ಈ ಕೋರ್ಸ್ ಒಳಗೊಂಡಿದೆ
ಡ್ರ್ಯಾಗನ್ ಹಣ್ಣಿನ ಕೃಷಿಯು ಭಾರತದಲ್ಲಿ ಲಾಭದಾಯಕ ಬಿಸಿನೆಸ್ ಆಗಿದೆ. ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಸಹಾಯ ಮಾಡಲು ffreedom app ಡ್ರ್ಯಾಗನ್ ಹಣ್ಣಿನ ಬಿಸಿನೆಸ್ ಕುರಿತ ಈ ಕೋರ್ಸ್ ಅನ್ನು ಪರಿಚಯಿಸಿದೆ. ಈ ಕೋರ್ಸ್ ಮೂಲಕ ಡ್ರ್ಯಾಗನ್ ಹಣ್ಣಿನ ಕೃಷಿಯನ್ನು ಹೇಗೆ ಪ್ರಾರಂಭಿಸುವುದು ಎಂಬುದರ ಬಗ್ಗೆ ಜೊತೆಗೆ ತೋಟಗಾರಿಕೆ ಮತ್ತು ಲಾಭದಾಯಕ ಕೃಷಿಗೆ ಅಗತ್ಯವಾದ ಕೃಷಿ ತಂತ್ರಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ತಿಳಿಯಬಹುದಾಗಿದೆ.
ಡ್ರ್ಯಾಗನ್ ಹಣ್ಣಿನ ಕೃಷಿಯ ಮೂಲ ಪರಿಕಲ್ಪನೆಗಳ ಬಗ್ಗೆ, ಅದರ ಕೃಷಿ ತಂತ್ರಗಳು ಮತ್ತು ವ್ಯವಹಾರ ಮಾದರಿಗಳ ಬಗ್ಗೆ ಸಹ ಸಂಪೂರ್ಣ ಮಾಹಿತಿಯನ್ನು ನೀವು ತಿಳಿಯುತ್ತೀರಿ. ಡ್ರ್ಯಾಗನ್ ಹಣ್ಣಿನ ಕೃಷಿಯಲ್ಲಿ ವರ್ಷಗಳ ಅನುಭವ ಹೊಂದಿರುವ ಕೃಷಿ ಕ್ಷೇತ್ರದ ಖ್ಯಾತ ಮಾರ್ಗದರ್ಶಕರಾದ ಡಾ. ಜಿ ಕರುಣಾಕರನ್ ಅವರು ಈ ಕೋರ್ಸ್ ಮೂಲಕ ನಿಮಗೆ ಕಲಿಸುತ್ತಾರೆ.
ಮಣ್ಣಿನ ಸಿದ್ಧತೆ, ನೆಡುವಿಕೆ, ನೀರಾವರಿ, ಕೀಟ ನಿಯಂತ್ರಣ ಮತ್ತು ಕೊಯ್ಲು ಸೇರಿದಂತೆ ಡ್ರ್ಯಾಗನ್ ಹಣ್ಣಿನ ಕೃಷಿಯ ಎಲ್ಲಾ ಅಂಶಗಳನ್ನು ಸಹ ಈ ಕೋರ್ಸ್ ಒಳಗೊಂಡಿದೆ. ಇದರ ಜೊತೆಗೆ ಉತ್ಪನ್ನವನ್ನು ಮಾರಾಟ ಮಾಡಲು ಮತ್ತು ಉತ್ತಮ ಲಾಭವನ್ನು ಗಳಿಸಲು ಅಗತ್ಯವಿರುವ ಮಾರ್ಕೆಟಿಂಗ್ ತಂತ್ರಗಳನ್ನು ಸಹ ಇದು ಒಳಗೊಂಡಿದೆ. ಈ ಕೋರ್ಸ್ ಡ್ರ್ಯಾಗನ್ ಹಣ್ಣಿನ ಕೃಷಿ ಬಿಸಿನೆಸ್ ಬಗ್ಗೆ, ಅದರ ಪ್ರಸ್ತುತ ಟ್ರೆಂಡ್ ಗಳ ಬಗ್ಗೆ ಮತ್ತು ಅದನ್ನು ಹೇಗೆ ಲಾಭದಾಯಕವಾಗಿಸುವುದು ಎಂಬುದರ ಬಗ್ಗೆ ವಿವರವಾದ ಒಳನೋಟವನ್ನು ಒದಗಿಸುತ್ತದೆ.
ಡ್ರ್ಯಾಗನ್ ಹಣ್ಣಿನ ಕೃಷಿಯು ಒಂದು ಸವಾಲಿನ ಕೆಲಸವಾಗಿದೆ, ಆದರೆ ಸರಿಯಾದ ಮಾರ್ಗದರ್ಶನದೊಂದಿಗೆ, ಇದನ್ನು ಲಾಭದಾಯಕವಾಗಿಸಬಹುದಾಗಿದೆ. ತಮ್ಮದೇ ಸ್ವಂತ ಡ್ರ್ಯಾಗನ್ ಹಣ್ಣಿನ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವವರಿಗೆ ಡ್ರ್ಯಾಗನ್ ಹಣ್ಣಿನ ಕೃಷಿ ಕೋರ್ಸ್ ಅತ್ಯುತ್ತಮ ಆಯ್ಕೆಯಾಗಿದೆ. ಈ ಕೋರ್ಸ್‌ನಿಂದ ಪಡೆದ ಜ್ಞಾನದಿಂದ, ನೀವು ಸಹ ಆತ್ಮವಿಶ್ವಾಸದಿಂದ ನಿಮ್ಮದೇ ಸ್ವಂತ ಡ್ರ್ಯಾಗನ್ ಹಣ್ಣಿನ ಕೃಷಿಯನ್ನು ಪ್ರಾರಂಭಿಸಬಹುದಾಗಿದೆ ಮತ್ತು ಕೃಷಿ ಬಿಸಿನೆಸ್ ನಲ್ಲಿ ಯಶಸ್ವಿ ಉದ್ಯಮಿಯಾಗಬಹುದಾಗಿದೆ.
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಸುಸ್ಥಿರ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಮತ್ತು ಎಗ್ಸೋಟಿಕ್ ಹಣ್ಣುಗಳನ್ನು ಬೆಳೆಸುವ ಬಗ್ಗೆ ಕಲಿಯಲು ಬಯಸುವ ಯಾರಾದರೂ
ಕೃಷಿಯಲ್ಲಿ ಹೊಸ ವೃತ್ತಿಯನ್ನು ಹುಡುಕುತ್ತಿರುವ ಮತ್ತು ಡ್ರ್ಯಾಗನ್ ಹಣ್ಣಿನ ಮಾರುಕಟ್ಟೆ ಸಾಮರ್ಥ್ಯವನ್ನು ಅನ್ವೇಷಿಸಲು ಬಯಸುವ ಜನರು
ಡ್ರ್ಯಾಗನ್ ಹಣ್ಣಿನ ಫಾರ್ಮ್ ಅನ್ನು ಪ್ರಾರಂಭಿಸಲು ಮತ್ತು ಕೃಷಿಯ ಬಗ್ಗೆ ಜ್ಞಾನವನ್ನು ಪಡೆಯಲು ಆಸಕ್ತಿ ಹೊಂದಿರುವ ಉದ್ಯಮಿಗಳು
ತಮ್ಮ ಬೆಳೆಗಳನ್ನು ವೈವಿಧ್ಯಗೊಳಿಸಲು ಮತ್ತು ತಮ್ಮ ಬಂಡವಾಳಕ್ಕೆ ಲಾಭದಾಯಕ ಹಣ್ಣನ್ನು ಸೇರಿಸಲು ಬಯಸುವ ರೈತರು
ಡ್ರ್ಯಾಗನ್ ಹಣ್ಣಿನ ಪೌಷ್ಟಿಕಾಂಶದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ವ್ಯಕ್ತಿಗಳು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಅದರ ಬೆಳವಣಿಗೆ, ಮಣ್ಣಿನ ಅವಶ್ಯಕತೆಗಳು ಸೇರಿದಂತೆ ಡ್ರ್ಯಾಗನ್ ಹಣ್ಣಿನ ಸಸ್ಯದ ಮಾರ್ಗದರ್ಶಿ
ಡ್ರ್ಯಾಗನ್ ಹಣ್ಣಿನ ಸಸ್ಯಗಳ ಮೇಲೆ ಪರಿಣಾಮ ಬೀರುವ ಕೀಟಗಳು ಮತ್ತು ರೋಗಗಳನ್ನು ನಿರ್ವಹಿಸುವ ತಂತ್ರಗಳು
ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸಲು ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದು
ಪ್ರಸ್ತುತ ಟ್ರೆಂಡ್ ಗಳು ಮತ್ತು ಗ್ರಾಹಕರ ಆದ್ಯತೆಗಳನ್ನು ಒಳಗೊಂಡಂತೆ ಡ್ರ್ಯಾಗನ್ ಹಣ್ಣಿನ ಮಾರುಕಟ್ಟೆಯ ಒಳನೋಟಗಳು
ಕೊಯ್ಲು ಮತ್ತು ಕೊಯ್ಲು ನಂತರದ ನಿರ್ವಹಣೆಗೆ ಸಲಹೆಗಳು
ಅಧ್ಯಾಯಗಳು