ಈ ಕೋರ್ಸ್ ಒಳಗೊಂಡಿದೆ
ಕೃಷಿ ಎಂದರೆ ಮೂಗು ಮುರಿಯುತ್ತಿದ್ದವರು ಬಹಳಷ್ಟು ಮಂದಿ. ಆದರೆ, ಇಂದು
ಕೃಷಿ ಎಂಬುದು ಒಂದು ಲಾಭದಾಯಕ ವೃತ್ತಿ ಅಥವಾ ಉದ್ಯಮ ಎಂದು ಬಹಳಷ್ಟು ಮಂದಿ ಸಾಧಿಸಿ ತೋರಿಸಿಕೊಟ್ಟಿದ್ದಾರೆ. ಬಹಳಷ್ಟು ಕಲಿತ ಮಂದಿ ಇಂದು ನಗರ ಪ್ರದೇಶಗಳನ್ನು ತೊರೆದು ನೆಮ್ಮದಿಯನ್ನು ಅರಸಿ ಹಳ್ಳಿಗಳತ್ತ ಬಂದು ತಮ್ಮ ಜೀವನವನ್ನು ಕೃಷಿಯಲ್ಲಿ ಕಟ್ಟಿಕೊಳ್ಳುತ್ತಿದ್ದಾರೆ.
ಇತರೆ ವೃತ್ತಿ ಅಥವಾ ಉದ್ಯಮದಂತೆ ಕೃಷಿಯಲ್ಲೂ ಸಹ ನಿರಂತರ ಕಲಿಕೆ ಮತ್ತು ಅನುಭವದ ಮೂಲಕ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಿದೆ. ಉತ್ತಮ ಕೃಷಿ ಜ್ಞಾನವನ್ನು ಹೊಂದುವುದರಿಂದ ನಗರ ಪ್ರದೇಶದಲ್ಲಿ ಕಾರ್ಪೊರೇಟ್ ಮಂದಿಗಳಿಗಿಂತ ಸಹ ಉತ್ತಮ ಆದಾಯವನ್ನು ಗಳಿಸಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ಆರೋಗ್ಯದ ದೃಷ್ಟಿಯಿಂದ ಆರ್ಗಾನಿಕ್ ಫುಡ್ ಗಳ ಕಡೆಗೆ ಜನರು ಹೆಚ್ಚು ಗಮನವನ್ನು ನೀಡುತ್ತಿದ್ದಾರೆ. ಹೀಗಾಗಿ ಸಾವಯವವಾಗಿ ಬೆಳೆದ ಪದಾರ್ಥಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಮಂಡ್ಯ ಜಿಲ್ಲೆ, ಶ್ರೀ ರಂಗಪಟ್ಟಣ ತಾಲ್ಲೂಕು, ನೆಲಮನೆ ಎಂಬ ಗ್ರಾಮದಲ್ಲಿ ಗ್ರಾಸ್ ರೂಟ್ಸ್ ಎಂಬ ಆರ್ಗಾನಿಕ್ ಫಾರ್ಮ್ಸ್ ಅನ್ನು ಸ್ಥಾಪಿಸಿ ನಮ್ಮ ಈ ಕೋರ್ಸ್ ನ ಸಾಧಕರು ಯಶಸ್ಸನ್ನು ಸಹ ಪಡೆದಿದ್ದಾರೆ. ಸಾವಯವ ಕೃಷಿ ಮೂಲಕ ಒಂದು ಫಾರ್ಮ್ ಅನ್ನು ಸ್ಥಾಪಿಸಿ ಅದರಿಂದ ಉತ್ತಮ ಆದಾಯವನ್ನು ಗಳಿಸಲು ಸಾಧ್ಯವಿದೆ ಎಂಬುದನ್ನು ಈ ಸಾಧಕರು ತೋರಿಸಿಕೊಟ್ಟಿದ್ದಾರೆ.