಗಳನ್ನು ಅನ್ವೇಷಿಸಿ.
- ವಿಭಿನ್ನ ಪ್ರಕಾರಗಳ ಮತ್ತು ಶೈಲಿಗಳ ಕ್ಯಾಂಡಲ್ ಗಳು: ನೀವು ತಯಾರಿಸಬಹುದಾದ ವಿವಿಧ ರೀತಿಯ ಕ್ಯಾಂಡಲ್ ಗಳು ಮತ್ತು ಅದರ ಅನನ್ಯ ವಿನ್ಯಾಸಗಳ ಬಗ್ಗೆ ತಿಳಿಯಿರಿ.
- ಉನ್ನತ ಗುಣಮಟ್ಟದ ಕ್ಯಾಂಡಲ್ ಗಳನ್ನು ತಯಾರಿಸುವ ತಂತ್ರಗಳು: ಸುಂದರವಾದ ಮತ್ತು ಉತ್ತಮ ಗುಣಮಟ್ಟದ ಕ್ಯಾಂಡಲ್ ಗಳನ್ನು ತಯಾರಿಸಲು ಟೆಕ್ನಿಕ್ ಗಳನ್ನು ಕರಗತ ಮಾಡಿಕೊಳ್ಳಿ.
- ನಿಮ್ಮ ಬಿಸಿನೆಸ್ ಗಾಗಿ ಮಾರ್ಕೆಟಿಂಗ್ ಮತ್ತು ರಫ್ತು ತಂತ್ರಗಳು: ಬಲವಾದ ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸಿ, ನಿಮ್ಮ ಕ್ಯಾಂಡಲ್ ಗಳನ್ನು ಹೇಗೆ ಮಾರಾಟ ಮಾಡಬೇಕೆಂದು ತಿಳಿಯಿರಿ ಮತ್ತು ರಫ್ತು ಅವಕಾಶಗಳನ್ನು ಅನ್ವೇಷಿಸಿ.
- ನಿಮ್ಮ ಮಾರಾಟವನ್ನು ಗರಿಷ್ಠಗೊಳಿಸಲು ಸಲಹೆಗಳು: ನಿಮ್ಮ ಲಾಭವನ್ನು ಹೆಚ್ಚಿಸಲು, ನಿಮ್ಮ ಕ್ಯಾಂಡಲ್ ಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಹೇಗೆ ಎಂದು ತಿಳಿಯಿರಿ.
- ನಿಮ್ಮ ಕ್ಯಾಂಡಲ್ ಗಳನ್ನು ಸಂಗ್ರಹಿಸಲು ಮತ್ತು ಪ್ಯಾಕೇಜಿಂಗ್ ಮಾಡಲು ಉತ್ತಮ ಅಭ್ಯಾಸಗಳು: ಆಕರ್ಷಕವಾಗಿ ಇರುವಂತೆ ನಿಮ್ಮ ಕ್ಯಾಂಡಲ್ ಗಳನ್ನು ಪ್ಯಾಕ್ ಮಾಡುವುದು ಮತ್ತು ಸಂಗ್ರಹಿಸುವುದು ಹೇಗೆ ಎಂದು ತಿಳಿಯಿರಿ.
- ಬೆಲೆ ನಿಗದಿ ಮತ್ತು ಆದಾಯವನ್ನು ಹೆಚ್ಚಿಸುವ ತಂತ್ರಗಳು: ಆದಾಯವನ್ನು ಗಳಿಸಲು ಮತ್ತು ನಿಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಲಾಭದಾಯಕವಾಗಿಡಲು ಸರಿಯಾದ ಬೆಲೆ ತಂತ್ರಗಳು.
- ನಿಮ್ಮ ಕ್ಯಾಂಡಲ್ ಬಿಸಿನೆಸ್ ನ ಪೂರೈಕೆ ಮತ್ತು ಬೇಡಿಕೆಯನ್ನು ನಿರ್ವಹಿಸುವುದು: ನಿಮ್ಮ ಗ್ರಾಹಕರನ್ನು ಸಂತೋಷ ಪಡಿಸಲು ನಿಮ್ಮ ಕ್ಯಾಂಡಲ್ ಗಳ ಬೇಡಿಕೆ ಮತ್ತು ಪೂರೈಕೆಯನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಿ.
- ನಿಮ್ಮ ಬಿಸಿನೆಸ್ ಲೆಕ್ಕಪತ್ರದ ನಿರ್ವಹಣೆ: ನಿಮ್ಮ ವೆಚ್ಚಗಳು ಮತ್ತು ಆದಾಯಗಳನ್ನು ಟ್ರ್ಯಾಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ವಿವರವಾಗಿ ತಿಳಿಯಿರಿ.
- ನೀವು ಯಶಸ್ವಿಯಾಗಲು ಸಲಹೆ: ಭಾರತದಲ್ಲಿ ನಿಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ನಿರ್ಮಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಅನುಭವಿ ಮಾರ್ಗದರ್ಶಕರಿಂದ ಪ್ರಾಯೋಗಿಕ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಿರಿ.