ಈ ಕೋರ್ಸ್ ಒಳಗೊಂಡಿದೆ
ಹೈನುಗಾರಿಕೆ ಒಂದು ಲಾಭದಾಯಕ ಉದ್ಯಮ. ಭಾರತ ಪೂರ್ವಜರ ಕಾಲದಿಂದಲೂ ಹಸುಗಳ ಬಗ್ಗೆ ವಿಶೇಷ ಅಕ್ಕರೆ ಹೊಂದಿರುವ ದೇಶ. ಭಾರತ ಹಸುಗಳನ್ನು ಪೂಜ್ಯ ಭಾವನೆಯಿಂದ ನೋಡುವ ದೇಶ. ಭಾರತದ ಬಹುತೇಕ ರೈತರು ತಮ್ಮ ಮನೆಗಳಲ್ಲಿ ಹಸುಗಳ ಸಾಕಣೆಯನ್ನು ಮಾಡಿರುತ್ತಾರೆ. ಹೈನುಗಾರಿಕೆ ರೈತರಿಗೆ ಉತ್ತಮ ಆದಾಯವನ್ನು ತಂದು ಕೊಡುವ ಮೂಲಕ ಬದುಕು ಕಟ್ಟಿಕೊಳ್ಳಲು ನೆರವು ನೀಡುತ್ತದೆ. ಪ್ರತಿ ದಿನವೂ ಸಹ ಹಸುಗಳು ಹಾಲನ್ನು ನೀಡುವುದರಿಂದ ರೈತರು ಪ್ರತಿ ನಿತ್ಯವೂ ಸಹ ಹಾಲನ್ನು ಮಾರಾಟ ಮಾಡಿ ಆದಾಯಗಳಿಸಬಹುದು.
ಹೈನುಗಾರಿಕೆಯಲ್ಲಿ ಭಾರತ ಇಂದು ಸುಮಾರು 10 ಲಕ್ಷದ 52 ಸಾವಿರ ಕೋಟಿಯಷ್ಟು ಬೃಹತ್ ಗಾತ್ರದ ಮಾರುಕಟ್ಟೆಯನ್ನು ಹೊಂದಿದೆ. ಭಾರತ ಹಾಲು ಉತ್ಪಾದನೆಯಲ್ಲಿ ವಿಶ್ವದ ನo 1 ರಾಷ್ಟ್ರವಾಗಿದೆ. ಹಾಗು ವಿಶ್ವದಲ್ಲಿ ಹೈನುಗಾರಿಕೆಯ ಮಾರುಕಟ್ಟೆಯ ಗಾತ್ರವನ್ನು ನೋಡುವುದಾದರೆ ಸುಮಾರು 50 ಲಕ್ಷ ಕೋಟಿಯಷ್ಟು ಬೃಹತ್ತಾಗಿದೆ. ಆದರೆ ಭಾರತ ಹಾಲಿನ ಉತ್ಪನ್ನಗಳ ರಫ್ತಿನ ಮಾಹಿತಿ ನೋಡುವುದಾದರೆ ಕೇವಲ 1500 ಕೋಟಿ ಮೊತ್ತದ ಉತ್ಪನ್ನಗಳನ್ನಷ್ಟೇ ಸಾಗಿಸುತ್ತಿದೆ.
ಅಂದರೆ, ಪ್ರಪಂಚದ ಮಾರುಕಟ್ಟೆಯನ್ನು ಪ್ರವೇಶಿಸಿ ಯಶಸ್ಸು ಸಾಧಿಸಲು ಬಹಳಷ್ಟು ಅವಕಾಶವಿದೆ. ಇಂದಿನ ಹಲವು ತಂತ್ರಜ್ಞಾನವನ್ನು ಹೈನುಗಾರಿಕೆಯಲ್ಲಿ ಸಮರ್ಥವಾಗಿ ಬಳಸಿ, ಒಂದು ಯಶಸ್ವಿ ಉದ್ಯಮವನ್ನು ಕಟ್ಟಿ ಅದರಿಂದ ಲಕ್ಷಗಟ್ಟಲೆ ಸಂಪಾದನೆ ಮಾಡುವುದು ಇಂದು ಅಸಾಧ್ಯದ ಕೆಲಸವೇನು ಅಲ್ಲ. ಈ ಅಂಶಗಳನ್ನು ಗಮನಿಸಿ ffreedom ಅಪ್ಲಿಕೇಶನ್ ಹೈನುಗಾರಿಕೆ ಕುರಿತ ಸಮಗ್ರ ಕೋರ್ಸ್ ಅನ್ನು ಸಿದ್ಧಪಡಿಸಿದೆ. ನೀವೂ ಸಹ ಈ ಕೋರ್ಸ್ ಮೂಲಕ ಉಪಯುಕ್ತ ಮಾಹಿತಿಯನ್ನು ತಿಳಿದುಕೊಳ್ಳಬಹುದು.