ಈ ಕೋರ್ಸ್ ಒಳಗೊಂಡಿದೆ
ನಾವೆಲ್ಲರು ಫ್ಯಾಷನ್ ಯುಗದಲ್ಲಿ ಬದುಕುತ್ತಿದ್ದೇವೆ. ಇಂದು ಜನರು ಪ್ರತಿಯೊಂದರಲ್ಲೂ ಸಹ ನಾವಿನ್ಯತೆಯನ್ನು ಬಯಸುತ್ತಾರೆ. ಟ್ರೆಂಡ್ ಗಳು ಪ್ರತಿ ನಿತ್ಯವೂ ಸಹ ಬದಲಾಗುತ್ತ ಇರುತ್ತದೆ. ಇಂದು ಇರುವ ವಿನ್ಯಾಸ ಅಥವಾ ಶೈಲಿ ನಾಳೆಗೆ ಹಳೆಯದು ಅನಿಸುತ್ತದೆ. ಹಾಗಾಗಿ ಜನಗಳು ಪ್ರತಿ ದಿನವೂ ಸಹ ಹೊಸತನ್ನು ಹುಡುಕುವ ಕಡೆ ಮುಖಮಾಡುತ್ತಾರೆ. ಇಂತಹ ಹೊಸತನವನ್ನು ಹುಡುಕುವುದರಲ್ಲಿ ಹೆಣ್ಣು ಮಕ್ಕಳು ಯಾವಾಗಲೂ ಮುಂದಿರುತ್ತಾರೆ.
ಚಿನ್ನದ ಬೆಲೆಗಳು ಗಗನ ಮುಟ್ಟುತ್ತಿರುವ ಈ ಸಂದರ್ಭದಲ್ಲಿ ಇಮಿಟೇಶನ್ ಜ್ಯುವೆಲರಿಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇಂದು ಇಮಿಟೇಶನ್ ಜ್ಯುವೆಲರಿಗಳು ಹೆಣ್ಣು ಮಕ್ಕಳು ಅತಿ ಹೆಚ್ಚು ಇಷ್ಟಪಡುವ ವಸ್ತುಗಳಲ್ಲಿ ಒಂದಾಗಿದೆ. ಇಂತದ್ದೇ ಇಮಿಟೇಶನ್ ಜ್ಯುವೆಲರಿಗಳಲ್ಲಿ ಒಂದು ಈ ಸಿಲ್ಕ್ ಥ್ರೆಡ್ ಜ್ಯುವೆಲರಿ. ಇವುಗಳನ್ನು ಸಿಲ್ಕ್ ಥ್ರೆಡ್ ನಿಂದ ತಯಾರಿಸಲಾಗುತ್ತದೆ ಮತ್ತು ಅದಕ್ಕೆ ಸುಂದರವಾದ ವಿನ್ಯಾಸದ ಮೂಲಕ ಮೆರುಗು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಜ್ಯುವೆಲರಿಗಳು ಹೆಣ್ಣು ಮಕ್ಕಳ ಸಮೂಹದಲ್ಲಿ ಟ್ರೆಂಡ್ ಆಗಿ ಬಿಂಬಿತವಾಗುತ್ತಿದೆ ಮತ್ತು ಹೆಚ್ಚು ಆಕರ್ಷಿಸುತ್ತಿದೆ.
ಉತ್ತಮ ಗುಣಮಟ್ಟದ ಸಿಲ್ಕ್ ಥ್ರೆಡ್ ಜ್ಯುವೆಲರಿಗಳನ್ನು ಭಾರತದಲ್ಲಿ ಹೆಚ್ಚು ತಯಾರಿಸಲಾಗುತ್ತದೆ ಮತ್ತು ಈ ಜ್ಯುವೆಲರಿಗೆ ಭಾರತದಲ್ಲೇ ಬಹಳಷ್ಟು ಬೇಡಿಕೆ ಕೂಡ ಇದೆ. ಭಾರತದಲ್ಲಿ ಇಮಿಟೇಶನ್ ಜ್ಯುವೆಲರಿ ಬಿಸಿನೆಸ್ ಸುಮಾರು 65 ಸಾವಿರ ಕೋಟಿಯಷ್ಟು ಮಾರ್ಕೆಟ್ ಗಾತ್ರವನ್ನು ಹೊಂದಿದೆ. ಹಾಗಾಗಿ ಇದರಲ್ಲಿ ಉತ್ತಮವಾದ ಉದ್ಯಮ ಅವಕಾಶವೂ ಸಹ ಇದೆ. ಈ ಕೋರ್ಸ್ ಮೂಲಕ ನೀವು ಸಿಲ್ಕ್ ಥ್ರೆಡ್ ಜ್ಯುವೆಲರಿ ಬಿಸಿನೆಸ್ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ.