4.4 from 4.4K ರೇಟಿಂಗ್‌ಗಳು
 1Hrs 47Min

ಸಾಗುವಾನಿ (ತೇಗ ) ಕೃಷಿ ಕೋರ್ಸ್ - 20 ವರ್ಷಗಳಲ್ಲಿ 1 ಮರದಿಂದ 1 ಲಕ್ಷ ಗಳಿಸಿ

ನಿಮ್ಮ ಭೂಮಿಯನ್ನು ಅಭಿವೃದ್ಧಿ ಹೊಂದುತ್ತಿರುವ ತೇಗದ ತೋಟವನ್ನಾಗಿ ಪರಿವರ್ತಿಸಿ, ಪ್ರತಿಫಲ ಪಡೆದುಕೊಳ್ಳಿ!

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Teak Wood Farming Course Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(152)
ಬಿಸಿನೆಸ್ ಕೋರ್ಸ್‌ಗಳು(108)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 47Min
 
ಪಾಠಗಳ ಸಂಖ್ಯೆ
16 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

ಭಾರತದಲ್ಲಿನ ತೇಗದ ಕೃಷಿ,  ಅನೇಕ ರೈತ ಮತ್ತು ಹೂಡಿಕೆದಾರರಿಗೆ ಲಾಭದಾಯಕ ಕೃಷಿಯಾಗಿದೆ. ತೇಗದ ಮರಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಸರಿಯಾದ ತಿಳಿವಳಿಕೆಯಿಂದ ತೇಗದ ತೋಟವನ್ನು ಯಶಸ್ವಿಯಾಗಿ ಆರಂಭಿಸಿ ಅದರ ಫಲವನ್ನು ಪಡೆಯಬಹುದು. ಆದರೆ, ನೀವು ಅದನ್ನು ಹೇಗೆ ಪ್ರಾರಂಭ ಮಾಡುತ್ತೀರಿ ಎನ್ನುವುದೂ ಸಹ ಮುಖ್ಯ. ತೇಗ ಬೆಳೆಯುವುದು ಲಾಭದಾಯಕವೇ ಎಂದು ಮೊದಲು ತಿಳಿದುಕೊಳ್ಳಬೇಕು. 

ತೇಗ ಕೃಷಿಯ ಕುರಿತಾದ ಈ ಸಮಗ್ರ ಕೋರ್ಸ್‌, ನಿಮ್ಮ ತೇಗದ ತೋಟವನ್ನು ಪ್ರಾರಂಭಿಸಿ ಕೇವಲ 20 ವರ್ಷಗಳಲ್ಲಿ ಮರಕ್ಕೆ 1 ಲಕ್ಷ ಗಳಿಸಲು ಅಗತ್ಯವಿರುವ ಎಲ್ಲ ಮಾಹಿತಿಯನ್ನು ಒದಗಿಸುತ್ತದೆ. ತೇಗದ ಬೆಳವಣಿಗೆಗ ಸೂಕ್ತವಾದ ಪರಿಸ್ಥಿತಿ, ತೇಗದ ಸರಿಯಾದ ಜಾತಿಗಳನ್ನು ಹೇಗೆ ಆಯ್ಕೆ ಮಾಡನೇಕು ಮತ್ತು ನಿಮ್ಮ ಮರಗಳನ್ನು ನೆಟ್ಟು, ನಿರ್ವಹಣೆ ಮಾಡಲು ಉತ್ತಮ ಅಭ್ಯಾಸಗಳನ್ನು ಕಲಿಯುವಿರಿ. ಇದರ ಜೊತೆಗೆ, ಕೊಯ್ಲು ಮಾಡುವ ತಂತ್ರಗಳನ್ನೂ ಸಹ ಕಲಿಯುವಿರಿ.

ಸೈಟ್‌ ಆಯ್ಕೆಯಿಂದ ಹಿಡಿದು, ಮಣ್ಣಿನ ತಯಾರಿಕೆ, ಕೀಟ ಮತ್ತು ರೋಗ ನಿರ್ವಹಣೆ, ನೀರಾವರಿ ಮತ್ತು ಫಲೀಕರಣದವರೆಗೆ ಎಲ್ಲ ಮಾಹಿತಿ ಒಳಗೊಂಡಿದೆ. ತೇಗದ ಮರದ ಮಾರುಕಟ್ಟೆ ಬೇಡಿಕೆ, ಬೆಲೆ ಪ್ರವೃತ್ತಿ ಮತ್ತು ನಿಮ್ಮ ತೇಗದ ಮರದ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡುವುದು ಎಂಬುದರ ಕುರಿತು ನೀವು ತಿಳಿಯುವಿರಿ. 

ಕರ್ನಾಟಕದ ಉಡುಪಿ ಜಿಲ್ಲೆಯ ಪಾದೂರಿನ ರೈತ ಪುರುಷೋತ್ತಮ ಐತಾಳ್ ಅವರು ತಮ್ಮ ಆಸಕ್ತಿಯನ್ನು ಅನುಸರಿಸಿ, ಉದ್ಯೀಗವನ್ನು ತೊರೆದರು. ತೇಗದ ಕೃಷಿಯನ್ನು ಆರಂಭಿಸಿ ಅತ್ಯುತ್ತಮ ಯಶಸ್ಸು ಪಡೆದುಕೊಂಡರು. ತೇಗದ ಮರದ ಕೃಷಿಯಲ್ಲಿ ಅವರ ಅಪಾರ ಅನುಭವ ಮತ್ತು ಯಶಸ್ಸಿನೊಂದಿಗೆ, ಈ ಕೋರ್ಸ್‌ಗೆ ಉತ್ತಮ ಮಾರ್ಗದರ್ಶಕರೆನಿಸಿಕೊಂಡಿದ್ದಾರೆ. 

ಭಾರತದಲ್ಲಿ ತೇಗದ ಮರದ ಕೃಷಿಯ ಬಗ್ಗೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಕೋರ್ಸ್‌ ನಿಮಗೆ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುತ್ತದೆ. ಯಶಸ್ವಿ ತೇಗದ ತೋಟವನ್ನು ಪ್ರಾರಂಭಿಸಿ, ನಿರ್ವಹಣೆ ಮಾಡಲು ಹಾಗೂ ಲಾಭದಾಯಕ ಆದಾಯ ಗಳಿಸಲು ನೀವು ಸಾಧನಗಳನ್ನು ಹೊಂದಿರುತ್ತೀರಿ. ಇಂದೇ ನಮ್ಮೊಂದಿಗೆ ಸೇರಿಕೊಂಡು, ಯಶಸ್ವಿ ತೇಗದ ಕೃಷಿಕರಾಗಲು ರಹಸ್ಯಗಳನ್ನು ಅನ್‌ಲಾಕ್‌ ಮಾಡಿ! 

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ಲಾಭದಾಯಕ ಮರ ಕೃಷಿಯಲ್ಲಿ ಆಸಕ್ತಿ ಹೊಂದಿರುವ ರೈತ ಮತ್ತು ಭೂಮಾಲೀಕರು

  • ಲಾಭದಾಯಕ ಕೃಷಿ ಬಿಸಿನೆಸ್‌ ಅವಕಾಶವನ್ನು ಹುಡುಕುತ್ತಿರುವ ಹೂಡಿಕೆದಾರರು

  • ತೇಗದ ಮರದ ಉದ್ಯಮವನ್ನು ಅನ್ವೇಷಿಸುತ್ತಿರುವ ಉದ್ಯಮಿಗಳು

  • ಸುಸ್ಥಿರ ತೋಟದ ನಿರ್ವಹಣೆಯಲ್ಲಿ ಉತ್ಸುಕರಾಗಿರುವ ಪರಿಸರ ಪ್ರೇಮಿಗಳು

  • ತೇಗದ ಮರದ ಕೃಷಿ ಬಿಸಿನೆಸ್‌ನಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಭಾರತದಲ್ಲಿ ಯಶಸ್ವಿ ತೇಗದ ಮರದ ಕೃಷಿಗೆ ಸೂಕ್ತವಾದ ಪರಿಸ್ಥಿತಿಗಳನ್ನು ತಿಳಿಯಿರಿ

  • ತೇಗದ ಜಾತಿಗಳನ್ನು ಆಯ್ಕೆಮಾಡಲು, ನೆಡುವಿಕೆ ಮತ್ತು ನಿರ್ವಹಣೆಗೆ ಉತ್ತಮ ಅಭ್ಯಾಸಗಳನ್ನು ಕಲಿಯಿರಿ

  • ಪರಿಣಾಮಕಾರಿ ಸುರಕ್ಷತೆ, ಸಂಗ್ರಹಣೆ ಮತ್ತು ಬೆಲೆ ನಿರ್ವಹಣೆ ತಂತ್ರಗಳು

  • ಮಣ್ಣಿನ ತಯಾರಿಕೆ, ನೀರಾವರಿ ಮತ್ತು ಫಲೀಕರಣ ತಂತ್ರಗಳ ಬಗ್ಗೆ ತಿಳಿಯಿರಿ

  • ತೇಗದ ಮರದ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ರಫ್ತು ತಂತ್ರಗಳು

 

ಅಧ್ಯಾಯಗಳು 

  • ತೇಗದ (ಸಾಗುವಾನಿ) ಮರದ ಕೋರ್ಸ್‌ಗೆ ಪರಿಚಯ: ಈ ಮಾಡ್ಯೂಲ್‌ನಲ್ಲಿ ನಾವು ನಿಮಗೆ ಕೋರ್ಸ್‌ನ ಬಗ್ಗೆ ಪರಿಚಯ ಮತ್ತು ಕೋರ್ಸ್‌ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆ ತಿಳಿಯುವಿರಿ.
  • ಮಾರ್ಗದರ್ಶಕರ ಪರಿಚಯ: ಕೋರ್ಸ್‌ನಲ್ಲಿ ನಿಮಗೆ ಮಾರ್ಗದರ್ಶನ ನೀಡುವ ಬೋಧಕರ ಪರಿಚಯ ಮತ್ತು ಅವರು ನಡೆದು ಬಂದ ಹಾದಿಯ ಬಗ್ಗೆ ತಿಳಿಯುವಿರಿ. 
  • ತೇಗ ಕೃಷಿಯ ಪ್ರಯೋಜನಗಳು: ಈ ಮಾಡ್ಯೂಲ್‌ನಲ್ಲಿ ತೇಗ ಕೃಷಿ ಏಕೆ ಲಾಭದಾಯಕ ಎಂದು ನಾವು ಚರ್ಚಿಸುತ್ತೇವೆ. 
  • ತೇಗ ಕೃಷಿಗೆ ಹಣಕಾಸು ಆಯ್ಕೆಗಳು ಮತ್ತು ಹೂಡಿಕೆ ತಂತ್ರಗಳು: ಈ ಮಾಡ್ಯೂಲ್‌ನಲ್ಲಿ ತೇಗ ಕೃಷಿಗೆ ಬಂಡವಾಳ ಮತ್ತು ಭೂಮಿಯ ಅವಶ್ಯಕತೆಗಳ ಬಗ್ಗೆ ನೀವು ಕಲಿಯುವಿರಿ.
  • ತೇಗ ಸಾಗುವಳಿಗಾಗಿ ಸರ್ಕಾರದ ನಿಯಮ ಮತ್ತು ನೀತಿ: ಈ ಮಾಡ್ಯೂಲ್‌ನಲ್ಲಿ ತೇಗ ಕೃಷಿಗೆಗೆ ಲಭ್ಯವಿರುವ ಸರ್ಕಾರಿ ಸವಲತ್ತುಗಳು ಮತ್ತು ಒಪ್ಪಂದಗಳನ್ನು ನಾವು ಚರ್ಚಿಸುತ್ತೇವೆ.
  • ತೇಗ ಕೃಷಿಗಾಗಿ ಮಣ್ಣು ಪರೀಕ್ಷೆ ಮತ್ತು ವಿಶ್ಲೇಷಣೆ: ಈ ಮಾಡ್ಯೂಲ್‌ನಲ್ಲಿ ತೇಗ ಕೃಷಿಗೆ ಅಗತ್ಯವಿರುವ ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗಳ ಬಗ್ಗೆ ನೀವು ಕಲಿಯುವಿರಿ.
  • ತೇಗದ ವಿವಿಧ ಜಾತಿಗಳಿಗೆ ನಾಟಿ ತಂತ್ರಗಳು: ಈ ಘಟಕವು ತೇಗ ಕೃಷಿಗಾಗಿ ಭೂಮಿ ತಯಾರಿಕೆ ಮತ್ತು ನೆಡುವ  ತಂತ್ರಗಳನ್ನು ಒಳಗೊಂಡಿದೆ.
  • ಪೋಷಕಾಂಶ ನಿರ್ವಹಣೆ ಮತ್ತು ಫಲೀಕರಣ ತಂತ್ರಗಳು: ಈ ಮಾಡ್ಯೂಲ್‌ನಲ್ಲಿ, ತೇಗ ಕೃಷಿಗೆ ರಸಗೊಬ್ಬರ ಮತ್ತು ನೀರಿನ ಪೂರೈಕೆಯ ಅವಶ್ಯಕತೆಗಳನ್ನು ನಾವು ಚರ್ಚಿಸುತ್ತೇವೆ.
  • ಕಾರ್ಮಿಕ ನಿರ್ವಹಣೆ ಮತ್ತು ತರಬೇತಿ: ಈ ಮಾಡ್ಯೂಲ್‌ನಲ್ಲಿ, ತೇಗ ಕೃಷಿಗೆ ಕಾರ್ಮಿಕರ ಅವಶ್ಯಕತೆಗಳನ್ನು ನಾವು ಚರ್ಚಿಸುತ್ತೇವೆ.
  • ಕೊಯ್ಲು ತಂತ್ರ ಮತ್ತು ಅಭ್ಯಾಸಗಳು: ಈ ಮಾಡ್ಯೂಲ್ ತೇಗ ಕೃಷಿಗಾಗಿ ಕೊಯ್ಲು ಮತ್ತು ಅನುಮತಿ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ.
  • ಸಂಗ್ರಹಣೆ ಮತ್ತು ಪೂರೈಕೆ ಸರಪಳಿ ನಿರ್ವಹಣೆ: ಈ ಮಾಡ್ಯೂಲ್‌ನಲ್ಲಿ, ನಾವು ಸುರಕ್ಷತಾ ಕ್ರಮಗಳು, ಸಂಗ್ರಹಣೆ ತಂತ್ರಗಳು ಮತ್ತು ತೇಗದ ಉತ್ಪನ್ನಗಳ ಬೆಲೆ ತಂತ್ರಗಳ ಬಗ್ಗೆ ತಿಳಿಯುತ್ತೀರಿ.
  • ತೇಗದ ಮರದ ಉಪಯೋಗಗಳು: ಈ ಮಾಡ್ಯೂಲ್ ತೇಗದ ಮರದ ವಿವಿಧ ಉಪಯೋಗಗಳನ್ನು ಒಳಗೊಂಡಿದೆ.
  • ಮಾರುಕಟ್ಟೆ ಸಂಶೋಧನೆ ಮತ್ತು ವಿಶ್ಲೇಷಣೆ: ಈ ಮಾಡ್ಯೂಲ್‌ನಲ್ಲಿ, ನಾವು ತೇಗದ ಉತ್ಪನ್ನಗಳ ಮಾರುಕಟ್ಟೆ ಮತ್ತು ರಫ್ತು ತಂತ್ರಗಳನ್ನು ಚರ್ಚಿಸುತ್ತೇವೆ.
  • ವೆಚ್ಚ ವಿಶ್ಲೇಷಣೆ ಮತ್ತು ಬಜೆಟ್: ಈ ಮಾಡ್ಯೂಲ್‌ನಲ್ಲಿ, ತೇಗ ಕೃಷಿಯ ವೆಚ್ಚ ಮತ್ತು ಲಾಭದ ವಿಶ್ಲೇಷಣೆಯನ್ನು ನಾವು ಚರ್ಚಿಸುತ್ತೇವೆ.
  • ಮಾರ್ಗದರ್ಶಕರ ಸಲಹೆ: ಈ ಮಾಡ್ಯೂಲ್‌ನಲ್ಲಿ, ನಿಮಗೆ ಸಹಾಯದ ಅಗತ್ಯವಿರುವ ತೇಗ ಕೃಷಿಯ ಯಾವುದೇ ಅಂಶದ ಕುರಿತು ನೀವು ಮಾರ್ಗದರ್ಶಕರಿಂದ ಸಲಹೆಯನ್ನು ಸ್ವೀಕರಿಸುತ್ತೀರಿ.

 

ಸಂಬಂಧಿತ ಕೋರ್ಸ್‌ಗಳು